ಶಿವಮೊಗ್ಗ ರೈಲ್ವೆ ನಿಲ್ದಾಣ, ಅನುಮಾನದ ಮೇಲೆ ಮಹಿಳೆ ವಿಚಾರಣೆ, ಸಖಿ ಕೇಂದ್ರಕ್ಕೆ ರವಾನೆ, ಏನಿದು ಕೇಸ್‌?

ಶಿವಮೊಗ್ಗ: ಪತಿಯ ಕಿರುಕುಳ ತಾಳದೆ ರಾಜ್ಯ ಬಿಟ್ಟು ಬಂದಿದ್ದ 28 ವರ್ಷದ ಮಹಿಳೆಯೊಬ್ಬರನ್ನು ಶಿವಮೊಗ್ಗದ ರೈಲ್ವೆ (Railway) ಪೊಲೀಸರು ರಕ್ಷಣೆ ಮಾಡಿದ್ದಾರೆ.

ಆಂಧ್ರದ ಕಡಪ ಜಿಲ್ಲೆಯ 28 ವರ್ಷದ ಮಹಿಳೆ, ರೈಲಿನಲ್ಲಿ ಶಿವಮೊಗ್ಗಕ್ಕೆ ಆಗಮಿಸಿದ್ದರು. ಅನುಮಾನದ ಮೇರೆಗೆ ನಿಲ್ದಾಣದಲ್ಲಿ ರೈಲ್ವೆ ಪೊಲೀಸರು ಆಕೆಯ ವಿಚಾರಣೆ ಮಾಡಿದಾಗ ಪತಿಯ ಕಿರುಕುಳದ ಕುರಿತು ಮಾಹಿತಿ ನೀಡಿದ್ದರು. ಮದ್ಯ ಸೇವಿಸಿ ಬಂದು ಪತಿ ತನ್ನ ಮೇಲೆ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡುತ್ತಿದ್ದ. ಇದರಿಂದ ಮನನೊಂದು ಊರು ಬಿಟ್ಟು ಬಂದಿರುವುದಾಗಿ ಆಕೆ ತಿಳಿಸಿದ್ದಾರೆ.

ಪತಿ ಮತ್ತು ಮಗುವನ್ನು ತೊರೆದು ಮಹಿಳೆ ರೈಲಿನಲ್ಲಿ ಶಿವಮೊಗ್ಗಕ್ಕೆ ಆಗಮಿಸಿದ್ದರು. ಆಕೆಯನ್ನು ವಶಕ್ಕೆ ಪಡೆದು ಸಖಿ ಸಾಂತ್ವನ ಕೇಂದ್ರಕ್ಕೆ ದಾಖಲು ಮಾಡಲಾಗಿದೆ.

251025-Woman-rescued-at-Shimoga-Railway-Station.webp

ಇದನ್ನೂ ಓದಿ » ಶಿವಮೊಗ್ಗದಲ್ಲಿ ಕ್ರಿಕೆಟರ್‌ ಮಯಾಂಕ್‌, ಕರುಣ್‌ ನಾಯರ್‌, ಶ್ರೇಯಸ್‌ ಗೋಪಾಲ್‌, ಅರ್ಜುನ್‌ ತೆಂಡೂಲ್ಕರ್‌ ಪ್ರಾಕ್ಟೀಸ್‌

251025-Woman-rescued-at-Shimoga-Railway-Station.webp

Leave a Comment