ಶಿವಮೊಗ್ಗ: ನಗರದ ಎನ್.ಟಿ. ರಸ್ತೆಯ ಪಿಡಬ್ಲುಡಿ ವಸಿತಿಗೃಹದ ಗೇಟ್ ಮುಂದೆ ನಿಲ್ಲಿಸಿದ್ದ ಬೈಕ್ ಕಳ್ಳತನವಾಗಿದೆ. ಚಂದ್ರಶೇಖರ್ ಎಂಬುವವರ ಹೀರೋ ಹೋಂಡಾ ಪ್ಯಾಷನ್ ಪ್ಲಸ್ ಬೈಕ್ ನಾಪತ್ತೆಯಾಗಿದೆ.
ಚಂದ್ರಶೇಖರ್ ಅವರು ತಮ್ಮ ಬೈಕನ್ನು ಮನೆಯ ಗೇಟ್ ಮುಂದೆ ನಿಲ್ಲಿಸಿ, ಅದರ ಕೀಯನ್ನು ಗಾಡಿಯಲ್ಲೇ ಬಿಟ್ಟು ಹೋಗಿದ್ದರು. ಸಂಜೆ ಬಂದು ನೋಡಿದಾಗ ನಿಲ್ಲಿಸಿದ್ದ ಬೈಕ್ ಇರಲಿಲ್ಲ. ಬೈಕ್‌ನ ಮೌಲ್ಯ ₹59,000 ಅಂದಾಜಿಸಲಾಗಿದೆ. ಘಟನೆ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:➤ ಮಾಚೇನಹಳ್ಳಿ ಫ್ಲೈ ಓವರ್ ಮೇಲೆ ಬೈಕುಗಳು ಡಿಕ್ಕಿ, KSRP ಸಿಬ್ಬಂದಿ ಸೇರಿ ಇಬ್ಬರಿಗೆ ಗಾಯ, ಹೇಗಾಯ್ತು ಘಟನೆ?