ದ್ವಿಚಕ್ರ ವಾಹನಕ್ಕೆ KSRTC ಬಸ್‌ ಡಿಕ್ಕಿ, ಸವಾರ ಸ್ಥಳದಲ್ಲೇ ಸಾವು

ಹೊಳೆಹೊನ್ನೂರು: ರಾಷ್ಟ್ರೀಯ ಹೆದ್ದಾರಿಯ 13ರಲ್ಲಿ ಜಂಬರಘಟ್ಟೆ ಬಳಿ ಭಾನುವಾರ ಸಂಜೆ ಸರ್ಕಾರಿ ಬಸ್ ಹಾಗೂ ಬೈಕ್ ಡಿಕ್ಕಿಯಾಗಿ ಬೈಕ್ ಸವಾರ ಸಾವನ್ನಪ್ಪಿದ್ದಾರೆ.

ಸುದ್ದಿಯ ಮುಂದಿನ ಭಾಗ ಕೆಳಗಿದೆ

ಮೃತರನ್ನು ಜಂಬರಘಟ್ಟೆ ನಿವಾಸಿ ಸೈಯದ್ ಆಹಮದ್ (65) ಗುರುತಿಸಲಾಗಿದೆ. ಶಿವಮೊಗ್ಗದಿಂದ ಚಿತ್ರದುರ್ಗಕ್ಕೆ ಹೋಗುತ್ತಿದ್ದ ಸರ್ಕಾರಿ ಬಸ್ ಮತ್ತು ಬೈಕ್‌ ಅಪಘಾತಕ್ಕೀಡಾಗಿವೆ. ಸೈಯದ್ ಆಹಮದ್ ಹಾಗೂ ಆಯಾನ್ ಜಮೀನಿನಿಂದ ಮನೆಗೆ ಬೈಕಿನಲ್ಲಿ ತೆರಳುತ್ತಿದ್ದರು.  

ಘಟನೆ ಸ್ಥಳದಲ್ಲೇ ಸೈಯದ್ ಆಹಮದ್ ಅಸುನೀಗಿದ್ದಾರೆ. ಹಿಂಬದಿ ಸವಾರ ಆಯಾನ್ ಗಾಯಗೊಂಡಿದ್ದು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಹೊಳೆಹೊನ್ನೂರು ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

Nanjappa Hospital Advertisement

ಇದನ್ನೂ ಓದಿ » ಇನ್ನೆಷ್ಟು ವರ್ಷ ಬೇಕು ಶಿವಮೊಗ್ಗದ ಈ ರಸ್ತೆಯಲ್ಲಿರುವ ಲೈಟ್‌ ಆನ್‌ ಆಗಲು?

📍 ನಿಮ್ಮೂರ ಸುದ್ದಿ
ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ.
Shivamogga Live Promotion

Leave a Comment