ಹಣಗೆರೆಕಟ್ಟೆಯಲ್ಲಿ ಕಾಣಿಕೆ ಎಣಿಕೆ ಪೂರ್ಣ, ಹುಂಡಿಯಲ್ಲಿ ಎಷ್ಟಿತ್ತು ಹಣ?

 ಶಿವಮೊಗ್ಗ  LIVE 

ತೀರ್ಥಹಳ್ಳಿ: ಹಣಗೆರೆಕಟ್ಟೆಯ (Hanagerekatte) ಭೂತರಾಯ ಚೌಡೇಶ್ವರಿ ದೇವಾಲಯಕ್ಕೆ ಭಕ್ತರು ಅರ್ಪಿಸಿದ್ದ ಕಾಣಿಕೆ ಹಣದ ಎಣಿಕೆ ಕಾರ್ಯ ನಡೆಯಿತು. ಹುಂಡಿಯಲ್ಲಿ ಒಟ್ಟು ₹62,42,145 ಕಾಣಿಕೆ ಸಂಗ್ರಹವಾಗಿತ್ತು. ಇದರಲ್ಲಿ ₹2,45,695 ಚಿಲ್ಲರೆ ನಾಣ್ಯಗಳು ಸೇರಿವೆ.

Hanagerekatte-hundi-kanike-counting

ಕಳೆದ ಆಗಸ್ಟ್ ತಿಂಗಳಿನಲ್ಲಿ ನಡೆದ ಎಣಿಕೆಯ ಸಂದರ್ಭದಲ್ಲಿ 71.95 ಲಕ್ಷ ರೂಪಾಯಿ ಹಣ ಸಂಗ್ರಹಗೊಂಡಿತ್ತು. ಹುಂಡಿ ಎಣಿಕೆ ಕಾರ್ಯವು ತಹಸೀಲ್ದಾರ್ ಎಸ್. ರಂಜಿತ್ ಮತ್ತು ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ರೇಣುಕಾ ಹೊಸಮನಿ ಅವರ ಸಮ್ಮುಖದಲ್ಲಿ ನಡೆಯಿತು.

ಇದನ್ನೂ ಓದಿ » ಶಿವಮೊಗ್ಗದ ಸಾಗರ ರಸ್ತೆಯಲ್ಲಿ ಬಸ್‌, ಬೈಕ್‌ ಡಿಕ್ಕಿ, ಸಿರಿಗೆರೆಯ ಇಬ್ಬರಿಗೆ ಗಾಯ

ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯೆ ಬಿ. ವರಲಕ್ಷ್ಮಿ ಪ್ರಕಾಶ್, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಾಮಪ್ಪ, ವಿವಿಧ ಸಮಿತಿ ಸದಸ್ಯರು, ಧಾರ್ಮಿಕ ದತ್ತಿ ಇಲಾಖೆ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು. ಮಾಳೂರು ಪೊಲೀಸ್ ಠಾಣೆಯ ಸಿಬ್ಬಂದಿ ಎಣಿಕೆ ಕಾರ್ಯಕ್ಕೆ ಭದ್ರತೆ ಒದಗಿಸಿದ್ದರು.

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment