ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
ರೈಲ್ವೆ ಸುದ್ದಿ: ನೈಋತ್ಯ ರೈಲ್ವೆ ವ್ಯಾಪ್ತಿಯ 414 ರೈಲುಗಳು ವಿವಿಧೆಡೆ ನಿಲುಗಡೆ ಮತ್ತು ಹೊರಡುವ ಸಮಯ ಬದಲಾಗಿದೆ. ಈ ಪೈಕಿ ಶಿವಮೊಗ್ಗದ 16 ರೈಲುಗಳು (Shivamogga trains) ಇವೆ.
ಯಶವಂತಪುರ – ಶಿವಮೊಗ್ಗ ಸೂಪರ್ ಫಾಸ್ಟ್ (ರೈಲು ಸಂಖ್ಯೆ 20689(16579): ಜನವರಿ 1ರಿಂದ ತುಮಕೂರಿಗೆ ಬೆಳಗ್ಗೆ 10.05ಕ್ಕೆ ತಲುಪಲಿದ್ದು 10.07ಕ್ಕೆ ಹೊರಡಲಿದೆ. ಅದೇ ರೀತಿ ತಿಪಟೂರು 10.52/10.54, ಅರಸಿಕೆರೆ 11.15/11.20, ಕಡೂರು 11.50/11.52, ಬೀರೂರು 12.02/12.04, ತರೀಕೆರೆ 12.30/12.32, ಭದ್ರಾವತಿ 12.50/12.52 ತಲುಪಲಿದೆ.

ಶಿವಮೊಗ್ಗ – ತುಮಕೂರು ಮೆಮು ಪ್ಯಾಸೆಂಜರ್ (ರೈಲು ಸಂಖ್ಯೆ 66578): ಹೆಗ್ಗೆರೆ ಹಾಲ್ಟ್‌ಗೆ ನಿಲ್ದಾಣಕ್ಕೆ ಸಂಜೆ 4.59ಕ್ಕೆ ತಲುಪಲಿದ್ದು ಸಂಜೆ 5 ಗಂಟೆಗೆ ಹೊರಡಲಿದೆ. ಜನವರಿ 1ರಿಂದ ಪರಿಷ್ಕೃತ ಸಮಯ ಜಾರಿಗೆ ಬರಲಿದೆ.
ಶಿವಮೊಗ್ಗ – ಬೆಂಗಳೂರು ಜನಶತಾಬ್ದಿ (ರೈಲು ಸಂಖ್ಯೆ 12090): ತುಮಕೂರಿಗೆ ಬೆಳಗ್ಗೆ 8.08ಕ್ಕೆ ತಲುಪಲಿದೆ ಬೆಳಗ್ಗೆ 8.10ಕ್ಕೆ ಹೊರಡಲಿದೆ. ಯಶವಂತಪುರಕ್ಕೆ 9.18ಕ್ಕೆ ತಲುಪಿ 9.20ಕ್ಕೆ ಹೊರಡಲಿದೆ. ಜನವರಿ 1ರಿಂದ ಪರಿಷ್ಕೃತ ಸಮಯ ಜಾರಿಗೆ ಬರಲಿದೆ.
ಶಿವಮೊಗ್ಗ – ಯಶವಂತಪುರ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್ (20690(16580)) – ಶಿವಮೊಗ್ಗದಿಂದ ಮಧ್ಯಾಹ್ನ 3.45ರ ಬದಲು 3.50ಕ್ಕೆ ಹೊರಡಲಿದೆ. ಭದ್ರಾವತಿಗೆ ಸಂಜೆ 4.08ಕ್ಕೆ ತಲುಪಿ 4.10ಕ್ಕೆ ಹೊರಡಲಿದೆ. ತರೀಕೆರೆ 4.28/4.29, ಚಿಕ್ಕಬಾಣವಾರ 7.44/7.45, ಯಶವಂತಪುರಕ್ಕೆ 8.30ರ ಬದಲು 8.35ಕ್ಕೆ ತಲುಪಲಿದೆ.
ಶಿವಮೊಗ್ಗ – ಎಂಜಿಆರ್ ಚೆನ್ನೈ ಸೂಪರ್ ಫಾಸ್ಟ್ (ರೈಲು ಸಂಖ್ಯೆ 12692): ಜನವರಿ 3ರಿಂದ ಶಿವಮೊಗ್ಗದಿಂದ ಸಂಜೆ 5.15ರ ಬದಲಾಗಿ 5.40ಕ್ಕೆ ಹೊರಡಲಿದೆ. ಭದ್ರಾವತಿಗೆ 5.58ಕ್ಕೆ ತಲುಪಿ 6 ಗಂಟೆಗೆ ಹೊರಡಲಿದೆ. ತರೀಕೆರೆ 6.18/6.20, ಬೀರೂರು 6.43/6.45, ಕಡೂರು 6.53/6.55, ಅರಸೀಕೆರೆ 7.20/7.25, ತಿಪಟೂರು 7.45/7.47, ಬೆಂಗಳೂರು 10.50/11.00, ಕೃಷ್ಣರಾಜಪುರಂ 11.13/11.15, ವೈಟ್‌ಫೀಲ್ಡ್ 11.24/11.25, ಬಂಗಾರಪೇಟೆ 11.53/11.55, ಕುಪ್ಪಂ ರಾತ್ರಿ 12.19/12.20.
ಎಂಜಿಆರ್ ಚೆನ್ನೈ – ಶಿವಮೊಗ್ಗ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 12691): ಜನವರಿ 2ರಿಂದ ಈ ರೈಲು ಕೃಷ್ಣರಾಜಪುರಂಗೆ ಬೆಳಗ್ಗೆ 4.34ಕ್ಕೆ ತಲುಪಿ 4.36ಕ್ಕೆ ಹೊರಡಲಿದೆ. ಬೆಂಗಳೂರು 5.00/5.10, ತುಮಕೂರು 7.10/7.12, ತಿಪಟೂರು 8.08/8.10, ಅರಸೀಕೆರೆ 8.30/8.35, ಕಡೂರು 9.03/9.05, ಬೀರೂರು 9.13/9.15, ತರೀಕೆರೆ 9.38/9.40, ಭದ್ರಾವತಿ 9.58/10.00, ಶಿವಮೊಗ್ಗ ಬೆಳಗ್ಗೆ 10.55ಕ್ಕೆ ತಲುಪಲಿದೆ.

ಶಿವಮೊಗ್ಗ – ಯಶವಂತಪುರ ವಾರದಲ್ಲಿ ಮೂರು ದಿನ ಎಕ್ಸ್‌ಪ್ರೆಸ್ (16582) – ಮಂಗಳವಾರ, ಗುರುವಾರ, ಭಾನುವಾರ: ತರೀಕೆರೆ ರಾತ್ರಿ 12.28/12.30, ತುಮಕೂರು 3.07/3.09, ಯಶವಂತಪುರ 4.45.
ಯಶವಂತಪುರ – ಶಿವಮೊಗ್ಗ (16581) ಮಂಗಳವಾರ, ಗುರುವಾರ, ಭಾನುವಾರ: ಯಶವಂತಪುರ ರಾತ್ರಿ 12.15, ತುಮಕೂರು 1.00/1.02, ಬಾಣಸಂದ್ರ 1.32/1.33.
ತುಮಕೂರು – ಶಿವಮೊಗ್ಗ ಮೆಮು (66577): ಸಂಪಿಗೆ ರೋಡ್ ಬೆಳಗ್ಗೆ 8.41/8.42.
ಬೆಂಗಳೂರು – ಶಿವಮೊಗ್ಗ ಜನಶತಾಬ್ದಿ (12089): ಜನವರಿ 1 ರಿಂದ ತಿಪಟೂರಿಗೆ 7.00/7.02, ಅರಸೀಕರೆ 7.23/7.25, ಕಡೂರು 7.55/7.56, ಬೀರೂರು 8.05/8.06, ತರೀಕೆರೆ 8.30/8.31, ಭದ್ರಾವತಿ 8.48/8.50.

