‘ನಿಶ್ಯಬ್ದ ಹಂತಕʼ ಮಧುಮೇಹ, ಶಿವಮೊಗ್ಗದಲ್ಲಿ ನಾಳೆ ಉಚಿತ ತಪಾಸಣೆ, ಅರಿವು, ಎಲ್ಲಿ? ಎಷ್ಟೊತ್ತಿಗೆ?

ಶಿವಮೊಗ್ಗ: ನಗರದ ನಂಜಪ್ಪ ಲೈಫ್‌ ಕೇರ್‌ನಲ್ಲಿ ನ.14 ರಂದು ಬೆಳಗ್ಗೆ 9ರಿಂದ ಮಧ್ಯಾಹ್ನ 2ಗಂಟೆ ವರೆಗೆ ಮಧುಮೇಹ (Diabetes) ಅರಿವು ಮೂಡಿಸುವ ಆರೋಗ್ಯ ಶಿಕ್ಷಣ ಮಾಹಿತಿ ವಿನಿಮಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.➤ ಸುದ್ದಿಯ ಮುಂದಿನ 4 ಪ್ಯಾರಾಗಳು ಕೆಳಗಿವೆ.

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

ಕಾರ್ಯಕ್ರಮದಲ್ಲಿ ಆಹಾರ ತಜ್ಞರಿಂದ ಆರೋಗ್ಯಕರ ಆಹಾರ ಕ್ರಮದ ಬಗ್ಗೆ ಅರಿವು ಮೂಡಿಸುವುದರ ಜತೆಗೆ ಸರಳ ಆಹಾರ ಪದ್ದತಿಯ ಸಲಹೆಗಳನ್ನು ನೀಡಲಾಗುತ್ತದೆ. ಜತೆಗೆ ರಕ್ತದಲ್ಲಿನ ಸಕ್ಕರೆ ಅಂಶ (ಆರ್‌ಬಿಎಸ್), ರಕ್ತದೊತ್ತಡ (ಬಿಪಿ), ಬಾಡಿ ಮಾಸ್ ಇಂಡೆಕ್ಸ್ ಪರೀಕ್ಷೆ ಮತ್ತು ತಪಾಸಣೆಯನ್ನು ಉಚಿತವಾಗಿ ಮಾಡಲಾಗುತ್ತದೆ.

ನ.14 ವಿಶ್ವ ಮಧುಮೇಹದ ದಿನವಾಗಿದ್ದು ಈ ದಿನ ಮಧುಮೇಹದ ಬಗ್ಗೆ ಜಾಗೃತಿ ಮೂಡಿಸುವುದು, ತಡೆಗಟ್ಟುವುದು, ರೋಗ ನಿರ್ಣಯ ಮತ್ತು ಚಿಕಿತ್ಸೆಯ ಮಹತ್ವವನ್ನು ಒತ್ತಿ ಹೇಳಲು ಮೀಸಲಾದ ಜಾಗತಿಕ ದಿನವಾಗಿದೆ. ಭಾರತದಲ್ಲಿ ಮಧುಮೇಹಿಗಳ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೆ ಇದೆ. ಪ್ರಸ್ತುತ ಅಂದಾಜು ಹತ್ತು ಕೋಟಿ ಟೈಪ್ 2 ಮಧುಮೇಹಿಗಳಿದ್ದರೆ, ಸುಮಾರು 13 ಕೋಟಿ ಪೂರ್ವಭಾವಿ ಮಧುಮೇಹಿಗಳಿದ್ದಾರೆ. ಇನ್ನೂ ಅಪಾಯಕಾರಿ ಅಂಶ ಎಂದರೆ ಶೇಕಡ 50ರಷ್ಟು ಜನರಿಗೆ ತಮಗೆ ಮಧು ಮೇಹದ ಕಾಯಿಲೆ ಇದೆ ಅನ್ನುವುದೇ ಗೊತ್ತಿಲ್ಲ. ಮಧುಮೇಹ ಎನ್ನುವುದು ಒಂದು “ನಿಶ್ಯಬ್ದ ಹಂತಕ” ಆಗಿರುವುದರಿಂದ ಸ್ವಯಂ ಪರೀಕ್ಷೆ ಮಾಡಿಸಿಕೊಳ್ಳಲು ಈ ಅವಕಾಶ ಬಳಸಿಕೊಳ್ಳಬೇಕೆಂದು ನಂಜಪ್ಪ ಲೈಫ್ ಕೇರ್ ಆಸ್ಪತ್ರೆ ಪ್ರಕಟಣೆಯಲ್ಲಿ ತಿಳಿಸಿದೆ.‌

ಇದನ್ನೂ ಓದಿ » ಅಮಿತ್‌ ಷಾಗೆ ಶಿವಮೊಗ್ಗದಿಂದ ಬಳೆ ಪೋಸ್ಟ್‌ ಮಾಡಿದ ಮಹಿಳೆಯರು, ಆಕ್ರೋಶ ವ್ಯಕ್ತಪಡಿಸಿದ ಯುವಕರು

Diabetes

Leave a Comment