ಏಪ್ರಿಲ್‌ನಲ್ಲಿ ಮದುವೆ, ಅಕ್ಟೋಬರ್‌ನಲ್ಲಿ ವಿಷ ಸೇವಿಸಿ ಗೃಹಿಣಿ ಸಾವು, ಆರು ತಿಂಗಳಲ್ಲಿ ಆಗಿದ್ದೇನು?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ: ಮದುವೆಯಾಗಿ (Marriage) ಆರು ತಿಂಗಳಿಗೆ ಪತಿ ಮತ್ತು ಅತ್ತೆಯ ಕಿರುಕುಳಕ್ಕೆ ಮನನೊಂದು ವಿಷ ಸೇವಿಸಿದ್ದ ಗೃಹಿಣಿ ಮೆಗ್ಗಾನ್‌ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.

ಶಿವಮೊಗ್ಗದ ಕುರಂಬಳ್ಳಿ ಬಳಿಯ ಗುಜಾನುಮಕ್ಕಿಯಲ್ಲಿ ಘಟನೆ ನಡೆದಿದೆ. ಮಾಲಾಶ್ರೀ(23) ಮೃತಪಟ್ಟ ಗೃಹಿಣಿ. ಅ.19 ರಂದು ವಿಷ ಸೇವಿಸಿದ್ದ ಮಾಲಾಶ್ರೀಯನ್ನ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಫಲಿಸದೆ ಮೂರು ದಿನದ ಬಳಿಕ ಆಕೆ ಮೃತಪಟ್ಟಿದ್ದಾರೆ.

ಪತಿ, ಅತ್ತೆಯ ಕಿರುಕುಳದ ಆರೋಪ

ಸಾಗರ ತಾಲೂಕು ಕಟ್ಟಿನಕಾರು ಗ್ರಾಮದ ಯಡಮನೆಯ ವಾಸಿ ಮಾಲಾಶ್ರೀ 2025ರ ಏಪ್ರಿಲ್ 23 ರಂದು ಆಶೋಕ್ ಅವರನ್ನು ವಿವಾಹವಾಗಿದ್ದರು. ಮದುವೆ ಆದಾಗಿನಿಂದ ಪತಿ ಮತ್ತು ಅತ್ತೆ ಕಿರುಕುಳ ನೀಡುತ್ತಿದ್ದರು ಎಂದು ಆಕೆ ಕುಟುಂಬದವರ ಬಳಿ ಹೇಳಿಕೊಂಡಿದ್ದರು ಎಂದು ಆರೋಪಿಸಲಾಗಿದೆ. ಇದೆ ಕಾರಣಕ್ಕೆ ಮನನೊಂದು ಆಕೆ ಗಂಡನ ಮನೆಯಲ್ಲೆ ವಿಷ ಸೇವಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಮೃತಪಟ್ಟ ವಿಚಾರ ತಿಳಿಸಿರಲಿಲ್ಲ

ಘಟನೆ ಸಂಬಂಧ ಮಾಲಾಶ್ರೀ ತಂದೆ ಗಣಪತಿ ದೂರು ನೀಡಿದ್ದಾರೆ. ‘ತಮ್ಮ ಮಗಳಿಗೆ ಆರೋಗ್ಯ ಸರಿ ಇಲ್ಲದ ಕಾರಣ ಮೆಗ್ಗಾನ್‌ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಅಳಿಯ ಕರೆ ಮಾಡಿ ತಿಳಿಸಿದ್ದ. ಎರಡು ದಿನದ ಬಳಿಕ ಆರೋಗ್ಯ ವಿಚಾರಿಸಲು ಕರೆ ಮಾಡಿದಾಗ ಐಸಿಯುನಲ್ಲಿ ಇದ್ದಾಳೆ ಎಂದು ಹೇಳಿದ್ದ. ಆತಂಕದಿಂದ ಕುಟುಂಬದವರು ಮೆಗ್ಗಾನ್‌ ಆಸ್ಪತ್ರೆಗೆ ಬಂದಾಗ ಮಗಳು ಮೃತಪಟ್ಟಿದ್ದಾಳೆ ಎಂದು ಫೋನಿನಲ್ಲಿ ತಿಳಿಸಿದ್ದʼ ಎಂದು ಆರೋಪಿಸಿದ್ದಾರೆ.

Married-lady-malashree-succumbed-at-suduru-in-Shimoga-taluk

ಸದ್ಯ ಮಾಲಾಶ್ರೀ ಪತಿ ಅಶೋಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಘಟನೆ ಸಂಬಂಧ ಕುಂಸಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ » ಶಿವಮೊಗ್ಗ ರೈಲ್ವೆ ನಿಲ್ದಾಣ, ಅನುಮಾನದ ಮೇಲೆ ಮಹಿಳೆ ವಿಚಾರಣೆ, ಸಖಿ ಕೇಂದ್ರಕ್ಕೆ ರವಾನೆ, ಏನಿದು ಕೇಸ್‌?

Marriage

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ

ಈಗಲೇ ಕರೆ ಮಾಡಿ
9972194422

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : October 25, 2025

ಕೂಡ್ಲಿಯಲ್ಲಿ ಸಾವಿರ ಸಾವಿರ ಜನರಿಂದ ಪುಣ್ಯ ಸ್ನಾನ, ಹೇಗಿದೆ ಈ ಬಾರಿ ಜಾತ್ರೆ?

ಕೂಡ್ಲಿಯಲ್ಲಿ ಸಾವಿರ ಸಾವಿರ ಜನರಿಂದ ಪುಣ್ಯ ಸ್ನಾನ, ಹೇಗಿದೆ ಈ ಬಾರಿ ಜಾತ್ರೆ?