ತಾಳಗುಪ್ಪ – ಮೈಸೂರು ಎಕ್ಸ್‌ಪ್ರೆಸ್ (16228): ಜನವರಿ 1ರಿಂದ ರಾತ್ರಿ 12.18ಕ್ಕೆ ಆಗಮಿಸಿ ರಾತ್ರಿ 12.20ಕ್ಕೆ ಹೊರಡಲಿದೆ. ತಿಪಟೂರು ರಾತ್ರಿ 1.23/1.25, ತುಮಕೂರು 2.10/2.12, ಮಲ್ಲೇಶ್ವರಂ 4.35/4.36.
ತಾಳಗುಪ್ಪ – ಬೆಂಗಳೂರು ಎಕ್ಸ್‌ಪ್ರೆಸ್ (20652): ಜನವರಿ 1ರಿಂದ ಬೆಳಗ್ಗೆ 8.53ಕ್ಕೆ ಅರಸೀಕೆಗೆ ತಲುಪಿ ಬೆಳಗ್ಗೆ 8.55ಕ್ಕೆ ಹೊರಡಲಿದೆ. ತುಮಕೂರು 10.08/10.10, ಯಶವಂತಪುರ 11.10/11.12.
ಮೈಸೂರು – ತಾಳಗುಪ್ಪ ಕುವೆಂಪು ಎಕ್ಸ್‌ಪ್ರೆಸ್ (16222): ಜನವರಿ 1ರಿಂದ ಹಾಸನಕ್ಕೆ ಸಂಜೆ 4.50ಕ್ಕೆ ತಲುಪಿ ಸಂಜೆ 4.52ಕ್ಕೆ ಹೊರಡಲಿದೆ. ಬಾಗೇಶ್ವರ 5.11/5.12.
ಮೈಸೂರು – ತಾಳಗುಪ್ಪ ಎಕ್ಸ್‌ಪ್ರೆಸ್ (16227): ಜನವರಿ 1ರಿಂದ ಮೈಸೂರಿನಿಂದ ರಾತ್ರಿ 7.40ಕ್ಕೆ ಹೊರಡಲಿದೆ. ಮಂಡ್ಯಕ್ಕೆ ರಾತ್ರಿ 8.28ಕ್ಕೆ ತಲುಪಿ ರಾತ್ರಿ 8.29ಕ್ಕೆ ಹೊರಡಲಿದೆ, ಮದ್ದೂರು 8.45/8.46, ಚನ್ನಪಟ್ಟಣ ರಾತ್ರಿ 9/9.01, ರಾಮನಗರ 9.11/9.12, ಬಿಡದಿ 9.22/9.23, ಕೆಂಗೇರಿ 9.40/9.41, ಬೆಂಗಳೂರು 11.05/11.15, ತುಮಕೂರು ರಾತ್ರಿ 12.13/12.15.
ಬೆಂಗಳೂರು – ತಾಳಗುಪ್ಪ ಎಕ್ಸ್‌ಪ್ರೆಸ್ (20651): ಜನವರಿ 1ರಿಂದ ತಿಪಟೂರಿಗೆ ಸಂಜೆ 4.48ಕ್ಕೆ ತಲುಪಿ 4.50ಕ್ಕೆ ಹೊರಡಲಿದೆ. ಅರಸೀಕೆರೆ 5.10/5.15, ಕಡೂರು 5.45/5.46, ಬೀರೂರು 5.55/5.57, ತರೀಕೆರೆ 6.24/6.25, ಭದ್ರಾವತಿ 6.42/6.43, ಶಿವಮೊಗ್ಗ 6.57/6.58, ಶಿವಮೊಗ್ಗ ರೈಲ್ವೆ ನಿಲ್ದಾಣ 7.05/7.10, ಕುಂಸಿ 7.30/7.31, ಅರಸಾಳು 7.45/7.46, ಆನಂದಪುರ 8.03/8.05, ಸಾಗರ ಜಂಬಗಾರು 8.33/8.35.
ಶಿವಮೊಗ್ಗ – ಮೈಸೂರು ಎಕ್ಸ್‌ಪ್ರೆಸ್ (16226): ಜನವರಿ 1 ರಿಂದ ಶಿವಮೊಗ್ಗದಿಂದ ಬೆಳಗ್ಗೆ 11.25ಕ್ಕೆ ಹೊರಡಲಿದೆ. ಶಿವಮೊಗ್ಗ ಮಹಾದೇವಿ ಟಾಕೀಸ್ ನಿಲ್ದಾಣಕ್ಕೆ ಬೆಳಗ್ಗೆ 11.30ಕ್ಕೆ ತಲುಪಿ ಬೆಳಗ್ಗೆ 11.31ಕ್ಕೆ ಹೊರಡಲಿದೆ. ಭದ್ರಾವತಿ 11.45/11.47, ತರೀಕೆರೆ 12.07/12.09, ಬೀರೂರು 12.33/12.35, ಕಡೂರು 12.43/12.45, ದೇವನೂರು 13.00/13.01, ಬಾಣವರ 13.09/13.10, ಅರಸೀಕೆರೆ 13.25/13.30.
LATEST NEWS
- ಶಿವಮೊಗ್ಗ ಬಸ್ ನಿಲ್ದಾಣದಲ್ಲಿ ವ್ಯಕ್ತಿಗೆ ಬಿಸಿ ಮುಟ್ಟಿಸಿದ ಅಕ್ಕ ಪಡೆ, ಆಗಿದ್ದೇನು?

- ದುರ್ಗಿಗುಡಿಯಲ್ಲಿ ವೈಭವದ ರಥೋತ್ಸವ, ಈ ಬಾರಿ ಉತ್ಸವ ಬೆಳಗ್ಗೆ ನಡೆದಿದ್ದೇಕೆ?

- ₹1,00,000 ಲಂಚದ ಹಣದೊಂದಿಗೆ ಲೋಕಾಯುಕ್ತರಿಗೆ ಸಿಕ್ಕಿಬಿದ್ದ ಅಧಿಕಾರಿ, ಮಧ್ಯವರ್ತಿ

- ಸರಕು ರೇಟ್ ಕುಸಿತ, ಉಳಿದ ಮಾದರಿ ಅಡಿಕೆ ರೇಟ್ ಎಷ್ಟಿದೆ? | 2 ಮಾರ್ಚ್ 2026

- ಮಾರಿಕಾಂಬ ಜಾತ್ರೆಯಲ್ಲಿ ಕಳೆದು ಹೋದ ವೃದ್ಧೆ, ಪತ್ತೆ ಮಾಡಿ ಮನೆಗೆ ಬಿಟ್ಟು ಬಂದ ಪೊಲೀಸ್, ಆಗಿದ್ದೇನು?

About The Editor
ನಿತಿನ್ ಆರ್.ಕೈದೊಟ್ಲು






