ಹೊಳೆಹೊನ್ನೂರು ಬಳಿ ಮೂರು ದಿನದ ಗಂಡು ಮಗವನ್ನು ರಸ್ತೆ ಬದಿ ಬಿಟ್ಟು ಹೋದ ದುರುಳರು

 ಶಿವಮೊಗ್ಗ  LIVE 

ಹೊಳೆಹೊನ್ನೂರು: ಸಮೀಪದ ಮಲ್ಲಾಪುರದ ಗ್ರಾಮದ ಬಳಿ ಸೋಮವಾರ ರಾತ್ರಿ 10.45ರ ಸುಮಾರಿಗೆ ನವಜಾತ ಗಂಡು ಶಿಶು (baby boy) ಪತ್ತೆಯಾಗಿದೆ.

ಸಾಸ್ವೆಹಳ್ಳಿ ಗ್ರಾಮದ ಕುಶ ಅವರು ತಮ್ಮ ದೊಡ್ಡಪ್ಪನ ಮಗ ತಿಪ್ಪೇಶ ಅವರಿಗೆ ಆನಾರೋಗ್ಯದ ಕಾರಣ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಹಿಂದಿರುವಾಗ ಸಮೀಪದ ಮಲ್ಲಾಪುರ ಗ್ರಾಮದ ಬಳಿ ಮಗು ಅಳುವ ಶಬ್ದ ಕೇಳಿಸಿದೆ. ಬಳಿಕ ತಮ್ಮ ಅತ್ತಿಗೆ ಸಹಾಯದೊಂದಿಗೆ ಸ್ಥಳಕ್ಕೆ ಹೋಗಿ ನೋಡಿದಾಗ 2–3 ದಿನದ ಗಂಡು ಮಗು ಪತ್ತೆಯಾಗಿದೆ.

unknown-baby-found-near-holehonnuru

ಇದನ್ನೂ ಓದಿ » ಶಿವಮೊಗ್ಗದಲ್ಲಿ ಆಟೋ, ಕಾರು ಡಿಕ್ಕಿ, ಆಟೋ ಚಾಲಕ ಸಾವು, ಹೇಗಾಯ್ತು ಘಟನೆ?

ಸುತ್ತಮುತ್ತಲಿನ ಮನೆಗಳಲ್ಲಿ ವಿಚಾರಿಸಿದಾಗ ಆ ಮಗುವು ಯಾರಿಗೂ ಸಂಬಂಧಪಟ್ಟಿಲ್ಲ ಎಂಬುದನ್ನು ದೃಢಪಡಿಸಿಕೊಂಡ ಅವರು ಪಟ್ಟಣದ ಠಾಣೆಯಲ್ಲಿ ದೂರು ನೀಡಿದ್ದಾರೆ.

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment