ಶಿವಮೊಗ್ಗದ ಗೋಪುರ ಗಡಿಯಾರದಲ್ಲಿ ಪೂರ್ವಕ್ಕೊಂದು ಸಮಯ, ಪಶ್ಚಿಮಕ್ಕೊಂದು ಟೈಮ್‌

ಶಿವಮೊಗ್ಗ: ನಗರದ ಸೌಂದರ್ಯ ಹೆಚ್ಚಿಸಲು ಸ್ಮಾರ್ಟ್‌ ಸಿಟಿ ಯೋಜನೆ ಅಡಿ ನಿರ್ಮಿಸಲಾಗಿರುವ ಗೋಪುರ ಗಡಿಯಾರ (Clock) ಮತ್ತೆ ದಿಕ್ಕಿಕೊಂದು ಸಮಯ ತೋರಿಸುತ್ತಿದೆ. ನಿರ್ವಾಹಣೆ ಕೊರತೆಯಿಂದಾಗಿ ಈ ಗಡಿಯಾರ ಪದೇ ಪದೆ ನಿಲ್ಲುತ್ತಿದ್ದು, ಸರಿಯಾದ ಸಮಯ ತೋರಿಸುವಲ್ಲಿಯು ವಿಫಲವಾಗಿದೆ.

ಉಷಾ ನರ್ಸಿಂಗ್‌ ಹೋಂ ಎದುರು ರೈಲ್ವೆ ನಿಲ್ದಾಣಕ್ಕೆ ತೆರಳುವ ಮಾರ್ಗದಲ್ಲಿ ಗೋಪುರದ ಮೇಲೆ ಗಡಿಯಾರ ಸ್ಥಾಪಿಸಲಾಗಿದೆ. ನಗರದ ಸೌಂದರ್ಯ ಹೆಚ್ಚಿಸಲು ಇದನ್ನ ಸ್ಥಾಪಿಲಾಗಿತ್ತು. ಆದರೆ ಈ ಗಡಿಯಾರ ದಿಕ್ಕಿಗೊಂದು ಸಮಯ ತೋರಿಸುತ್ತಿದೆ.

clock-stopped-working-in-Front-of-Usha-Nursing-Home

ಈ ಹಿಂದೆ ಇದೇ ರೀತಿ ಸಮಸ್ಯೆಯಾಗಿದ್ದು ಶಿವಮೊಗ್ಗ ಲೈವ್‌ ವರದಿ ಪ್ರಕಟಿಸಿತ್ತು. ಈಗ ಮತ್ತೆ ಗಡಿಯಾರ ನಿಂತಿದೆ. ನಗರದ ಸೌಂದರ್ಯ ಹೆಚ್ಚಿಸಬೇಕಿದ್ದ ಗಡಿಯಾರ ಶಿವಮೊಗ್ಗ ಪಾಲಿಕೆ ನಿರ್ಲಕ್ಷ್ಯತನಕ್ಕೆ ಸಾಕ್ಷಿಯಾಗಿದೆ.

ಇದನ್ನೂ ಓದಿ » ಶಿವಮೊಗ್ಗದಲ್ಲಿಯು ಅಲರ್ಟ್‌, ಬಾಂಬ್‌ ಪತ್ತೆ ದಳ, ಶ್ವಾನದಳದಿಂದ ತಪಾಸಣೆ, ಎಲ್ಲೆಲ್ಲಿ ಹೇಗಿದೆ ಕಟ್ಟೆಚ್ಚರ?

Clock

ನಿತಿನ್ ಆರ್‌.ಕೈದೊಟ್ಲು
ನಿತಿನ್ ಆರ್‌.ಕೈದೊಟ್ಲು

Published : November 11, 2025 at 1:17 PM IST

JNN College of Engineering Admissions started

© ಶಿವಮೊಗ್ಗ ಲೈವ್‌ : ನವೆಂಬರ್ 11, 2025

Leave a Comment