ವಿದ್ಯುತ್‌ ಕಂಬಕ್ಕೆ ಬೈಕ್‌ ಡಿಕ್ಕಿ, ಯುವಕ ಸಾವು, ಮತ್ತೊಬ್ಬನಿಗೆ ಗಂಭೀರ ಪೆಟ್ಟು

 ಶಿವಮೊಗ್ಗ  LIVE 

ಕುಂಸಿ: ತೀರ್ಥಹಳ್ಳಿ ತಾಲೂಕು ಹುಂಚದಕಟ್ಟೆ ಬಳಿ ಭಾನುವಾರ ರಾತ್ರಿ ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿಯಾಗಿ (bike crash) ಸಮೀಪದ ಸನ್ನಿವಾಸದ ಯುವಕ ಅವಿನಾಶ (23) ಸ್ಥಳದಲ್ಲೆ ಮೃತಪಟ್ಟಿದ್ದಾರೆ.

ಹಿಂಬದಿ ಸವಾರ ನಿತ್ಯಾನಂದಗೆ ಗಂಭೀರ ಪೆಟ್ಟಾಗಿದೆ. ಅವರನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವಿನಾಶ್ ಹಾಗೂ ಆತನ ಸ್ನೇಹಿತ ನಿತ್ಯಾನಂದ ಭಾನುವಾರ ತೀರ್ಥಹಳ್ಳಿಯ ಎಳ್ಳಮಾವಾಸ್ಯೆ ಜಾತ್ರೆಗೆ ಹೋಗಿ ರಾತ್ರಿ ವಾಪಸ್ ಬರುವಾಗ ಹುಂಚದಕಟ್ಟೆ ಬಳಿ ನಿಯಂತ್ರಣ ತಪ್ಪಿ ಬೈಕ್‌ ವಿದ್ಯುತ್‌ ಕಂಬಕ್ಕೆ ಗುದ್ದಿದೆ. ತೀರ್ಥಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Bike-Crash-youth-succumbed-at-Thirthahalli.

ಇದನ್ನೂ ಓದಿ » ಅಮೀರ್‌ ಅಹಮದ್‌ ಸರ್ಕಲ್‌ನಲ್ಲಿ ಚಾಕು ಇರಿತ ಕೇಸ್‌, ಮೂವರು ಅರೆಸ್ಟ್‌, ಏನಿದು ಪ್ರಕರಣ?

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment