ಕಿರಾಣಿ ಅಂಗಡಿಗಳ ಮೇಲೆ ಪೊಲೀಸರ ದಾಳಿ, ಮಾಲೀಕರ ವಿರುದ್ದ ಕೇಸ್‌, ಕಾರಣವೇನು?

 ಶಿವಮೊಗ್ಗ  LIVE 

ರಿಪ್ಪನ್‌ಪೇಟೆ : ಆನೆಗದ್ದೆ ಗ್ರಾಮದ ಎರಡು ಪ್ರತ್ಯೇಕ ದಿನಸಿ ಅಂಗಡಿಗಳ ಮೇಲೆ ಮಂಗಳವಾರ ದಾಳಿ (police raid) ನಡೆಸಿರುವ ಪೊಲೀಸರು, ಅಕ್ರಮ ಮದ್ಯವನ್ನು ವಶ ಪಡಿಸಿಕೊಂಡಿದ್ದಾರೆ. ಸಾರ್ವಜನಿಕ ಸ್ಥಳದಲ್ಲಿ ಮದ್ಯ ಸೇವನೆಗೆ ಸ್ಥಳಾವಕಾಶ ಮಾಡಿಕೊಟ್ಟ ಖಚಿತ ಮಾಹಿತಿ ಮೇಲೆ ದಾಳಿ ನಡೆಸಿರುವ ಪೊಲೀಸರು, ದಿನಸಿ ಅಂಗಡಿಯ ಮುಂಭಾಗ ಮದ್ಯದ ಪೌಚ್‌ಗಳನ್ನು ಪತ್ತೆ ಹಚ್ಚಿ ವಶಪಡಿಸಿಕೊಂಡಿದ್ದಾರೆ.

ಇದನ್ನೂ ಓದಿ » ಮೂರು ದಿನದ ಗಂಡು ಮಗವನ್ನು ರಸ್ತೆ ಬದಿ ಬಿಟ್ಟು ಹೋದ ದುರುಳರು

ವೀರೇಶ್ ಹಾಗೂ ಆನಂದ ಎಂಬುವರ ವಿರುದ್ಧ ಪಟ್ಟಣದ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪಿಎಐ ರಾಜುರೆಡ್ಡಿ, ಸಿಬ್ಬಂದಿ ಸಂತೋಷ್, ಉಮೇಶ್ ದಾಳಿಯಲ್ಲಿದ್ದರು.

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment