ಶಿಕಾರಿಪುರದಲ್ಲಿ ಒಂಟಿ ಸಲಗ ಪ್ರತ್ಯಕ್ಷ, ಗ್ರಾಮಸ್ಥರಲ್ಲಿ ಆತಂಕ, ಅರಣ್ಯ ಇಲಾಖೆ ಏನೆಲ್ಲ ಕ್ರಮ ಕೈಗೊಂಡಿದೆ?

 ಶಿವಮೊಗ್ಗ  LIVE 

ಶಿರಾಳಕೊಪ್ಪ: ಶಿಕಾರಿಪುರ ತಾಲೂಕಿನ ಸುಣ್ಣದಕೊಪ್ಪ, ಕೊರಟಿಕೆರೆ ಮತ್ತು ಮಾಯಿತಮ್ಮನ ಮುಚಡಿ ಗ್ರಾಮಗಳ ಸುತ್ತಮುತ್ತ ಒಂಟಿ ಸಲಗ (lone elephant) ಕಾಣಿಸಿಕೊಂಡು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.

Wild-elephant-at-Shikaripura

ಸುಣ್ಣದಕೊಪ್ಪದ ಕಡೆಗದ್ದೆಯ ಜೋಳದ ಹೊಲದಲ್ಲಿ ಆನೆಯ ಹೆಜ್ಜೆ ಗುರುತು ಮತ್ತು ಲದ್ದಿಯನ್ನು ಕಂಡ ರೈತರು ಅರಣ್ಯ ಇಲಾಖೆಗೆ ಸುದ್ದಿ ಮುಟ್ಟಿಸಿದ್ದರು. ಭದ್ರಾ ವನ್ಯಜೀವಿ ವಲಯದಿಂದ ಬಂದ ಆನೆ ಇದಾಗಿದ್ದು ಶೆಟ್ಟಿಹಳ್ಳಿ, ಅರಸಾಳು, ರಿಪ್ಪನ್ ಪೇಟೆ, ಚೋರಡಿ, ಸೊರಬದ ಉಳವಿ, ಸಾಗದ್ದೆ, ಕೊಡಕಣಿ, ತೊಗರ್ಸಿ ಮೂಲಕ ಬ್ಯಾಡಗಿ ವರೆಗೂ ಸಂಚಾರ ನಡೆಸಿ ರಾತ್ರಿ ಹಿರೇಕೇರೂರು ಪಟ್ಟಣದಲ್ಲಿ ಸಂಚರಿಸಿ ಈಗ ತಾಳಗುಂದ ಹೋಬಳಿಯಲ್ಲಿ ಕಾಣಿಸಿಕೊಂಡಿದೆ.

ಉಪ ಅರಣ್ಯ ಸಂರಕ್ಷಣಾಧಿಕಾರಿ ಡಿ.ಮೋಹನ್ ಕುಮಾರ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ರವೀಂದ್ರ ನಾಯ್ಕ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಯುತ್ತಿದೆ. ಸಿಬ್ಬಂದಿ ಆನೆಯ ಚಲನವಲನ ಗಮನಿಸಿದಾಗ ಶಿವನ ಪಾದದ ಹತ್ತಿರ ಆನೆ ಕಂಡುಬಂದಿದೆ. ಸುಣ್ಣದಕೊಪ್ಪ, ಕೊರಟಿಕೆರೆ ಮತ್ತು ಮಾಯಿತಮ್ಮನ ಮುಚಡಿ ಗ್ರಾಮಗಳಲ್ಲಿ ರಾತ್ರಿ ವೇಳೆ ರೈತರು ಓಡಾಟ ನಡೆಸದಂತೆ ಮೈಕ್ ಮೂಲಕ ಎಚ್ಚರಿಕೆ ನೀಡಲಾಗಿದೆ. ಆನೆ ಬಂದ ದಾರಿಯಲ್ಲೆ ಕಳಿಸುವ ಪ್ರಯತ್ನ ನಡೆಯುತ್ತಿದೆ. 

ಇದನ್ನೂ ಓದಿ » ಹಿಂದೂಗಳ ಹತ್ಯೆ, ದೇವಾಸ್ಥಾನಗಳು ಧ್ವಂಸ, ನಿಲ್ಲದ ದೌರ್ಜನ, ಶಿವಮೊಗ್ಗದಲ್ಲಿ ಆಕ್ರೋಶ

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment