ಡಿಪಿಗೆ ಸಾವರ್ಕರ್‌ ಫೋಟೊ ಬಳಸಿದ್ದಕ್ಕೆ ವಾಟ್ಸಪ್‌ ಕರೆ ಮಾಡಿ ಜೀವ ಬೆದರಿಕೆ

ಶಿವಮೊಗ್ಗ: ವಾಟ್ಸಪ್‌ ಡಿಪಿಯಲ್ಲಿ ವೀರ ಸಾವರ್ಕರ್‌ ಫೋಟೊ (Photo) ಬಳಸಿದ್ದಕ್ಕೆ ಅನಾಮಧೇಯ ವ್ಯಕ್ತಿಯೊಬ್ಬ ಕರೆ ಮಾಡಿ ಜೀವ ಬೆದರಿಕೆ ಒಡ್ಡಿದ್ದಾನೆ ಎಂದು ಆರೋಪಿಸಿ ಕಾನೂನು ವಿದ್ಯಾರ್ಥಿ ಚಂದನ್‌ ದೂರು ನೀಡಿದ್ದಾರೆ.

ಸುದ್ದಿಯ ಮುಂದಿನ ಭಾಗ ಕೆಳಗಿದೆ

ನ.6ರಂದು ಅಪರಿಚಿತ ನಂಬರ್‌ನಿಂದ ವಾಟ್ಸಪ್‌ ಕರೆ ಬಂದಿದ್ದು ವ್ಯಕ್ತಿಯೊಬ್ಬ ತನ್ನನ್ನು ಪ್ರವೀಣ್‌ ಎಂದು ಪರಿಚಯಿಸಿಕೊಂಡಿದ್ದ. ವೀರ ಸಾರ್ವಕರ್‌ ಫೋಟೊವನ್ನು ಡಿಪಿಯಲ್ಲಿ ಬಳಸಿದ್ದೇಕೆ ಎಂದು ವಿಚಾರಿಸಿ, ಕೊನೆಗೆ ಜೀವ ಬೆದರಿಕೆ ಒಡ್ಡಿದ್ದಾನೆ ಎಂದು ಆರೋಪಿಸಲಾಗಿದೆ. ಚಂದನ್‌ ಅವರು ವಾಟ್ಸಪ್‌ ಪರಿಶೀಲಿಸಿದಾಗ ಶೇಖ್‌ ಎಂಬ ಹೆಸರು ತೋರಿಸುತ್ತಿತ್ತು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಘಟನೆ ಸಂಬಂಧ ಕೋಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ » ಗರ್ಭಿಣಿ ಪತ್ನಿಯನ್ನು ಮನೆಯಿಂದ ಹೊರಗೆ ಹಾಕಿದ್ದ ಪತಿಗೆ ಜೈಲು ಶಿಕ್ಷೆ

Nanjappa Hospital Advertisement

📍 ನಿಮ್ಮೂರ ಸುದ್ದಿ
ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ.
Shivamogga Live Promotion

Leave a Comment