ಶಿವಮೊಗ್ಗದಲ್ಲಿ ತೆರೆಯಿತು ವೈಕುಂಠ ದ್ವಾರ, ದೇವರ ದರ್ಶನ ಪಡೆದ ಭಕ್ತ ಸಾಗರ

ಶಿವಮೊಗ್ಗ: ವೈಕುಂಠ ಏಕಾದಶಿ (Vaikuntha Ekadashi) ಹಿನ್ನೆಲೆ ನವುಲೆಯ ಶ್ರೀ ವೆಂಕಟರಮಣ ದೇವಸ್ಥಾನಕ್ಕೆ ಬೆಳಗ್ಗೆಯಿಂದ ದೊಡ್ಡ ಸಂಖ್ಯೆಯ ಭಕ್ತರು ಆಗಮಿಸುತ್ತಿದ್ದಾರೆ. ಸ್ವರ್ಗದ ಬಾಗಲಿನ ಮೂಲಕ ದೇವರ ದರ್ಶನ ಪಡೆದು ಪೂಜೆ ಸಲ್ಲಿಸುತ್ತಿದ್ದಾರೆ.

ವೈಕುಂಠ ಏಕಾದಶಿ ಅಂಗವಾಗಿ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಶ್ರೀ ಲಕ್ಷ್ಮಿ ವೆಂಕಟೇಶ್ವರ ದೇವರಿಗೆ ಹೂಗಳಿಂದ ವಿಶೇಷ ಅಲಂಕಾರ ಮಾಡಲಾಗಿದೆ. ಬೆಳಗ್ಗೆಯೆ ಸ್ವರ್ಗದ ಬಾಗಿಲು ತೆರೆಯಲಾಗಿದ್ದು ಭಕ್ತರು ದೊಡ್ಡ ಸಂಖ್ಯೆಯಲ್ಲಿ ಈ ಬಾಗಿಲಿನ ಮೂಲಕ ಪ್ರವೇಶಿಸಿ ಪುನೀತರಾಗುತ್ತಿದ್ದಾರೆ. ದೇವರ ದರ್ಶನ ಪಡೆದು, ಶ್ರದ್ಧೆ, ಭಕ್ತಿಯಿಂದ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.

ಇದನ್ನೂ ಓದಿ » ಹುಲಿಕಲ್‌ ಘಾಟಿಯಲ್ಲಿ ಧರೆಗೆ ಗುದ್ದಿದ ಬಸ್‌, ಮಗು ಸಾವು, ಮೂವರು ಆಸ್ಪತ್ರೆಗೆ ದಾಖಲು

ವಿವಿಧ ದೇಗುಲಗಳಲ್ಲಿ ಪೂಜೆ

ಇನ್ನು, ಶಿವಮೊಗ್ಗ ನಗರದ ವಿವಿಧ ದೇವಸ್ಥಾನಗಳಿಗು ಇಂದು ಬೆಳಗ್ಗೆಯಿಂದಲೇ ದೊಡ್ಡ ಸಂಖ್ಯೆಯ ಭಕ್ತರು ಭೇಟಿ ನೀಡಿ ದೇವರ ದರ್ಶನ ಪಡೆಯುತ್ತಿದ್ದಾರೆ. ಕೋಟೆ ಶ್ರೀ ಸೀತಾರಾಮಾಂಜನೇಯ ದೇಗುಲಕ್ಕೆ ಹೆಚ್ಚಿನ ಭಕ್ತರು ಬಂದು ದೇವರ ದರ್ಶನ ಪಡೆದರು. ಗೌಡ ಸಾರಸ್ವತ ಸಮಾಜದ ಶ್ರೀ ಲಕ್ಷ್ಮಿ ವೆಂಕಟರಮಣ ದೇಗುಲಕ್ಕು ಹೆಚ್ಚಿನ ಭಕ್ತರು ಆಗಮಿಸುತ್ತಿದ್ದಾರೆ.

Vaikunta-Ekadashi-in-Navule-Vekateshwara-temple

Vaikunta-Ekadashi-in-Navule-Vekateshwara-temple

Vaikunta-Ekadashi-in-Navule-Vekateshwara-temple

Vaikunta-Ekadashi-in-Navule-Vekateshwara-temple

ನಿತಿನ್ ಆರ್‌.ಕೈದೊಟ್ಲು
ನಿತಿನ್ ಆರ್‌.ಕೈದೊಟ್ಲು

Published : December 30, 2025 at 11:03 AM IST

JNN College of Engineering Admissions started

© ಶಿವಮೊಗ್ಗ ಲೈವ್‌ : ಡಿಸೆಂಬರ್ 30, 2025

Leave a Comment