ಶಿವಮೊಗ್ಗದಲ್ಲಿ ಆಟೋ, ಕಾರು ಡಿಕ್ಕಿ, ಆಟೋ ಚಾಲಕ ಸಾವು, ಹೇಗಾಯ್ತು ಘಟನೆ?

ಶಿವಮೊಗ್ಗ: ಆಟೋ ಮತ್ತು ಕಾರು ಡಿಕ್ಕಿಯಾಗಿ ಆಟೋ ಚಾಲಕ (auto driver) ಅಣ್ಣಾನಗರ ನಿವಾಸಿ ಅಲ್ತಾಫ್‌ ಪಾಷಾ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮಂಗಳವಾರ ರಾತ್ರಿ ಮಹಾವೀರ ವೃತ್ತದಲ್ಲಿ ಘಟನೆ ಸಂಭವಿಸಿದೆ.

ಇದನ್ನೂ ಓದಿ » ನೇಣು ಬಿಗಿದುಕೊಂಡು ಬಿ.ಕಾಂ ವಿದ್ಯಾರ್ಥಿನಿ ಆತ್ಮಹತ್ಯೆ

ಆಟೋ ಮತ್ತು ಕಾರಿನಲ್ಲಿದ್ದ ಪ್ರಯಾಣಿಕರಿಗೆ ಗಂಭೀರ ಗಾಯವಾಗಿದೆ. ಕಾರಿನಲ್ಲಿದವರು ಮಣಿಪಾಲದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆಟೋ ಚಾಲಕ ಅಲ್ತಾಫ್‌ ಪಾಷಾ ಅವರ ಪತ್ನಿ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಹೇಗಾಯ್ತು ಅಪಘಾತ?

Car-and-Auto-mishap-at-mahaveera-circle-in-Shimoga

ಆಟೋ ಗೋಪಿವೃತ್ತದಿಂದ ರೈಲ್ವೆ ನಿಲ್ದಾಣದ ಕಡೆಗೆ ತೆರಳುತ್ತಿತ್ತು. ಕಾರು ಶಿವಮೂರ್ತಿ ವೃತ್ತದಿಂದ ಡಿ.ವಿ.ಎಸ್. ವೃತ್ತದ ಕಡೆಗೆ ಚಲಿಸುತ್ತಿತ್ತು. ಮಹಾವೀರ ವೃತ್ತದಲ್ಲಿ ಕಾರು, ಆಟೋ ಡಿಕ್ಕಿಯಾಗಿವೆ. ಆಟೋ ಮುಂಭಾಗ ನಜ್ಜುಗುಜ್ಜಾಗಿದೆ. ಪೂರ್ವ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Car-and-Auto-mishap-at-mahaveera-circle-in-Shimoga

Leave a Comment