ಮೈಸೂರು ಮೂಲದ ಲಾರಿಯೊಳಗೆ ಶಿವಮೊಗ್ಗದಲ್ಲಿ ದಿಢೀರ್‌ ಪ್ರತ್ಯಕ್ಷವಾದ ದುಷ್ಕರ್ಮಿಗಳು, ದರೋಡೆ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ: ಬಾಡಿಗೆಗಾಗಿ ಕಾಯುತ್ತ ಲಾರಿಯಲ್ಲೇ ಮಲಗಿದ್ದ ಡ್ರೈವರ್‌, ಕ್ಲೀನರ್‌ಗೆ ಇಬ್ಬರು ದುಷ್ಕರ್ಮಿಗಳು ಲಾಂಗ್‌ ತೋರಿಸಿ, ಮೊಬೈಲ್‌ ಮತ್ತು ನಗದು ದರೋಡೆ (robbed) ಮಾಡಿಕೊಂಡು ಹೋಗಿದ್ದಾರೆ. ಘಟನೆಯಲ್ಲಿ ಚಾಲಕನ ಎರಡು ಕಾಲಿಗು ಲಾಂಗ್‌ ಉಲ್ಟಾ ಮಾಡಿಕೊಂಡು ಹೊಡೆದಿದ್ದಾರೆ ಎಂದು ಆರೋಪಿಸಲಾಗಿದೆ.

ಇದನ್ನೂ ಓದಿ » ಹೊಸ ವರ್ಷದ ಪಾರ್ಟಿ ವೇಳೆ ಕೈ ಕೈ ಮಿಲಾಯಿಸಿದ ಯುವಕರು, ಚೇರ್‌ಗಳಿಂದಲೇ ಬಡಿದಾಟ

ಮೈಸೂರು ಮೂಲದ ಲಾರಿ ಚಾಲಕ ಚಂದ್ರಶೇಖರ ಮತ್ತು ಕ್ಲೀನರ್‌ ಹಿತೇಶ್‌ ನಾಯಕ ಎಂಬುವವರನ್ನು ಬೆದರಿಸಲಾಗಿದೆ. ಇಬ್ಬರೂ ಬಾಡಿಗೆಗಾಗಿ ಕಾಯುತ್ತ ಶಿವಮೊಗ್ಗದ ಸಾಗರ ರಸ್ತೆಯಲ್ಲಿ ಲಾರಿ ನಿಲ್ಲಿಸಿದ್ದರು. ಬೆಳಗಿನ ಜಾವ 4.30ರ ಹೊತ್ತಿಗೆ ಲಾರಿಯೊಳಗೆ ನುಗ್ಗಿದ ಇಬ್ಬರು ದುಷ್ಕರ್ಮಿಗಳು ಲಾಂಗ್‌ ತೋರಿಸಿ ಬೆದರಿಸಿದ್ದಾರೆ. ಈ ವೇಳೆ ಚಾಲಕ ಚಂದ್ರಶೇಖರ್‌ ಅವರ ಕಾಲಿಗೆ ಲಾಂಗ್‌ ಉಲ್ಟಾ ಮಡಿಕೊಂಡು ಹೊಡೆದಿದ್ದಾರೆ ಎಂದು ಆರೋಪಿಸಲಾಗಿದೆ.

ಲಾರಿಯಲ್ಲಿದ್ದ ಬಾಡಿಗೆ ಹಣ ₹20,000, ಕ್ಲೀನರ್‌ ಹಿತೇಶ್‌ ನಾಯಕ ಬಳಿ ಇದ್ದ ಮೊಬೈಲ್‌ ಫೋನ್‌ ಕಸಿದುಕೊಂಡು ದುಷ್ಕರ್ಮಿಗಳು ಬೈಕಿನಲ್ಲಿ ಪರಾರಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ. ಘಟನೆ ಸಂಬಂಧ ತುಂಗಾ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment