ಶಿವಮೊಗ್ಗ LIVE
ಭದ್ರಾವತಿ: ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯ (VISL) ನಿವೃತ್ತ ಕಾರ್ಮಿಕರ ಕಲ್ಯಾಣ ಕೇಂದ್ರದ ಚುನಾವಣೆ ಡಿ.28ರಂದು ನಡೆಯಲಿದೆ. 15 ನಿರ್ದೇಶಕರ ಸ್ಥಾನಗಳಿಗೆ ಒಟ್ಟು 32 ಮಂದಿ ಕಣದಲ್ಲಿದ್ದಾರೆ.
ಸಿಲ್ವರ್ ಜ್ಯೂಬಿಲಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲೆ ವಿಭಾಗದಲ್ಲಿ ಬೆಳಿಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆವರೆಗೆ ಚುನಾವಣೆ ಜರುಗಲಿದೆ. 2,902 ಮಂದಿ ನಿವೃತ್ತ ನೌಕರರು ಮತ ಚಲಾಯಿಸಲಿದ್ದಾರೆ. ಇದೇ ದಿನ ಫಲಿತಾಂಶ ಪ್ರಕಟವಾಗಲಿದೆ.
ಹಾಲಿ ಅಧ್ಯಕ್ಷರ ನೇತೃತ್ವದಲ್ಲಿ ತಂಡ ಅಖಾಡಕ್ಕೆ
ಹಾಲಿ ಅಧ್ಯಕ್ಷ ಬಿ.ಜೆ.ರಾಮಲಿಂಗಯ್ಯ ನೇತೃತ್ವದಲ್ಲಿ ಹಾಲಿ ನಿರ್ದೇಶಕರಾದ ಅಡವೀಶಯ್ಯ, ಕೆಂಪಯ್ಯ, ಎಸ್.ಗಜೇಂದ್ರ, ಎಲ್. ಬಸವರಾಜಪ್ಪ, ಎಸ್.ಎಸ್.ಭೈರಪ್ಪ, ಬಿ. ಮಂಜುನಾಥ್, ಮಹೇಶ್ವರಪ್ಪ, ಬಿ.ಕೆ.ರವೀಂದ್ರ ರೆಡ್ಡಿ, ಬಿ.ಜೆ.ರಾಮಲಿಂಗಯ್ಯ, ಲಾಜರ್, ಜಿ. ಶಂಕರ್, ಎಸ್.ಎಚ್.ಹನುಮಂತರಾವ್, ಹೊಸದಾಗಿ ರಾಮಪ್ಪ ವಿ. ಮುನೇನಕೊಪ್ಪ, ಎನ್.ಆರ್.ಜಯರಾಜ್ ಮತ್ತು ಪಿ.ಮಂಜುನಾಥ ರಾವ್ ಕಣಕ್ಕಿಳಿದಿದ್ದಾರೆ.

ಇದನ್ನೂ ಓದಿ » ಬೊಲೇರೋ ವಾಹನ ಪಲ್ಟಿ, ಮಹಿಳೆ ಸಾವು, ಎಲ್ಲಿ? ಹೇಗಾಯ್ತು ಘಟನೆ?
ಒಕ್ಕೂಟದ ಹೆಸರಿನಲ್ಲಿ ಪ್ರತಿಸ್ಪರ್ಧೆ
ವಿಐಎಸ್ಎಲ್ ನಿವೃತ್ತ ಕಾರ್ಮಿಕರ ಒಕ್ಕೂಟದ ಹೆಸರಿನಲ್ಲಿ ಎ. ಈಶ್ವರಪ್ಪ, ಕರೀಂ ಫಿರಾನ್, ಕೆ.ಎನ್.ಗಂಗಾಧರ ಸ್ವಾಮಿ, ಚಂದ್ರಮೋಹನ್, ಎಸ್. ನರಸಿಂಹಚಾರ್, ನಾಗರಾಜ, ಎಸ್.ಈ.ನಂಜುಂಡೇಗೌಡ, ಎಸ್. ನಾಗರಾಜ, ಕೆ.ಮುರಳಿಧರ, ರಾಜ, ಕೆ. ರಾಜಪ್ಪ, ಬಿ. ರಾಮಚಂದ್ರ, ಬಿ.ಎನ್.ಶ್ರೀನಿವಾಸ ಮತ್ತು ಬಿ.ಎಸ್. ಶ್ರೀನಿವಾಸಯ್ಯ ಸ್ಪರ್ಧೆ ಮಾಡುತ್ತಿದ್ದಾರೆ. ಇಬ್ಬರು ಸ್ವತಂತ್ರ ಅಭ್ಯರ್ಥಿಗಳಾಗಿ ಸ್ಪರ್ಧಿಸಿದ್ದಾರೆ.
LATEST NEWS
- ಮಾಚೇನಹಳ್ಳಿ ಸುತ್ತಮುತ್ತ ಜನವರಿ 17ರಂದು ಇಡೀ ದಿನ ಕರೆಂಟ್ ಇರಲ್ಲ, ಎಲ್ಲೆಲ್ಲಿ? ಇಲ್ಲಿದೆ ಲಿಸ್ಟ್

- ಶಿವಮೊಗ್ಗದಿಂದ ಮತ್ತಷ್ಟು ಊರುಗಳಿಗೆ ರೈಲು, ಸಂಸದ ರಾಘವೇಂದ್ರ ಹೇಳಿಕೆ, ಇಲ್ಲಿದೆ ಪಾಯಿಂಟ್ಸ್

- ತೀರ್ಥಹಳ್ಳಿ ಅಪಘಾತ, ಸಾವಿನ ಸಂಖ್ಯೆ ಹೆಚ್ಚಳ, ಆಗಿದ್ದೇನು? ಇಲ್ಲಿದೆ ಫುಲ್ ಡಿಟೇಲ್ಸ್

- ಮತ್ತೆ ಏರಿತು ಅಡಿಕೆ ರೇಟ್, ಒಂದು ಲಕ್ಷದ ಸಹಿಕ್ಕೆ ಧಾರಣೆ | 14 ಜನವರಿ 2026 | ಇವತ್ತಿನ ಅಡಿಕ ಧಾರಣೆ

- ಶಿವಮೊಗ್ಗ ಕೇಂದ್ರ ಕಾರಾಗೃಹದ ಕೈದಿ ಮೆಗ್ಗಾನ್ ಆಸ್ಪತ್ರೆಯಲ್ಲಿ ಸಾವು, ಆಗಿದ್ದೇನು?

About The Editor
ನಿತಿನ್ ಆರ್.ಕೈದೊಟ್ಲು





