ಶಿವಮೊಗ್ಗದಲ್ಲಿ ಚಲಿಸುತ್ತಿದ್ದಲೇ ಪುಟಾಣಿ ರೈಲಿನಲ್ಲಿ ಬೆಂಕಿ, ದಟ್ಟ ಹೊಗೆ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ: ಚಲಿಸುತ್ತಿರುವಾಗಲೆ ಪುಟಾಣಿ ರೈಲಿನಲ್ಲಿ (Toy Train) ಬೆಂಕಿ ಕಾಣಿಸಿಕೊಂಡಿದೆ. ಇದರಿಂದ ರೈಲು ಚಲಿಸುವಾಗಲೆ ಪೋಷಕರು ಮತ್ತು ಮಕ್ಕಳು ಆತಂಕದಿಂದ ಕೆಳಗೆ ಇಳಿದುಕೊಂಡಿದ್ದಾರೆ.

ಗಾಂಧಿ ಪಾರ್ಕ್‌ನಲ್ಲಿರುವ ಪುಟಾಣಿ ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ರೈಲು ಚಲಿಸುವಾಗಲೆ ತಾಂತ್ರಿಕ ದೋಷದಿಂದ ಎಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡು ದಟ್ಟ ಹೊಗೆ ಆವರಿಸಿತು. ರೈಲಿನಲ್ಲಿ ಕೆಲವು ಪೋಷಕರು ತಮ್ಮ ಮಕ್ಕಳೊಂದಿಗೆ ಇದ್ದರು. ಹೊಗೆ ಆವರಿಸಿದ್ದರಿಂದ ಆತಂಕಗೊಂಡ ಪೋಷಕರು ತಮ್ಮ ಮಕ್ಕಳ ಸಹಿತ ಚಲಿಸುವ ರೈಲಿನಿಂದ ಕೆಳಗೆ ಇಳಿದಿದ್ದಾರೆ.

Heavy-Smoke-in-Toy-train-at-Shimoga-Gandhi-Bazaar.

ಬೆಂಕಿ ನಂದಿಸಿ ಕೆಲವು ಸಮಯದ ಬಳಿಕ ತಾಂತ್ರಿಕ ಸಮಸ್ಯೆ ಪರಿಹರಿಸಿದ ನಂತರ ರೈಲು ಪುನಃ ಚಲಿಸಲು ಆರಂಭಿಸಿದೆ. ಅದೃಷ್ಟವಶಾತ್‌ ಘಟನೆಯಲ್ಲಿ ಯಾರಿಗು ತೊಂದರೆಯಾಗಿಲ್ಲ.

ಇದನ್ನೂ ಓದಿ » ವಿಷ ಸೇವಿಸಿ ಐದು ತಿಂಗಳ ಬಾಣಂತಿ ಆತ್ಮಹತ್ಯೆ

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : November 8, 2025

Leave a Comment