ಹೆಚ್ಚಿನ ತೆರಿಗೆಯಿಂದಾಗಿ ವ್ಯಸನಿಗರು ಗಾಂಜಾಗೆ ದಾಸರಾಗುತ್ತಿದ್ದಾರೆ, ಎಂಎಲ್‌ಸಿ ಆಕ್ರೋಶ

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

ಶಿವಮೊಗ್ಗ: ರಾಜ್ಯದಲ್ಲಿ ಅಬಕಾರಿ ಮೇಲಿನ ತೆರಿಗೆ ಎದ್ವಾತದ್ವಾ ಏರಿಸುವುದರ ಮೂಲಕ ವ್ಯಸನಿಗರು ಗಾಂಜಾ ಸೇವನೆಗೆ ದಾಸರಾಗುವಂತೆ ಕಾಂಗ್ರೆಸ್ ಸರ್ಕಾರ ಮಾಡಿದೆ ಎಂದು ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿ.ಎಸ್‌.ಅರುಣ್‌, ರಾಜ್ಯದ ಆರ್ಥಿಕ ಪರಿಸ್ಥಿತಿಯ ಕುರಿತು ರಾಜ್ಯ ಸರ್ಕಾರ ಶ್ವೇತಪತ್ರ ಹೊರಡಿಸಲು ಅಧಿವೇಶನದಲ್ಲಿ ಆಗ್ರಹಿಸಲಾಗುವುದು. ರಾಜ್ಯ ಸರ್ಕಾರ ಜನರ ಮೇಲೆ ಹೆಚ್ಚಿನ ತೆರಿಗೆಯ ಹೊರೆ ಹೇರುತ್ತಿದೆ. ಅಬಕಾರಿ, ರಾಜ್ಯ ಹೆದ್ದಾರಿ, ಸ್ಟಾಂಪ್ ಡ್ಯೂಟಿ ಮೊದಲಾದವುಗಳ ಮೇಲೆ ಮನಸ್ಸಿ ಗೆ ಬಂದಂತೆ ತೆರಿಗೆ ಹೆಚ್ಚಿಸಿ ಸಾರ್ವಜನಿಕ ರನ್ನು ಲೂಟಿ ಹೊಡೆಯುತ್ತಿದೆ. ಅಬಕಾರಿ ಗುರಿಯನ್ನು ಶೇ.130 ರಿಂದ 160ಕ್ಕೆ ಏರಿಸಿದ್ದಲ್ಲದೆ ಬಾಕ್ಸ್ ಟಾರ್ಗೆಟ್‌ ಅನ್ನು 1,73,500 ರಿಂದ 1,99,500ಕ್ಕೆ ಏರಿಸಿದೆ. ಈ ಕುರಿತು ಬರುವ ಅಧಿವೇಶನದಲ್ಲಿ ಚರ್ಚಿಸಲಾಗುವುದು ಎಂದರು. ಸುದ್ದಿಯ ಮುಂದಿನ 2 ಪ್ಯಾರಾಗಳು ಕೆಳಗಿವೆ.

ಇದನ್ನೂ ಓದಿ » ಗೋಪಿ ಸರ್ಕಲ್‌ನಿಂದ ಕಾವಡಿಗಳ ಮೆರವಣಿಗೆ, ಮಹಿಳೆಯರಿಂದ ದೀಪಗಳ ಉತ್ಸವ, ಯಾವಾಗ?

ಇತ್ತೀಚಿಗೆ ಮಠಾಧೀಶರು ರಾಜಕೀಯದ ಬಗ್ಗೆ ಮಾತನಾಡುತ್ತಿರುವುದನ್ನು ಪ್ರಸ್ತಾಪಿಸಿದ ಅವರು, ರಾಜಕೀಯ ಪಕ್ಷಗಳಿಗೆ ಮಠಾಧೀಶರ ಆಶೀರ್ವಾದ ಬೇಕು. ಆದರೆ ಕೆಲವು ರಾಜಕೀಯ ಸ್ಥಿತ್ಯಂತರಗಳ ಸಂದರ್ಭ ಮಠಾಧೀಶರು ಜಾಗರೂಕತೆಯಿಂದ ಮಾತನಾಡಬೇಕು ಎಂಬುದು ತಮ್ಮ ಅಭಿಪ್ರಾಯವಾಗಿದೆ ಎಂದರು.

40 thoughts on “ಹೆಚ್ಚಿನ ತೆರಿಗೆಯಿಂದಾಗಿ ವ್ಯಸನಿಗರು ಗಾಂಜಾಗೆ ದಾಸರಾಗುತ್ತಿದ್ದಾರೆ, ಎಂಎಲ್‌ಸಿ ಆಕ್ರೋಶ”

Leave a Comment