ತಾಲೂಕು ಕಚೇರಿ ಮುಂದೆ ಕೊಳೆರೋಗಕ್ಕೆ ತುತ್ತಾದ ಅಡಕೆ ಸುರಿದು ಬೆಳೆಗಾರರ ಆಕ್ರೋಶ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ ಲೈವ್.ಕಾಂ | ಸೊರಬ | 17 ಸೆಪ್ಟೆಂಬರ್ 2019

ಅಡಕೆ ಕೊಳೆರೋಗದಿಂದ ಸಂಕಷ್ಟಕ್ಕೀಡಾದ ಬೆಳೆಗಾರರಿಗೆ ತುರ್ತಾಗಿ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಸೊರಬದಲ್ಲಿ ಇವತ್ತು ಪ್ರತಿಭಟನೆ ನಡೆಸಲಾಯಿತು. ತಾಲೂಕು ಕಚೇರಿ ಮುಂದೆ ಕೊಳೆರೋಗಕ್ಕೆ ತುತ್ತಾದ ಅಡಕೆ ಸುರಿದು ಆಕ್ರೋಶ ವ್ಯಕ್ತಪಡಿಸಲಾಯಿತು.

ಸಾರ್ವಜನಿಕರ ಹಿತರಕ್ಷಣಾ ಹೋರಾಟ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಈ ವೇಳೆ ಮಾತನಾಡಿದ ಸಮಿತಿ ಅಧ್ಯಕ್ಷ ಚಿದಾನಂದಗೌಡ, ಭಾರಿ ಬಿಸಿಲಿಗೆ ಅಡಕೆ ಉದುರಿದ್ದರು. ಆ ಬಳಿಕ ಸುರಿ ಜೋರು ಮಳೆಗೆ ಕೊಳೆ ರೋಗ ಬಂದಿದೆ. ಇದರಿಂದ ಬೆಳಗಾರರು ಸಂಕಷ್ಟಕ್ಕೀಡಾಗಿದ್ದಾರೆ ಎಂದರು.

ಕೊಳೆ ರೋಗಕ್ಕೆ ತುತ್ತಾಗಿರುವ ಅಡಿಕೆಯನ್ನು ಸಮೀಕ್ಷೆ ನಡೆಸಬೇಕು. ರೈತರಿಂದ ಅರ್ಜಿ ಪಡೆಯುವಾಗ ಪಹಣಿ ಪಡೆಯುವ ಪದ್ಧತಿ ಕೈಬಿಟ್ಟು, ಸರ್ವೆ ನಂಬರ್ ಮಾತ್ರ ನಮೂದಿಸುವಂತೆ ಸೂಚಿಸಬೇಕು. ತುರ್ತಾಗಾಗಿ ಕೊಳೆರೋಗಕ್ಕೆ ತುತ್ತಾಗಿರುವ ಅಡಿಕೆ ಬೆಳೆಗೆ ಪರಿಹಾರ ಘೋಷಿಸಬೇಕು ಎಂದು ಒತ್ತಾಯಿಸಿ ತಹಶೀಲ್ದಾರ್ ಪಟ್ಟರಾಜ ಗೌಡ ಅವರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಬಿಎಸ್‌ಎನ್‌ಡಿಪಿ ತಾಲೂಕು ಅಧ್ಯಕ್ಷ ಶಿವಕುಮಾರ ಬಿಳವಗೋಡು, ಗ್ರಾಪಂ ಸದಸ್ಯ ಎ. ಶಿವರಾಜ್ ಸಾರೇಮರೂರು, ಪ್ರಮುಖರಾದ ನಾಗಪ್ಪ ನಡಹಳ್ಳಿ, ಕುಬೇರಪ್ಪ, ತೇಜಪ್ಪ, ಮಂಜಪ್ಪ, ರಾಜಶೇಖರಪ್ಪ ಗೌಡ, ಮಾರುತಿ, ಶೇಖರಪ್ಪ, ಷಣ್ಮುಖಪ್ಪ ಹರಗಿ, ಪಿ.ಕೆ. ಮಂಜುನಾಥ್ ಗುಡುವಿ ಮತ್ತಿತರರು ಪ್ರತಿಭಟನೆಯಲ್ಲಿದ್ದರು.

ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ – 7411700200

ಸುದ್ದಿಗಾಗಿ ಕರೆ ಮಾಡಿ – 9964634494

ಈ ಮೇಲ್ ಐಡಿ | shivamoggalive@gmail.com

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment