ಹೆಚ್ಚಿನ ತೆರಿಗೆಯಿಂದಾಗಿ ವ್ಯಸನಿಗರು ಗಾಂಜಾಗೆ ದಾಸರಾಗುತ್ತಿದ್ದಾರೆ, ಎಂಎಲ್‌ಸಿ ಆಕ್ರೋಶ

No.1 News Website
 ಶಿವಮೊಗ್ಗ ಲೈವ್‌ 
ಮಲೆನಾಡು ಭಾಗದಲ್ಲಿ ಅತಿ ಹಚ್ಚು ಓದುಗರು ಮತ್ತು ಅತಿ ಹೆಚ್ಚು ವಿವ್ಸ್‌ ಹೊಂದಿರುವ ವೆಬ್‌ಸೈಟ್‌. ನೀವು ನಮ್ಮ ವಾಟ್ಸಪ್‌ ಗ್ರೂಪ್‌ ಸೇರಲು » ಇಲ್ಲಿ ಕ್ಲಿಕ್‌ ಮಾಡಿ.

shivamogga-live-logo-with-120-by-650-pixel-size.webp

ಶಿವಮೊಗ್ಗ: ರಾಜ್ಯದಲ್ಲಿ ಅಬಕಾರಿ ಮೇಲಿನ ತೆರಿಗೆ ಎದ್ವಾತದ್ವಾ ಏರಿಸುವುದರ ಮೂಲಕ ವ್ಯಸನಿಗರು ಗಾಂಜಾ ಸೇವನೆಗೆ ದಾಸರಾಗುವಂತೆ ಕಾಂಗ್ರೆಸ್ ಸರ್ಕಾರ ಮಾಡಿದೆ ಎಂದು ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿ.ಎಸ್‌.ಅರುಣ್‌, ರಾಜ್ಯದ ಆರ್ಥಿಕ ಪರಿಸ್ಥಿತಿಯ ಕುರಿತು ರಾಜ್ಯ ಸರ್ಕಾರ ಶ್ವೇತಪತ್ರ ಹೊರಡಿಸಲು ಅಧಿವೇಶನದಲ್ಲಿ ಆಗ್ರಹಿಸಲಾಗುವುದು. ರಾಜ್ಯ ಸರ್ಕಾರ ಜನರ ಮೇಲೆ ಹೆಚ್ಚಿನ ತೆರಿಗೆಯ ಹೊರೆ ಹೇರುತ್ತಿದೆ. ಅಬಕಾರಿ, ರಾಜ್ಯ ಹೆದ್ದಾರಿ, ಸ್ಟಾಂಪ್ ಡ್ಯೂಟಿ ಮೊದಲಾದವುಗಳ ಮೇಲೆ ಮನಸ್ಸಿ ಗೆ ಬಂದಂತೆ ತೆರಿಗೆ ಹೆಚ್ಚಿಸಿ ಸಾರ್ವಜನಿಕ ರನ್ನು ಲೂಟಿ ಹೊಡೆಯುತ್ತಿದೆ. ಅಬಕಾರಿ ಗುರಿಯನ್ನು ಶೇ.130 ರಿಂದ 160ಕ್ಕೆ ಏರಿಸಿದ್ದಲ್ಲದೆ ಬಾಕ್ಸ್ ಟಾರ್ಗೆಟ್‌ ಅನ್ನು 1,73,500 ರಿಂದ 1,99,500ಕ್ಕೆ ಏರಿಸಿದೆ. ಈ ಕುರಿತು ಬರುವ ಅಧಿವೇಶನದಲ್ಲಿ ಚರ್ಚಿಸಲಾಗುವುದು ಎಂದರು.

ಇದನ್ನೂ ಓದಿ » ಗೋಪಿ ಸರ್ಕಲ್‌ನಿಂದ ಕಾವಡಿಗಳ ಮೆರವಣಿಗೆ, ಮಹಿಳೆಯರಿಂದ ದೀಪಗಳ ಉತ್ಸವ, ಯಾವಾಗ?

ಇತ್ತೀಚಿಗೆ ಮಠಾಧೀಶರು ರಾಜಕೀಯದ ಬಗ್ಗೆ ಮಾತನಾಡುತ್ತಿರುವುದನ್ನು ಪ್ರಸ್ತಾಪಿಸಿದ ಅವರು, ರಾಜಕೀಯ ಪಕ್ಷಗಳಿಗೆ ಮಠಾಧೀಶರ ಆಶೀರ್ವಾದ ಬೇಕು. ಆದರೆ ಕೆಲವು ರಾಜಕೀಯ ಸ್ಥಿತ್ಯಂತರಗಳ ಸಂದರ್ಭ ಮಠಾಧೀಶರು ಜಾಗರೂಕತೆಯಿಂದ ಮಾತನಾಡಬೇಕು ಎಂಬುದು ತಮ್ಮ ಅಭಿಪ್ರಾಯವಾಗಿದೆ ಎಂದರು.

 

ಶಿವಮೊಗ್ಗದಲ್ಲಿ ಏನೇನಾಯ್ತು? ಇಲ್ಲಿವೆ ಸುದ್ದಿಗಳು. ಕೆಳಗಿರುವ ಹೆಡ್‌ಲೈನ್‌ ಮೇಲೆ ಕ್ಲಿಕ್‌ ಮಾಡಿ, ಸುದ್ದಿ ಓದಿ.

Number 1 News Website in shimoga - Shivamogga Live

 

Leave a Comment