ಶಿವಮೊಗ್ಗದ 120 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ, ವಿಜ್ಞಾನಿಯಿಂದ ಪ್ರಮುಖ ಸಲಹೆ, ಏನೇನೆಲ್ಲ ಹೇಳಿದರು?

 ಶಿವಮೊಗ್ಗ  LIVE 

ಶಿವಮೊಗ್ಗ: ನ್ಯಾನೋ, ಬಯೋ ಮತ್ತು ಕೃತಕ‌ ಬುದ್ಧಿಮತ್ತೆಯ ತಂತ್ರಜ್ಞಾನಗಳು ಒಟ್ಟಾಗಿ ಕೂಡಿ ಬರುವ ಮೂಲಕ, ಜಗತ್ತಿನಲ್ಲಿ ರಭಸದ ಬದಲಾವಣೆ ಸಾಧ್ಯವಾಗುತ್ತಿದೆ ಎಂದು ವಿಜ್ಞಾನಿ ಡಾ.ಎಸ್.ಎಂ.ಶಿವಪ್ರಸಾದ್ ಹೇಳಿದರು. (Graduation Day)

ರಾಷ್ಟ್ರೀಯ ಔಷಧ ಮಹಾವಿದ್ಯಾಲಯದ ವತಿಯಿಂದ ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ಅಂತಿಮ ವರ್ಷದ ಪದವಿ ಮತ್ತು ಸ್ನಾತಕೋತ್ತರ ಫಾರ್ಮಸಿ ವಿದ್ಯಾರ್ಥಿಗಳ ಗ್ರಾಜುಯೇಷನ್ ಡೇ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ದಶಕಗಳ ಹಿಂದೆ ವಿಜ್ಞಾನವಾಗಿದ್ದ ನ್ಯಾನೋ, ಬಯೋ ವಿಷಯಗಳು, ತಂತ್ರಜ್ಞಾನದ ರೂಪ ಪಡೆದು, ಕೃತಕ ಬುದ್ಧಿಮತ್ತೆಯ ಮೂಲಕ ಅಮೂಲಾಗ್ರ ಬದಲಾವಣೆ ತರುತ್ತಿವೆ. ಅಂತಹ ಬದಲಾವಣೆಗಳಿಗೆ ಯುವ ಸಮೂಹ ಸಾಕ್ಷಿಯಾಗುತ್ತಿದ್ದಾರೆ ಎಂದರು.  

NES-Pharmacy-College-degree-Graduation-Day

ಒಂದು ದೊಡ್ಡ ಜವಾಬ್ದಾರಿಯ ಜೊತೆಗೆ ಪದವಿಯ ಸಂಭ್ರಮವನ್ನು ಆಚರಿಸಿ. ಪದವಿಯು ಸ್ವಾತಂತ್ರವಾಗಿ ಸಧೃಡ ಬದುಕು ನಡೆಸಲು ಪೂರಕವಾಗಿದೆ‌. ಬದಲಾಗುತ್ತಿರುವ ಜಗತ್ತಿಗೆ ಅನುಗುಣವಾಗಿ, ನಿಭಾಯಿಸಬಲ್ಲ ಶಕ್ತಿ ಪದವೀಧರರು ಹೊಂದಬೇಕು. ಯಶಸ್ಸಿನ ವ್ಯಕ್ತಿತ್ವಗಳಿಂದ ಪ್ರೇರಣೆ ಪಡೆಯಿರಿ. ಜ್ಞಾನದ ಮೂಲಕ ಪ್ರೀತಿ, ಸೌಹಾರ್ದತೆ, ಮಾನವೀಯತೆ ತುಂಬಿದ ಸಮಾಜ ನಿರ್ಮಾಣ ಮಾಡುವತ್ತ ಶ್ರಮಿಸಿ ಎಂದು ಸಲಹೆ ನೀಡಿದರು. 

