ಶಿವಮೊಗ್ಗದಲ್ಲಿ ಕ್ರಿಕೆಟರ್‌ ಮಯಾಂಕ್‌, ಕರುಣ್‌ ನಾಯರ್‌, ಶ್ರೇಯಸ್‌ ಗೋಪಾಲ್‌, ಅರ್ಜುನ್‌ ತೆಂಡೂಲ್ಕರ್‌ ಪ್ರಾಕ್ಟೀಸ್‌

 ಶಿವಮೊಗ್ಗ  LIVE 

ಶಿವಮೊಗ್ಗ: ಕರ್ನಾಟಕ ಮತ್ತು ಗೋವಾ ತಂಡಗಳ ಮಧ್ಯೆ ರಣಜಿ ಪಂದ್ಯಕ್ಕೆ ಶಿವಮೊಗ್ಗ ಕೆಎಸ್‌ಸಿಎ ಮೈದಾನ ಸಜ್ಜಾಗಿದೆ. ಉಭಯ ತಂಡದ ಆಟಗಾರರು (Cricketers) ಈಗಾಗಲೇ ಶಿವಮೊಗ್ಗಕ್ಕೆ ಆಗಮಿಸಿದ್ದು ಕಳೆದ ಎರಡು ದಿನದಿಂದ ನೆಟ್‌ ಪ್ರಾಕ್ಟಿಸ್‌ ಮಾಡುತ್ತಿದ್ದಾರೆ.

ತಂಡದಲ್ಲಿ ಯಾರೆಲ್ಲ ಇದ್ದಾರೆ?

ಕರ್ನಾಟಕ ತಂಡ

ಮಯಾಂಕ್‌ ಅಗರ್‌ವಾಲ್‌ (ನಾಯಕ), ಕರುಣ್‌ ನಾಯರ್‌ (ಉಪ ನಾಯಕ), ಸ್ಮರಣ್‌.ಆರ್‌, ಶ್ರೀಜಿತ್‌ (ವಿಕೆಟ್‌ ಕೀಪರ್‌), ಶ್ರೇಯಸ್‌ ಗೋಪಾಲ್‌, ವಿದ್ವತ್‌ ಕಾವೇರಪ್ಪ, ಯಶೋವರ್ಧನ್‌, ಅಭಿಲಾಷ್‌ ಶೆಟ್ಟಿ, ವಂಕಟೇಶ್‌.ಎಂ, ನಿಕಿನ್‌ ಜೋಸ್‌.ಎಸ್.ಜೆ, ಅಭಿನವ್‌ ಮನೋಹರ್‌, ಕೃತಿಕ್‌ ಕೃಷ್ಣ (ವಿಕೆಟ್‌ ಕೀಪರ್‌), ಅನೀಶ್‌.ಕೆ.ವಿ, ಮಹಸಿನ್‌ ಖಾನ್‌, ಶಿಖರ್‌ ಶೆಟ್ಟಿ.

Sigandur-Janthre-2026-scaled.

ಗೋವಾ ತಂಡ

ದೀಪರಾಜ್‌ ಗಾಂವ್ಕರ್‌ (ನಾಯಕ), ಲಲಿತ್‌ ಯಾದವ್‌, ಸಮರ್‌ ದುಬಾಷಿ (ವಿಕೆಟ್‌ ಕೀಪರ್‌), ಸುಯಾಷ್‌ ಪ್ರಭುದೇಸಾಯಿ, ಮಂಥನ್‌, ಕಶ್ಯಾಪ್‌ ಬಾಕ್ಲೆ, ದರ್ಶನ್‌ ಮಿಸಲಾಲ್‌, ಮೋಹಿತ್‌ ರೇಡ್ಕರ್‌, ಅಭಿನವ್‌ ತೇಜ್ರಾಣಾ, ಅರ್ಜುನ್‌ ತೆಂಡೂಲ್ಕರ್‌, ಹಿರಾಂಪ್‌ ಪರಾಬ್‌, ವಿಕಾಸ್‌ ಸಿಂಗ್‌, ಇಶಾನ್‌ ಗಡೇಕರ್‌, ರಾಜಶೇಖರ್‌ ಹರಿಕಾಂತ್‌, ವಿಜೇಶ್‌ ಪ್ರಭು ದೇಸಾಯಿ, ವಾಸೂಕಿ ಕೌಶಿಕ್‌, ಸ್ನೇಹಲ್‌.

