ಹುಲಿಕಲ್‌ ಘಾಟಿಯಲ್ಲಿ ಧರೆಗೆ ಗುದ್ದಿದ ಬಸ್‌, ಮಗು ಸಾವು, ಮೂವರು ಆಸ್ಪತ್ರೆಗೆ ದಾಖಲು

ಹೊಸನಗರ: ಖಾಸಗಿ ಬಸ್‌ ಅಪಘಾತಕ್ಕೀಡಾಗಿ ಮಗು ಸಾವನ್ನಪ್ಪಿದೆ. ಮೂವರು ಗಾಯಗೊಂಡಿದ್ದು ಅವರನ್ನು ಉಡುಪಿಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. (Hulikal Ghat).

Durgamba-Bus-incident-at-Hulikal-Ghat

ಹೊಸನಗರ ತಾಲೂಕು ಹುಲಿಕಲ್‌ ಘಾಟಿಯಲ್ಲಿ ಘಟನೆ ಸಂಭವಿಸಿದೆ. ರಸ್ತೆ ಬದಿಯ ಧರೆಗೆ ಬಸ್‌ ಡಿಕ್ಕಿ ಹೊಡೆದಿದೆ.

ಹೇಗಾಯ್ತು ಘಟನೆ?

ದಾವಣಗೆರೆಯಿಂದ ಮಂಗಳೂರಿಗೆ ತೆರಳುತ್ತಿದ್ದ ದುರ್ಗಾಂಬ ಸಂಸ್ಥೆಯ ಬಸ್‌ ಹುಲಿಕಲ್‌ ಘಾಟಿಯಲ್ಲಿ ಧರೆಗೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಮಗು ಸಾವನ್ನಪ್ಪಿದೆ. ಶರೀಫಾ ಬಿ (57) , ಇಮಾಮ್‌ ಸಾಬ್‌ (73), ಸಫಾನ (28) ಎಂಬುವವರು ಗಾಯಗೊಂಡಿದ್ದಾರೆ. ಅವರನ್ನು ಉಡುಪಿಯ ಆದರ್ಶನ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

Durgamba-Bus-incident-at-Hulikal-Ghat

ಇದನ್ನೂ ಓದಿ » ಶಿವಮೊಗ್ಗ ಜಿಲ್ಲೆಯಲ್ಲಿ ಏನೇನಾಯ್ತು? ಒಂದೇ ಕ್ಲಿಕ್‌ನಲ್ಲಿ ಎಲ್ಲ ಸುದ್ದಿಗಳು

ಘಟನೆಯಲ್ಲಿ ಬಸ್ಸಿನ ಮುಂಭಾಗ ಜಖಂ ಆಗಿದೆ. ಮಾಹಿತಿ ತಿಳಿಯುತ್ತಿದ್ದ ನಗರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

Durgamba-Bus-incident-at-Hulikal-Ghat

Leave a Comment