ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ | 11 ಸೆಪ್ಟೆಂಬರ್ 2019
ಸಿಗಂದೂರಿಗೆ ತೆರಳುತ್ತಿದ್ದ ಎರಡು ಲಾಂಚ್‌ಗಳು ಮುಖಾಮುಖಿ ಡಿಕ್ಕಿ ಹೊಡೆದುಕೊಂಡಿವೆ. ಶರಾವತಿ ಹೊಳೆ ಮಧ್ಯದಲ್ಲಿ ಘಟನೆ ಸಂಭವಿಸಿದ್ದು, ಸ್ವಲ್ಪದರಲ್ಲೆ ಭಾರಿ ಅನಾಹುತ ತಪ್ಪಿದೆ.
ಶರಾವತಿ – 1 ಮತ್ತು ಶರಾವತಿ – 2 ಲಾಂಚ್‌ಗಳ ನಡುವೆ ಡಿಕ್ಕಿ ಸಂಭವಿಸಿದೆ. ಒಂದು ಲಾಂಚ್ ಹೊಳೆಬಾಗಿಲಿನಿಂದ ಕಳಸವಳ್ಳಿಗೆ ತೆರಳುತ್ತಿತ್ತು. ಮತ್ತೊಂದು ಲಾಂಚ್ ಕಳಸವಳ್ಳಿಯಿಂದ ಹೊಳೆಬಾಗಿಲು ಕಡೆಗೆ ಬರುತ್ತಿತ್ತು. ಈ ವೇಳೆ ಚಾಲಕರ ಅಜಾಗರುಕತೆಯಿಂದಾಗಿ ಘಟನೆ ಸಂಭವಿಸಿದೆ. ಎರಡು ಲಾಂಚ್’ನಲ್ಲಿ ಸುಮಾರು 200 ಜನರಿದ್ದರು ಎಂದು ತಿಳಿದು ಬಂದಿದೆ. ಅಪಘಾತದಲ್ಲಿ ಎರಡು ಲಾಂಚ್’ಗಳಿಗೆ ಹಾನಿ ಆಗಿದೆ.
ಅಧಿಕೃತ ಡ್ರೈವರ್’ಗಳೇ ಇರಲಿಲ್ಲ
ಘಟನೆ ವೇಳೆ ಅಧಿಕೃತ ಡ್ರೈವರ್’ಗಳು ಲಾಂಚ್ ಚಲಾಯಿಸುತ್ತಿರಲಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ. ‘ಲಾಂಚ್’ನಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿಗಳಾದ ಮಂಜುನಾಥ್ ಮತ್ತು ಸುನಿಲ್ ಎಂಬುವವರು ಲಾಂಚ್ ಚಲಾಯಿಸುತ್ತಿದ್ದರು ಎಂಬ ಮಾಹಿತಿ ಇದೆ. ನಿರ್ಲಕ್ಷದಿಂದಾಗಿ ಘಟನೆ ಸಂಭವಿಸಿದೆ’ ಎಂದು ತುಮರಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಜಿ.ಟಿ.ಸತ್ಯನಾರಾಯಣ ತಿಳಿಸಿದ್ದಾರೆ.
ಅಮಾನತು ಮಾಡಿ, ತನಿಖೆ ನಡೆಸಿ
ಲಾಂಚ್ ಸಿಬ್ಬಂದಿಯ ನಿರ್ಲಕ್ಷದಿಂದಾಗಿ ಅಪಘಾತ ಸಂಭವಿಸಿದೆ. ಆದರೆ ಅದೃಷ್ಟವಶಾತ್ ಯಾವುದೆ ಅಪಾಯ ಸಂಭವಿಸಿಲ್ಲ. ‘ಅಧಿಕೃತ ಚಾಲಕರು ಇಲ್ಲದೆ ಸಿಬ್ಬಂದಿಯೆ ಲಾಂಚ್ ಚಲಾಯಿಸಿದ್ದಾರೆ. ಇದರಿಂದ ಘಟನೆ ಸಂಭವಿಸಿದೆ. ಕೂಡಲೆ ಅವರನ್ನು ಅಮಾನತು ಮಾಡಿ, ತನಿಖೆ ನಡೆಸಬೇಕಿದೆ’ ಎಂದು ಜಿ.ಟಿ.ಸತ್ಯನಾರಾಯಣ ಅವರು ಆಗ್ರಹಿಸಿದ್ದಾರೆ.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200
ಸುದ್ದಿಗಾಗಿ ಮೊಬೈಲ್ ನಂಬರ್ | 9964634494
ಈ ಮೇಲ್ | shivamoggalive@gmail.com
LATEST NEWS
- ಶಿವಮೊಗ್ಗದ ದೇಗುಲಗಳಿಗೆ ಸಂಜೆ ಬಳಿಕ ಹೆಚ್ಚಿದ ಭಕ್ತರು, ವಿಶೇಷ ಪೂಜೆ

- ಬೆಟ್ಟೆ, ರಾಶಿ ರೇಟ್ ಇವತ್ತು ಎಷ್ಟಿದೆ? ಸರಕು ದರ ಮತ್ತೆ ಹೆಚ್ಚಾಯ್ತಾ? – 3 ಮಾರ್ಚ್ 2026

- ಶಿವಮೊಗ್ಗದಲ್ಲಿ ರಂಗ ಹಬ್ಬ, ನಾಲ್ಕು ದಿನ ನಾಟಕೋತ್ಸವ, ಯಾವ್ಯಾವ ದಿನ ಯಾವ ನಾಟಕವಿದೆ?

- ಶಿವಮೊಗ್ಗ ಬಸ್ ನಿಲ್ದಾಣದಲ್ಲಿ ವ್ಯಕ್ತಿಗೆ ಬಿಸಿ ಮುಟ್ಟಿಸಿದ ಅಕ್ಕ ಪಡೆ, ಆಗಿದ್ದೇನು?

- ದುರ್ಗಿಗುಡಿಯಲ್ಲಿ ವೈಭವದ ರಥೋತ್ಸವ, ಈ ಬಾರಿ ಉತ್ಸವ ಬೆಳಗ್ಗೆ ನಡೆದಿದ್ದೇಕೆ?

About The Editor
ನಿತಿನ್ ಆರ್.ಕೈದೊಟ್ಲು