241025-Mayank-Agarwal-Karun-Nair-and-Arjun-Tendulkar-practise-in-Shimoga-KSCA-Stadium-1.webp

ಎರಡು ದಿನದಿಂದ ನೆಟ್‌ ಪ್ರಾಕ್ಟಿಸ್‌

ಉಭಯ ತಂಡಗಳ ಆಟಗಾರರು ಕಳೆದ ಎರಡು ದಿನದಿಂದ ನವುಲೆಯ ಕೆಎಸ್‌ಸಿಎ ಸ್ಟೇಡಿಯಂನಲ್ಲಿ ನೆಟ್‌ ಪ್ರಾಕ್ಟಿಸ್‌ ಮಾಡುತ್ತಿದ್ದಾರೆ. ಸ್ಟೇಡಿಯಂ ಪ್ರವೇಶ ದ್ವಾರದಲ್ಲಿಯೇ ಬ್ಯಾಟಿಂಗ್‌ ನೆಟ್‌ಗಳನ್ನು ಹಾಕಲಾಗಿದೆ. ಇನ್ನು, ಒಳ ಭಾಗದಲ್ಲಿ ಬೌಲಿಂಗ್‌ ಮತ್ತು ಆಟಗಾರರ ವ್ಯಾಯಾಮಕ್ಕೆ ಅವಕಾಶ ಕಲ್ಪಿಸಲಾಗಿದೆ.

241025-Mayank-Agarwal-Karun-Nair-and-Arjun-Tendulkar-practise-in-Shimoga-KSCA-Stadium-1.webp

ಶಿವಮೊಗ್ಗ ಪಿಚ್‌ ರೆಡಿ

ಅ.25 ರಿಂದ ಅ.28ವರಗೆ ನಡೆಯಲಿರುವ ಪಂದ್ಯಾವಳಿಗೆ ಶಿವಮೊಗ್ಗ ಪಿಚ್‌ ರೆಡಿಯಾಗಿದೆ. ಕಳೆದ ಕೆಲವು ದಿನದಿಂದ ಮಳೆಯಾಗುತ್ತಿರುವ ಹಿನ್ನೆಲೆ ಆಟಕ್ಕೆ ತೊಂದರೆ ಆಗದಂತೆ ಕೆಎಸ್‌ಸಿಎ ಕ್ರಮ ವಹಿಸಿದೆ. ನವುಲೆ ಕೆರೆ ತುಂಬಿದರೂ ನೀರು ಮೈದಾನಕ್ಕೆ ಹರಿಯದೇ ಹೊರಗೆ ಹೋಗಲು ವ್ಯವಸ್ಥೆ ಮಾಡಲಾಗಿದೆ.

ಪಂದ್ಯಕ್ಕೆ ಮಳೆಯ ಆತಂಕ ಇದ್ದರೂ ಪರಿಸ್ಥಿತಿ ನಿಭಾಯಿಸಲು ಎರಡು ಸೂಪರ್ ಸಾಪರ್ ಯಂತ್ರ, 20 ಗ್ರೌಂಡ್ಸ್‌ಮನ್‌ಗಳನ್ನು ನಿಯೋಜಿಸಲಾಗಿದೆ.

  • ಹೆಚ್.ಎಸ್. ಸದಾನಂದ, ಕೆಎಸ್‌ಸಿಎ ವಲಯ ಸಂಚಾಲಕ

RED-LINE-

ಪಂದ್ಯದ ಟೈಮಿಂಗ್‌ ಏನು?

241025-Mayank-Agarwal-Karun-Nair-and-Arjun-Tendulkar-practise-in-Shimoga-KSCA-Stadium-1.webp

ಕರ್ನಾಟಕ ವರ್ಸಸ್‌ ಗೋವಾ ರಣಜಿ ಪಂದ್ಯಾವಳಿಯು ಅ.25ರಂದು ಬೆಳಗ್ಗೆ 8.45ಕ್ಕೆ ಉದ್ಘಾಟನೆಯಾಗಲಿದೆ. ಬೆಳಗ್ಗೆ 9.30 ರಿಂದ ಮಧ್ಯಾಹ್ನ 12 ಗಂಟೆವರೆಗೆ ಮೊದಲ ಸೆಷನ್‌ ನಡೆಯಲಿದೆ. ಊಟದ ವಿರಾಮ ಇದ್ದು 12.40 ರಿಂದ 2.40ರವರೆಗೆ ಎರಡನೆ ಸೆಷನ್‌ ಪಂದ್ಯಾವಳಿ. ಟೀ ಬ್ರೇಕ್‌ ಬಳಿಕ ಮಧ್ಯಾಹ್ನ 3 ಗಂಟೆಯಿಂದ ಸಂಜೆ 4.30ರವರೆಗೆ ಕೊನೆಯ ಸೆಷನ್‌ ಪಂದ್ಯಾವಳಿ ನಡೆಯಲಿದೆ.

ಇದನ್ನೂ ಓದಿ » ಶಿವಮೊಗ್ಗದಲ್ಲಿ ನಾಳೆಯಿಂದ ರಣಜಿ ಕ್ರಿಕೆಟ್‌, ಕರ್ನಾಟಕ vs ಗೋವಾ ಹಣಾಹಣಿಗೆ ನವುಲೆ ಅಖಾಡ ರೆಡಿ

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment