ರಾತ್ರೋರಾತ್ರಿ ಲಾರಿ ಕದ್ದು ಎಸ್ಕೇಪ್‌ ಆಗಿದ್ದ ಆರೋಪಿ ಅರೆಸ್ಟ್‌

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

ಸೊರಬ: ಪೆಟ್ರೋಲ್ ಬಂಕ್‌ವೊಂದರ ಮುಂಭಾಗ ನಿಲ್ಲಿಸಿದ್ದ ಲಾರಿ (Truck) ಕಳ್ಳತನ ಮಾಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಕಾನುಕೇರಿ ಬಡಾವಣೆ ನಿವಾಸಿ ಇಬ್ರಾಹಿಂ ಅಹಮ್ಮದ್ (26) ಬಂಧಿತ.

ಸೊರಬ ಪಟ್ಟಣದ ಪೆಟ್ರೋಲ್‌ ಬಂಕ್‌ ಮುಂಭಾಗ ಸಾಗರ ಪಟ್ಟಣದ ಗಾಂಧಿನಗರ ನಿವಾಸಿ ಆರೀಫ್ ಆಹ್ಮದ್ ಎಂಬುವರಿಗೆ ಸೇರಿದ ಲಾರಿ ಕಳ್ಳತನವಾಗಿತ್ತು. ಇದರ ಸಿಸಿಟಿವಿ ವಿಡಿಯೋಗಳು ವೈರಲ್‌ ಆಗಿದ್ದವು. ಕಳ್ಳತನದ ಬಗ್ಗೆ ದೂರು ದಾಖಲಾಗಿತ್ತು. ಸುದ್ದಿಯ ಮುಂದಿನ 3 ಪ್ಯಾರಾಗಳು ಕೆಳಗಿವೆ.

ತನಿಖೆ ನಡೆಸಿದ ಪೊಲೀಸರು ಪಟ್ಟಣದ ಇಬ್ರಾಹಿಂ ಅಹಮ್ಮದ್‌ನನ್ನು ಬಂಧಿಸಿ, ಸುಮಾರು ₹4.90 ಲಕ್ಷದ ಲಾರಿಯನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಸಿಪಿಐ ಮಹಾಂತೇಶ ಕೆ.ಲಂಬಿ ಮಾರ್ಗದರ್ಶನದಲ್ಲಿ ಪಿಎಸ್‌ಐ ಎಂ.ಹೆಚ್‌.ನವೀನ್ ನೇತೃತ್ವದಲ್ಲಿ ಸಿಬ್ಬಂದಿ ರಾಘವೇಂದ್ರ, ವಿನಯ್, ಲೋಕೇಶ್ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.

ಇದನ್ನೂ ಓದಿ » ಶಿವಮೊಗ್ಗ ಜಿಲ್ಲೆಯಲ್ಲಿ ತಾಪಮಾನ ಹೆಚ್ಚಳ, ಇವತ್ತು ಮಳೆಯಾಗುತ್ತಾ? – ಹವಾಮಾನ ವರದಿ

Truck

Leave a Comment