ಶಿವಮೊಗ್ಗ ಡಿಸಿಸಿ ಬ್ಯಾಂಕ್‌, 72 ವರ್ಷದಲ್ಲಿ ಅತ್ಯಧಿಕ ಲಾಭ ಗಳಿಕೆ, ಮುಂದನ ವರ್ಷದ ಟಾರ್ಗೆಟ್‌ ಎಷ್ಟು?

 ಶಿವಮೊಗ್ಗ  LIVE 

ಶಿವಮೊಗ್ಗ: ಪ್ರಸಕ್ತ ಸಾಲಿನಲ್ಲಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ನ (DCC Bank) ₹36.75 ಕೋಟಿ ಲಾಭ ಗಳಿಸಿದೆ. ಮುಂದಿನ ಹಣಕಾಸು ವರ್ಷದಲ್ಲಿ ₹45 ಕೋಟಿ ಲಾಭ ಗಳಿಸುವ ಗುರಿ ಹೊಂದಿದೆ ಎಂದು ಬ್ಯಾಂಕ್‌ನ ಅಧ್ಯಕ್ಷ ಡಾ. ಆರ್.ಎಂ.ಮಂಜುನಾಥ ಗೌಡ ತಿಳಿಸಿದರು.

ಡಿಸಿಸಿ ಬ್ಯಾಂಕ್‌ ಆವರಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಂಜುನಾಥ ಗೌಡ, ಬ್ಯಾಂಕ್‌ ಸ್ಥಾಪನೆಯಾಗಿ 72 ವರ್ಷದಲ್ಲಿ ಇದು ಅತ್ಯಧಿಕ ಲಾಭ ಗಳಿಕೆಯಾಗಿದೆ ಎಂದು ತಿಳಿಸಿದರು.

ಅಧ್ಯಕ್ಷರು ಏನೇನೆಲ್ಲ ಹೇಳಿದರು? ಇಲ್ಲಿದೆ ಪಾಯಿಂಟ್ಸ್‌

1ಮುಂದಿನ ಹಣಕಾಸು ವರ್ಷದಲ್ಲಿ 1.20 ಲಕ್ಷ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ₹1300 ಕೋಟಿ ಅಲ್ಪಾವಧಿ ಕೃಷಿ ಬೆಳೆ ಸಾಲ, 1500 ರೈತರಿಗೆ ಶೇ.3 ರ ಬಡ್ಡಿ ದರದಲ್ಲಿ ₹80 ಕೋಟಿ ಮಧ್ಯಮಾವಧಿ ಕೃಷಿ ಸಾಲ ಹಂಚಿಕೆ ಮಾಡುವ ಯೋಜನೆ ಇದೆ.

DCC-Bank-President-RM-Manjunatha-gowda-and-M-Srikanth.

22100 ಸ್ವ-ಸಹಾಯ ಸಂಘಗಳಿಗೆ ₹100 ಕೋಟಿ ಸಾಲ ವಿತರಿಸುವ ಯೋಜನೆ ಇದೆ. ₹1900 ಕೋಟಿ ಠೇವಣಿ ಸಂಗ್ರಹಿಸುವ ಗುರಿ ಇದೆ.

3ಪೆಟ್ರೋಲ್ ಬಂಕ್, ಟ್ರಾನ್ಸ್‌ಪೋರ್ಟ್ ಕಂಪನಿ, ಹಾಸ್ಪಿಟಲ್ ಮುಂತಾದ ಉದ್ಯಮಗಳಿಗೆ ಡಿಸಿಸಿ ಬ್ಯಾಂಕ್‌ನಿಂದ ಸಾಲ ನೀಡುವ ಮೂಲಕ, ಕೃಷಿಯೇತರ ಸಾಲ ನೀಡಿಕೆ ಹೆಚ್ಚಿಸುವ ಯೋಜನೆ ಇದೆ.

DCC-Bank-President-RM-Manjunatha-gowda-and-M-Srikanth.

4ಸದ್ಯದಲ್ಲಿಯೇ ಐ.ಎಂ.ಪಿ.ಎಸ್ ಹಾಗೂ ಯು.ಪಿ.ಐ ಸೌಲಭ್ಯಗಳನ್ನು ಗ್ರಾಹಕರಿಗೆ ಒದಗಿಸಲಾಗುವುದು.

DCC-Bank-President-RM-Manjunatha-gowda-and-M-Srikanth.

ಕ್ಯಾಲೆಂಡರ್‌, ಡೈರಿ ಬಿಡುಗಡೆ

ಇದೇ ವೇಳೆ, 2026ರ ಕ್ಯಾಲೆಂಡರ್‌ ಮತ್ತು ಡೈರಿಯನ್ನು ಬಿಡುಗಡೆ ಮಾಡಲಾಯಿತು. ಅಧ್ಯಕ್ಷ ಆರ್‌.ಎಂ.ಮಂಜುನಾಥ ಗೌಡ, ಉಪಾಧ್ಯಕ್ಷ ಮರಿಯಪ್ಪ, ರಾಜ್ಯ ನಿರ್ದೇಶಕ ಎಂ.‍ಶ್ರೀಕಾಂತ್‌, ನಿರ್ದೇಶಕರು ಕ್ಯಾಲೆಂಡರ್‌, ಡೈರಿ, ಟೇಬಲ್‌ ಕ್ಯಾಲೆಂಡರ್‌ಗಳನ್ನು ಬಿಡುಗಡೆ ಮಾಡಿದರು.

ಇದನ್ನೂ ಓದಿ » ಸಿರಿಧಾನ್ಯ, ಮರೆತು ಹೋದ ಖಾದ್ಯಗಳ ಪಾಕ ಸ್ಪರ್ಧೆ, ಯಾವಾಗ? ಯಾರೆಲ್ಲ ಸ್ಪರ್ಧಿಸಬಹುದು?

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment