‘ನಿಮ್ಮನ್ನು ಅರೆಸ್ಟ್‌ ಮಾಡ್ತೀವಿ’, ನಿಮಗು ಬರಬಹುದು ಇಂತಹ ಫೋನ್‌ ಕರೆ, ಶಿವಮೊಗ್ಗದ ಶಿಕ್ಷಕಿ ಮಾಡಿದ್ದೇನು?

ಶಿವಮೊಗ್ಗ: ಬ್ಯಾಂಕ್‌ ಖಾತೆಯಿಂದ ಅಕ್ರಮವಾಗಿ ಹಣ ವರ್ಗಾವಣೆಯಾಗಿದ್ದು ಈ ಕುರಿತು ತನಿಖೆ ನಡೆಸಬೇಕು, 45 ದಿನ ನಿಮ್ಮನ್ನು ಅರೆಸ್ಟ್‌ (Digital Arrest) ಮಾಡಬೇಕು ಎಂದು ಬೆದರಿಸಿ ಶಿವಮೊಗ್ಗದ ಶಿಕ್ಷಕಿಯೊಬ್ಬರಿಗೆ ₹22.20 ಲಕ್ಷ ವಂಚಿಸಲಾಗಿದೆ.

ಶಿವಮೊಗ್ಗದ ಶಿಕ್ಷಕಿಗೆ ಕರೆ ಮಾಡಿದ ಅಪರಿಚಿತನೊಬ್ಬ ನಿಮ್ಮ ಸಿಮ್‌ ಬ್ಲಾಕ್‌ ಮಾಡಲಾಗುತ್ತಿದೆ. ಕೂಡಲೆ ಮುಂಬೈ ಪೊಲೀಸರಿಗೆ ವಾಟ್ಸಪ್‌ ಕರೆ ಮಾಡಿ ಎಂದು ನಂಬರ್‌ ನೀಡಿದ್ದ. ಆತಂಕಗೊಂಡ ಶಿಕ್ಷಕಿ ವಾಟ್ಸಪ್‌ ಕರೆ ಮಾಡಿದಾಗ ಮುಂಬೈನ ಕೊಲಾಬಾದ ಸಬ್‌ ಇನ್ಸ್‌ಪೆಕ್ಟರ್‌ ವಿಜಯ್‌ ಖನ್ನಾ ಎಂದು ವ್ಯಕ್ತಿಯೊಬ್ಬ ಮಾತನಾಡಿದ್ದ. ‘ನಿಮ್ಮ ಬ್ಯಾಂಕ್‌ ಖಾತೆಯಿಂದ ಅಕ್ರಮವಾಗಿ ಹಣ ವರ್ಗಾವಣೆಯಾಗಿದೆ. ಈ ಸಂಬಂಧ ನಿಮ್ಮನ್ನು 45 ದಿನ ಬಂಧಿಸಬೇಕಾಗುತ್ತದೆʼ ಎಂದು ಹೆದರಿಸಿ ಆನ್‌ಲೈನ್‌ನಲ್ಲಿ ವಿಚಾರಣೆ ಎದುರಿಸುವಂತೆ ತಿಳಿಸಿದ್ದ.

ಸ್ವಲ್ಪ ಸಮಯದ ಬಳಿಕ ಡಿಸಿಪಿ ಸಿಂಗ್‌ ಎಂಬಾತ ವಿಡಿಯೋ ಕರೆ ಮೂಲಕ ಶಿವಮೊಗ್ಗದ ಶಿಕ್ಷಕಿಯ ವಿಚಾರಣೆ ನಡೆಸಿದ್ದ. ‘ನಿಮ್ಮ ಬ್ಯಾಂಕ್‌ ಖಾತೆಯಲ್ಲಿರುವ ಹಣವನ್ನು ನಾವು ಸೂಚಿಸಿದ ಬ್ಯಾಂಕ್‌ ಖಾತೆಗಳಿಗೆ ವರ್ಗಾಯಿಸಿ. ವಿಚಾರಣೆ ಮುಗಿದ ಮೇಲೆ ನೀವು ನಿರಪರಾಧಿ ಎಂದು ಕಂಡು ಬಂದರೆ ನಿಮ್ಮ ಹಣ ಹಿಂತಿರುಗಿಸುತ್ತೇವೆ. ಇಲ್ಲವಾದಲ್ಲಿ ನಿಮ್ಮನ್ನ ಬಂಧಿಸಬೇಕಾಗುತ್ತದೆ’ ಎಂದು ಎಚ್ಚರಿಸಿದ್ದ. ಹೆದರಿದ ಶಿಕ್ಷಕಿ ₹22.20 ಲಕ್ಷ ಹಣವನ್ನು ವರ್ಗಾವಣೆ ಮಾಡಿದ್ದರು.

ಹಣ ವರ್ಗಾವಣೆ ನಂತರ ಕರೆ ಬಾರದೆ ಇದ್ದಾಗ ಅನುಮಾನಗೊಂಡು ಶಿಕ್ಷಕಿಯೇ ಆ ನಂಬರ್‌ಗೆ ಕರೆ ಮಾಡಿದ್ದರು. ಆಗ ಆ ಮೊಬೈಲ್‌ ನಂಬರ್‌ ಸ್ವಿಚ್‌ ಆಫ್‌ ಎಂದು ಬಂದಿತ್ತು. ಈ ಹಿನ್ನೆಲೆ ಶಿಕ್ಷಕಿ ಶಿವಮೊಗ್ಗದ ಸಿಇಎನ್‌ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

Kalleshwara-Enterprises.webp

Online-Fraud-In-Shimoga

ಇದನ್ನೂ ಓದಿ » ಕರ್ನಾಟಕದಲ್ಲಿ ಮುಂದುವರೆದ ಮಳೆ, ಶಿವಮೊಗ್ಗ ಜಿಲ್ಲೆಗೆ ಇವತ್ತೂ ಅಲರ್ಟ್‌ – ಹವಾಮಾನ ವರದಿ

Digital Arrest

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ. ವಾಟ್ಸಪ್‌ ನಂಬರ್: 7411700200
Kalleshwara-Enterprises.webp

Leave a Comment