ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
ಶಿವಮೊಗ್ಗ: ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಅಧಿಕಾರಿಗಳು ಎಂದು ಹೆದರಿಸಿ ಶಿವಮೊಗ್ಗದ ಹಿರಿಯ ನಾಗರಿಕರೊಬ್ಬರ (senior citizen) ಬ್ಯಾಂಕ್ ಖಾತೆಯಿಂದ ₹2,50,000 ಹಣ ವರ್ಗಾಯಿಸಿಕೊಂಡು ವಂಚಿಸಲಾಗಿದೆ.
ಇದನ್ನೂ ಓದಿ » ಗೃಹಿಣಿಗೆ ಅಪರಿಚಿತ ನಂಬರ್ಗಳಿಂದ ಫೋನ್, ಇನ್ಸ್ಟಾಗ್ರಾಂ ತೆಗೆದಾಗ ಕಾದಿತ್ತು ಬಿಗ್ ಶಾಕ್
ಅರೆಸ್ಟ್ ವಾರಂಟ್ ಕಳುಹಿಸಿ ಬೆದರಿಕೆ
ಹಿರಿಯ ನಾಗರಿಕರೊಬ್ಬರ ಮೊಬೈಲ್ಗೆ ಅಪರಿಚಿತ ನಂಬರ್ಗಳಿಂದ ಕರೆ ಮಾಡಿದ ವ್ಯಕ್ತಿಯೊಬ್ಬ ತನ್ನನ್ನು ರಾಷ್ಟ್ರೀಯ ತನಿಖಾ ಸಂಸ್ಥೆಯ ಭಯೋತ್ಪಾದಕ ನಿಗ್ರಹ ದಳದ ಅಧಿಕಾರಿ ಎಂದು ಪರಿಚಿಯಿಸಿಕೊಂಡಿದ್ದ. ‘ನಿಮ್ಮ ಹೆಸರಿನಲ್ಲಿರುವ ಸಿಮ್ ಕಾರ್ಡ್ ಬಳಿಸಿ ಭಯೋತ್ಪಾದಕರು ₹8 ಕೋಟಿ ಮೌಲ್ಯದ ಶಾಸ್ತ್ರಾಸ್ತ್ರಗಳನ್ನು ಖರೀದಿಸಿದ್ದಾರೆ. ಇದರಿಂದ ನಿಮಗೆ ₹80 ಲಕ್ಷ ಕಮಿಷನ್ ಬಂದಿದೆʼ ಎಂದು ಹೆದರಿಸಿದ್ದ.
ಈ ಹಿನ್ನೆಲೆ ನಿಮ್ಮನ್ನು ಬಂಧಿಸಬೇಕಾಗುತ್ತದೆ ಎಂದು ಅರೆಸ್ಟ್ ವಾರಂಟ್ ಕಾಪಿಯನ್ನು ಕಳುಹಿಸಿದ್ದ. ಅಲ್ಲದೆ ‘ನಿಮ್ಮ ಬ್ಯಾಂಕ್ ಖಾತೆಯನ್ನು ರಿಸರ್ವ್ ಬ್ಯಾಂಕ್ ಅಧಿಕಾರಿಗಳು ಪರಿಶೀಲಿಸಲಿದ್ದಾರೆʼ ಎಂದು ತಿಳಿಸಿ ಮೋಸದಿಂದ ₹2,50,000 ವರ್ಗಾಯಿಸಿಕೊಂಡಿದ್ದಾನೆ. ಘಟನೆ ಸಂಬಂಧ ಹಿರಿಯ ನಾಗರಿಕ ದೂರು ನೀಡಿದ್ದಾರೆ. ಸಿ.ಇ.ಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
LATEST NEWS
- ಕೋಟೆ ಮಾರಿಕಾಂಬ ಜಾತ್ರೆ, ದರ್ಶನ ಮುಗಿಸಿ ಹೊರಬಂದ ವೃದ್ಧೆಗೆ ಕಾದಿತ್ತು ಆಘಾತ, ದಾಖಲಾಯ್ತು ಪ್ರಕರಣ

- ಶಿವಮೊಗ್ಗದ JNN ಕಾಲೇಜು ವಿದ್ಯಾರ್ಥಿಗಳು ಚಾಂಪಿಯನ್ಸ್, ಯಾವ್ಯಾವ ಸ್ಪರ್ಧೆಗಳಲ್ಲಿ ಯಾರೆಲ್ಲ ಗೆದ್ದಿದ್ದಾರೆ?

- ಶಿವಮೊಗ್ಗ ವಿಮಾನ ನಿಲ್ದಾಣ, ಮಹತ್ವದ ಟೆಸ್ಟ್ನಲ್ಲಿ ಪಾಸ್, DoVR ಕೆಲಸ ಶುರು, ಏನಿದು? ಪ್ರಯೋಜನ ಏನು?

- ಶಿವಮೊಗ್ಗ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿಯು ಹೆಚ್ಚಿದ ತಾಪಮಾನ? ಇವತ್ತು ಎಷ್ಟಿರುತ್ತೆ?

- ಭಟ್ಕಳದ ಮಹಿಳೆ ಸೇರಿ ನಾಲ್ವರು ನಗರ ಠಾಣೆ ಪೊಲೀಸರ ಬಲೆಗೆ, ಕಾರಣವೇನು? ಏನೇನೆಲ್ಲ ಸಿಕ್ತು?

About The Editor
ನಿತಿನ್ ಆರ್.ಕೈದೊಟ್ಲು