ಬದುಕಿನಲ್ಲಿ‌ ನಿಮ್ಮ ಆಸಕ್ತ ಕ್ಷೇತ್ರವನ್ನು ಉದ್ಯೋಗವಾಗಿ ಬದಲಾಯಿಸಿಕೊಳ್ಳಿ. ಜ್ಞಾನದ ಜೊತೆಗೆ ಉತ್ಸಾಹ ಮತ್ತು ಕೌಶಲ್ಯತೆಗೆ ಆದ್ಯತೆ ನೀಡಿ. ನಿಮ್ಮಲ್ಲಿರುವ ಶಕ್ತಿ ಮತ್ತು ದೌರ್ಬಲ್ಯಗಳನ್ನು ವಿಮರ್ಶಿಸಿಕೊಳ್ಳಿ. ಇತರ ಪ್ರಶ್ನೆಗಳಿಗೆ ಉತ್ತರಿಸುವ ಪ್ರಯತ್ನಗಳಿಗಿಂತ, ನಿಮ್ಮ ಪ್ರಶ್ನೆಗಳನ್ನು ಬಗೆಹರಿಸಿಕೊಳ್ಳುವ ಕಲೆ‌ ಅಳವಡಿಸಿಕೊಳ್ಳಿ. ಆಂತರ್ಯದ ಸೌಂದರ್ಯಕ್ಕೆ ಹೆಚ್ಚು ಪ್ರಾಧಾನ್ಯತೆ ನೀಡುವ ಸಹಾನುಭೂತಿ ಬೆಳೆಸಿಕೊಳ್ಳಿ ಎಂದು ಹೇಳಿದರು.

ಇದನ್ನೂ ಓದಿ » ಶಿವಮೊಗ್ಗ ಜನಶತಾಬ್ದಿ ಸೇರಿ ಹಲವು ರೈಲುಗಳ ಪ್ರಯಾಣ ಅವಧಿ ಕಡಿತ, ಯಶವಂತಪುರ ರೈಲಿನ ವೇಳಾಪಟ್ಟಿ ಬದಲು

ಇತಿಹಾಸ ಗೊತ್ತಿದ್ದಾಗ ಮಾತ್ರ ಭವಿಷ್ಯ ಕಟ್ಟಿಕೊಳ್ಳಲು ಸಾಧ್ಯ. ಜ್ಞಾನದ ಜೊತೆಗೆ ಸಂಸ್ಕಾರ ಅಭ್ಯಾಸ ಮಾಡಿಕೊಂಡಾಗ ಮಾತ್ರ ಉತ್ತಮ ನಾಗರಿಕರಾಗಲು ಸಾಧ್ಯ. ಹಂಚಿಕೊಳ್ಳುವ ಸಂಸ್ಕಾರ ಹೊಂದಿದವರು ನಿಜವಾದ ಶ್ರೀಮಂತ. ಸಮಾಜದ ಆಸ್ತಿಯಾಗಿ ಬೆಳಗಲು, ಪ್ರೀತಿ ತುಂಬಿದ ಹೃದಯ, ಆತ್ಮವಿಶ್ವಾಸ ಅಳವಡಿಸಿಕೊಳ್ಳಿ. ಸರಳತೆ ಎಂಬುದು ಮನುಷ್ಯನಿಗೆ ತಿಲಕವಿದ್ದಂತೆ. ಭಾರವಾದ ಅಹಂಕಾರವನ್ನು ಹೊತ್ತು ತಿರುಗದೆ, ಸರಳತೆ ಸಜ್ಜನಿಕೆ ಹೊಂದಿರಿ.ಜಿ.ಎಸ್.ನಾರಾಯಣ ರಾವ್, ರಾಷ್ಟ್ರೀಯ ಶಿಕ್ಷಣ ಸಮಿತಿ‌ ಅಧ್ಯಕ್ಷ

ಎನ್ಇಎಸ್ ಸಹಕಾರ್ಯದರ್ಶಿ ಡಾ.ಪಿ.ನಾರಾಯಣ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಾಂಶುಪಾಲರಾದ ಡಾ.ಜಿ.ನಾರಾಯಣ ಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿನಿ ಕೀರ್ತನ ಪ್ರಾರ್ಥಿಸಿ, ಪ್ರಾಧ್ಯಾಪಕ ಡಾ.ಪ್ರಸನ್ನ ಸ್ವಾಗತಿಸಿ, ಉಪನ್ಯಾಸಕಿ ಲಿಖಿತಾ ಸ್ವಾಗತಿಸಿದರು. ಬಿಫಾರ್ಮ್ ಮತ್ತು ಎಂಫಾರ್ಮ್ ವಿವಿಧ ವಿಭಾಗಗಳ 120 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪದವಿ ಪತ್ರ ಪಡೆದರು.

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment