ಪಾದಯಾತ್ರೆಗೆ ಹೊಳೆಹೊನ್ನೂರು ಭಾಗದಲ್ಲಿ ಅದ್ಧೂರಿ ಸ್ವಾಗತ, ಇವತ್ತು ಶಿವಮೊಗ್ಗ ಪ್ರವೇಶ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

 

ಹೊಳೆಹೊನ್ನೂರು: ಸಮಾಜದ ಉದ್ದಾರ ಹಾಗೂ ಲೋಕ ಕಲ್ಯಾಣಾರ್ಥವಾಗಿ ಚನ್ನಗಿರಿಯಿಂದ ಬಾಳೆಹೊನ್ನೂರಿನ ಶ್ರೀ ರಂಭಾಪುರಿ ಪೀಠದ ವರೆಗೆ ಪಾದಯಾತ್ರೆ ಸಾಗುತ್ತಿದೆ ಎಂದು ಚನ್ನಗಿರಿಯ ಕೇದಾರ ಶಾಖ ಮಠದ ಡಾ.ಕೇದಾರಲಿಂಗಾ ಶಿವ ಶಾಂತವೀರ ಶ್ರೀಗಳು ಹೇಳಿದರು.

ಬಾಳೆಹೊನ್ನೂರು ರಂಭಾಪುರಿ ಪೀಠದಲ್ಲಿ ನ.27 ರಂದು ಹಮ್ಮಿಕೊಂಡಿರುವ ಲಿಂಗೈಕ್ಯ ಶಿವಾನಂದ ರಾಜೇಂದ್ರ ಶಿವಾಚಾರ್ಯರ ಪೀಠಾರೋಹಣದ ಶತಮಾನೋತ್ಸವದ ನಿಮಿತ್ತ ಭಾನುವಾರ ಹೋರಾಟ ಪಾದಯಾತ್ರೆಯ ದಿವ್ಯ ಸಾನಿದ್ಯ ವಹಿಸಿ ಮಾತನಾಡಿದರು.

ಇಷ್ಠಲಿಂಗ ಪೂಜೆ ಸೇರಿದಂತೆ ಪೂಜಾ ಕೈಂಕರ್ಯಗಳ ಮಹತ್ವವನ್ನು ಕಿರಿಯರಿಗೆ ಮನವರಿಕೆ ಮಾಡಬೇಕಿದೆ. ಸಮಾಜದ ಕಾರ್ಯಕ್ರಮಗಳಲ್ಲಿ ಯುವಶಕ್ತಿ ಪಾಲ್ಗೊಳ್ಳುವಿಕೆ ಹೆಚ್ಚಾಗಬೇಕು. ದುಶ್ಚಟಗಳಿಗೆ ಬಲಿಯಾಗಿ ಯುವ ಪೀಳಿಗೆ ಹಾದಿ ತಪ್ಪದಂತೆ ನೋಡಿಕೊಳ್ಳಬೇಕು. ಸಮಾಜಮುಖಿ ಕಾರ್ಯಗಳಿಗೆ ನೆರವು ನೀಡುವುದನ್ನು ಮರೆಯಬಾರದು. ಯುವ ಪೀಳಿಗೆಯವರು ಹೆಚ್ಚಾಗಿ ಪಾದಯಾತ್ರೆಗಳಲ್ಲಿ ತೋಡಗಬೇಕು. ಸಂಕಲ್ಪ ಮಾಡಿಕೊಂಡು ಪಾದಯಾತ್ರೆಯಲ್ಲಿ ಭಾಗವಹಿಸಿದರೆ ಕಾರ್ಯ ಸಾಧನೆಯ ಪುಣ್ಯ ಫಲ ಪ್ರಾಪ್ತಿಯಾಗುತ್ತದೆ ಎಂದರು

ಭಾನುವಾರ ಎಲ್ಲೆಲ್ಲಿ ಸಾಗಿತು ಪಾದಯಾತ್ರೆ?

ಭಾನುವಾರ ಬೆಳಗ್ಗೆ ಚನ್ನಗಿರಿಯ ಕೇದಾರ ಶಾಖ ಪೀಠದಿಂದ ಆರಂಭವಾದ ಪಾದಯಾತ್ರೆ ಶಿವಮೊಗ್ಗ – ಚಿತ್ರದುರ್ಗ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗಿತು. ಭದ್ರಾವತಿ ತಾಲೂಕಿನ ಯಡೇಹಳ್ಳಿಯಲ್ಲಿ ವಿರಾಮ ನೀಡಲಾಯಿತು. ಯಡೇಹಳ್ಳಿಯಿಂದ ಮಧ್ಯಾಹ್ನದ ಪ್ರಸಾದದ ನಂತರ ಅರಹತೋಳಲು ಕೈಮರದಲ್ಲಿ ಕಲ್ಲಿಹಾಳು ಮೈದೊಳಲು ಭಾಗದ ಭಕ್ತರು ಶ್ರೀಗಳಿಗೆ ಅದ್ಧೂರಿ ಸ್ವಾಗತ ನೀಡಿದರು. ಡಾ.ಕೇದಾರಲಿಂಗಾ ಶಿವ ಶಾಂತವೀರ ಶ್ರೀಗಳು ಕೆಲಕಾಲ ಭಕ್ತಾದಿಗಳೊಂದಿಗೆ ಸಮಾಲೋಚನೆ ನಡೆಸಿದರು. ಸಮೀಪದ ಅರಕರೆಯ ವಿರಕ್ತ ಮಠದ ಕರಿಸಿದ್ದೇಶ್ವರ ಶ್ರೀಗಳು ಜೊತೆಯಾದರು.

ಸಂಜೆಯ ನಂತರ ಅರಹತೊಳಲು ಕೈಮರದಿಂದ ಆರಂಭವಾದ ಪಾದಯಾತ್ರೆ ಸಂಜೆ ವೇಳೆಗೆ ಹೊಳೆಹೊನ್ನೂರು ತಲುಪಿತ್ತು. ಹೊಳೆಹೊನ್ನೂರಿನಲ್ಲಿ ಶ್ರೀಗಳು ಹಾಗೂ ಭಕ್ತಾಧಿಗಳಿಗೆ ವಾಸ್ಥವ್ಯದ ವ್ಯವಸ್ಥೆ ಮಾಡಲಾಗಿತ್ತು.

ಇಂದು ಬೆಳಗ್ಗೆ ಹೊಳೆಹೊನ್ನೂರಿನಿಂದ ಆರಂಭವಾಗುವ ಪಾದಯಾತ್ರೆ ಶಿವಮೊಗ್ಗ ಮಾರ್ಗವಾಗಿ ಸಾಗಲಿದೆ.

ವೀರಶೈವ ಸಮಾಜದ ಮುಖಂಡ ಸಾರ್ಥಿ ರಾಜಪ್ಪ, ಕಿರಣ್‌ ಕುಮಾರ್, ಜಂಗಮ ಸಮಾಜದ ಅಧ್ಯಕ್ಷ ಹಾಲಸ್ವಾಮಿ, ಸಂಗೊಳ್ಳಿಯ ಶಿವಕುಮಾರ್, ರುದ್ರಸ್ವಾಮಿ, ಕೋಡಿಹಳ್ಳಿ ಸತೀಶ್, ನಿರಂಜನ, ಬೈರೆಶ್, ಹಾಲಸ್ವಾಮಿ, ವಿರೂಪಾಕ್ಷ ಇತರರಿದ್ದರು.

ಇದನ್ನೂ ಓದಿ » ದ್ವಿಚಕ್ರ ವಾಹನಕ್ಕೆ KSRTC ಬಸ್‌ ಡಿಕ್ಕಿ, ಸವಾರ ಸ್ಥಳದಲ್ಲೇ ಸಾವು

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : November 24, 2025

Leave a Comment