ಮಂಡಗದ್ದೆ ಬಳಿ ಅರಣ್ಯ ಇಲಾಖೆ ದಿಢೀರ್‌ ಕಾರ್ಯಾಚರಣೆ, ಇಬ್ಬರು ಆರೋಪಿಗಳು ಅರೆಸ್ಟ್‌

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

ತೀರ್ಥಹಳ್ಳಿ: ಅಕ್ರಮವಾಗಿ ಶ್ರೀಗಂಧ (Sandal Wood) ಸಾಗಣೆ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಮಂಡಗದ್ದೆ ವಲಯಾರಣ್ಯಧಿಕಾರಿ ವಿನಯಕುಮಾ‌ರ್ ನೇತೃತ್ವದ ಅರಣ್ಯ ಇಲಾಖೆ ಸಿಬ್ಬಂದಿ, ಸೋಮವಾರ ಬಂಧಿಸಿದೆ.

ಕಣಗಲಕೊಪ್ಪ ಗಸ್ತು ವಿಭಾಗದಲ್ಲಿ 33 ಕೆ.ಜಿ ಶ್ರೀಗಂಧದ ತುಂಡುಗಳನ್ನು ಅಕ್ರಮವಾಗಿ ಸಾಗಣೆಗೆ ಯತ್ನಿಸುತ್ತಿದ್ದ ಖಚಿತ ಮಾಹಿತಿ ಮೇರೆಗೆ ಡಿಎಫ್‌ಒ ಅಜ್ಜಯ್ಯ, ಎಸಿಎಫ್ ಮಧುಸೂದನ್ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ. ಸುದ್ದಿಯ ಮುಂದಿನ 3 ಪ್ಯಾರಾಗಳು ಕೆಳಗಿವೆ.

Mandagadde Graphics by smg live

ಮೇಲಿನಪಟ್ರೊಳ್ಳಿ ಗ್ರಾಮದ ಸ.ನಂ.06ರಲ್ಲಿ ಶ್ರೀಗಂಧ ಮರ ಕಡಿತಲೆ ಮಾಡಿ ಅಕ್ರಮವಾಗಿ ಸಂಗ್ರಹಿಸಿಟ್ಟ ತುಂಡುಗಳ ಜತೆಗೆ ಆರೋಪಿಗಳಾದ ಕಣಗಲಕೊಪ್ಪ ಗ್ರಾಮದ ಸತೀಶ್ (32), ಪ್ರಕಾಶ್ (32) ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ.

ಇದನ್ನೂ ಓದಿ » ಕಾನೂನು ಸಡಿಲಗೊಳಿಸಿದರೆ ಹೋರಾಟ ತೀವ್ರ, ಸರ್ಕಾರಕ್ಕೆ ವಿಹೆಚ್‌ಪಿ, ಬಜರಂಗದಳ ವಾರ್ನಿಂಗ್‌

ತಂಡದಲ್ಲಿ ಡಿಆರ್‌ಎಫ್‌ಒ ಅಮಿತ್, ಅರಣ್ಯ ರಕ್ಷಕ ಸಿಬ್ಬಂದಿ ಕಿರಣ್‌ ಕುಮಾ‌ರ್, ಮಹಾದೇವ್, ಚಾಲಕ ಅರುಣ್ ಇದ್ದರು.

Leave a Comment