ಶಿವಮೊಗ್ಗದಲ್ಲಿ ಯುಗಾದಿ ಚಂದ್ರ ದರ್ಶನ, ಜನರಿಂದ ಪೂಜೆ, ಶುಭಾಶಯ ವಿನಿಮಯ

ಶಿವಮೊಗ್ಗದಲ್ಲಿ ಯುಗಾದಿ ಚಂದ್ರ ದರ್ಶನ, ಜನರಿಂದ ಪೂಜೆ, ಶುಭಾಶಯ ವಿನಿಮಯ

ಇವತ್ತು ಎಲ್ಲೆಲ್ಲಿ ಎಷ್ಟಿದೆ ಅಡಿಕೆ ರೇಟ್‌ | 20 ಮಾರ್ಚ್‌ 2026 | ಅಡಿಕೆ ಧಾರಣೆ

ಇವತ್ತು ಎಲ್ಲೆಲ್ಲಿ ಎಷ್ಟಿದೆ ಅಡಿಕೆ ರೇಟ್‌ | 20 ಮಾರ್ಚ್‌ 2026 | ಅಡಿಕೆ ಧಾರಣೆ

ಕಾರು, ಬೈಕ್‌ ಡಿಕ್ಕಿ, ಯುವಕ ದಾರುಣ ಸಾವು, ಹೇಗಾಯ್ತು ಘಟನೆ?

ಕಾರು, ಬೈಕ್‌ ಡಿಕ್ಕಿ, ಯುವಕ ದಾರುಣ ಸಾವು, ಹೇಗಾಯ್ತು ಘಟನೆ?

ಉಷಾ ನರ್ಸಿಂಗ್‌ ಹೋಂ ಸಿಗ್ನಲ್‌ನಲ್ಲಿನ ಅಪಘಾತ, ಸಿಸಿಟಿವಿ ದೃಶ್ಯ ಲಭ್ಯ, ಇಲ್ಲಿದೆ ಡಿಕ್ಕಿಯ ಕಂಪ್ಲೀಟ್‌ ಡಿಟೇಲ್ಸ್‌

ಉಷಾ ನರ್ಸಿಂಗ್‌ ಹೋಂ ಸಿಗ್ನಲ್‌ನಲ್ಲಿನ ಅಪಘಾತ, ಸಿಸಿಟಿವಿ ದೃಶ್ಯ ಲಭ್ಯ, ಇಲ್ಲಿದೆ ಡಿಕ್ಕಿಯ ಕಂಪ್ಲೀಟ್‌ ಡಿಟೇಲ್ಸ್‌

ರಂಗಾಯಣದಲ್ಲಿ ನಾಟಕ ನಿರ್ದೇಶಕ, ಸಹಾಯಕ ನಿರ್ದೇಶಕರಿಂದ ಅರ್ಜಿ ಆಹ್ವಾನ

ರಂಗಾಯಣದಲ್ಲಿ ನಾಟಕ ನಿರ್ದೇಶಕ, ಸಹಾಯಕ ನಿರ್ದೇಶಕರಿಂದ ಅರ್ಜಿ ಆಹ್ವಾನ

ಭದ್ರಾವತಿಯ 3 ಮಹಿಳೆಯರು ಸೇರಿ 6 ಮಂದಿಗೆ 2 ವರ್ಷ ಜೈಲು, ₹1.74 ಲಕ್ಷ ದಂಡ, ಯಾಕೆ?

ಭದ್ರಾವತಿಯ 3 ಮಹಿಳೆಯರು ಸೇರಿ 6 ಮಂದಿಗೆ 2 ವರ್ಷ ಜೈಲು, ₹1.74 ಲಕ್ಷ ದಂಡ, ಯಾಕೆ?

ಮೇ 1ರಿಂದ ಶಿವಮೊಗ್ಗ – ಬೆಂಗಳೂರು ಇಂಡಿಗೋ ವಿಮಾನ ರದ್ದು, ಕಾರಣವೇನು?

ಮೇ 1ರಿಂದ ಶಿವಮೊಗ್ಗ – ಬೆಂಗಳೂರು ಇಂಡಿಗೋ ವಿಮಾನ ರದ್ದು, ಕಾರಣವೇನು?

ದುರ್ಗಿಗುಡಿಯಲ್ಲಿ ಅಂಗಡಿಯೊಳಗೆ ಹೋಗಿ ಬಂದ ಮಾಲೀಕನಿಗೆ ಆಘಾತ, ದಾಖಲಾಯ್ತು ಪ್ರಕರಣ, ಆಗಿದ್ದೇನು?

ದುರ್ಗಿಗುಡಿಯಲ್ಲಿ ಅಂಗಡಿಯೊಳಗೆ ಹೋಗಿ ಬಂದ ಮಾಲೀಕನಿಗೆ ಆಘಾತ, ದಾಖಲಾಯ್ತು ಪ್ರಕರಣ, ಆಗಿದ್ದೇನು?

ಶಿವಮೊಗ್ಗ JNNCEಯಲ್ಲಿ ಹ್ಯಾಕ್‌ಫೆಸ್ಟ್‌, ತಮಿಳುನಾಡು, ಮೈಸೂರು, ದಾವಣಗೆರೆ ಕಾಲೇಜುಗಳಿಗೆ ಬಹುಮಾನ

ಶಿವಮೊಗ್ಗ JNNCEಯಲ್ಲಿ ಹ್ಯಾಕ್‌ಫೆಸ್ಟ್‌, ತಮಿಳುನಾಡು, ಮೈಸೂರು, ದಾವಣಗೆರೆ ಕಾಲೇಜುಗಳಿಗೆ ಬಹುಮಾನ

Leave a Comment