ಶಿವಮೊಗ್ಗದಲ್ಲಿ ಬಸ್‌ ಹತ್ತಿ ಆಧಾರ್‌ ಕಾರ್ಡ್‌ ತೋರಿಸಲು ಮುಂದಾದ ಮಹಿಳೆಗೆ ಕಾದಿತ್ತು ಶಾಕ್‌, ಆಗಿದ್ದೇನು?

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

ಶಿವಮೊಗ್ಗ: ಕೆಎಸ್‌ಆರ್‌ಟಿಸಿ ಬಸ್‌ (Bus) ನಿಲ್ದಾಣದಲ್ಲಿ ಮಹಿಳೆಯರ ವ್ಯಾನಿಟಿ ಬ್ಯಾಗ್‌ನಿಂದ ಪರ್ಸ್‌, ಚಿನ್ನಾಭರಣ ಕಳ್ಳತನ ಪ್ರಕರಣಗಳು ಮುಂದುವರೆದಿದೆ. ಗಾಂಧಿ ಬಜಾರ್‌ನ ಧರ್ಮರಾಯನ ಬೀದಿಯ ಗಾಯತ್ರಿ ಎಂಬುವವರ ವ್ಯಾನಿಟಿ ಬ್ಯಾಗ್‌ನಿಂದ ಚನ್ನದ ಸರ, ನಗದು ಮತ್ತು ಆಧಾರ್‌ ಕಾರ್ಡ್‌ ಕಳ್ಳತನ ಮಾಡಲಾಗಿದೆ.

ಗಾಯತ್ರಿ ಅವರು ಹಿರೇಕೆರೂರಿನಲ್ಲಿರುವ ತಾಯಿ ಮನೆಗೆ ತೆರಳುತ್ತಿದ್ದರು. ಶಿವಮೊಗ್ಗದ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿ ಶಿಕಾರಿಪುರ ಬಸ್‌ ಹತ್ತಿದ್ದರು. ರಶ್‌ ಇದ್ದಿದ್ದರಿಂದ ನೂಕುನುಗ್ಗಲಿನಲ್ಲೆ ಬಸ್‌ ಹತ್ತಿ ಟಿಕೆಟ್‌ ಮಾಡಿಸಲು ಆಧಾರ್‌ ಕಾರ್ಡ್‌ ತೋರಿಸಲು ವ್ಯಾನಿಟಿ ಬ್ಯಾಗ್‌ಗೆ ಕೈ ಹಾಕಿದರು. ಬ್ಯಾಗಿನ ಸೈಡ್‌ ಜಿಪ್‌ನಲ್ಲಿದ್ದ ₹1.50 ಲಕ್ಷ ಮೌಲ್ಯದ 20 ಗ್ರಾಂ ತೂಕದ ಬಂಗಾರದ ಸರ, ₹1500 ನಗದು ಮತ್ತು ಆಧಾರ್‌ ಕಾರ್ಡ್‌ ಇಲ್ಲದಿರುವುದು ಗೊತ್ತಾಗಿದೆ. ಸುದ್ದಿಯ ಮುಂದಿನ 2 ಪ್ಯಾರಾಗಳು ಕೆಳಗಿವೆ.

KSRTC-Bus-General-Image-Shimoga-Bangalore

ಇದನ್ನೂ ಓದಿ » ಶಿವಮೊಗ್ಗದ ಮೊಬೈಲ್‌ ಅಂಗಡಿಯಿಂದ ಹೊರ ಬಂದ ಮೆಕಾನಿಕ್‌ಗೆ ಕಾದಿತ್ತು ಶಾಕ್

ಬಸ್‌ ಹತ್ತುವಾಗ ರಶ್‌ ಇತ್ತು. ಆ ಸಂದರ್ಭದಲ್ಲಿಯೇ ವ್ಯಾನಿಟಿ ಬ್ಯಾಗ್‌ನಿಂದ ಚಿನ್ನದ ಸರ, ನಗದು ಮತ್ತು ಆಧಾರ್‌ ಕಾರ್ಡ್‌ ಕಳ್ಳತನ ಆಗಿರುವ ಶಂಕೆ ಇದೆ ಗಾಯತ್ರಿ ದೂರಿನಲ್ಲಿ ಆರೋಪಿಸಿದ್ದಾರೆ. ಘಟನೆ ಸಂಬಂಧ ದೊಡ್ಡಪೇಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Comment