ಬಾಪೂಜಿನಗರದಲ್ಲಿ ಬನಶಂಕರಿ ದೇವಿಯ ವೈಭವದ ರಥೋತ್ಸವ, ಏನೇನೆಲ್ಲ ಪೂಜೆ ಇತ್ತು?

 ಶಿವಮೊಗ್ಗ  LIVE 

ಶಿವಮೊಗ್ಗ: ಬನದ ಹುಣ್ಣಿಮೆ ಹಿನ್ನೆಲೆ ಬಾಪೂಜಿ ನಗರದಲ್ಲಿ ಶ್ರೀ ಮಾತಾ ಬನಶಂಕರಿ ದೇವಿಯ ಜಾತ್ರಾ ಮಹೋತ್ಸವ ಅದ್ಧೂರಿಯಾಗಿ ಜರುಗಿತು. ಬೆಕ್ಕಿನ ಕಲ್ಮಠದ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ರಥೋತ್ಸವಕ್ಕೆ (Rathotsava) ಚಾಲನೆ ನೀಡಿದರು.

Bapujinagara-Banashankari-temple-ratotsava.

ರಾಜಬೀದಿ ಪಲ್ಲಕ್ಕಿ ಉತ್ಸವ

ಶ್ರೀ ಮಾತಾ ಬನಶಂಕರಿ ದೇವಸ್ಥಾನದಲ್ಲಿ ಎರಡು ದಿನ ವೈಭವದಿಂದ ಧಾರ್ಮಿಕ ವಿಧಿ ವಿಧಾನಗಳು ಜರುಗಿದವು. ಶುಕ್ರವಾರ ದೇವಿಯ ರಾಜಬೀದಿ ಪಲ್ಲಕ್ಕಿ ಉತ್ಸವ ನಡೆಯಿತು. ಭಕ್ತರಿಗೆ ಅನ್ನಸಂತರ್ಪಣೆ ಮಾಡಲಾಯಿತು.

ಇಂದು ವೈಭವದ ರಥೋತ್ಸವ

ಶ್ರೀ ಬನಶಂಕರಿ ದೇವಿಗೆ ಇವತ್ತು ಎಳನೀರು, ಕ್ಷೀರಾಭಿಷೇಕ ನೆರವೇರಿಸಲಾಯಿತು. ದುರ್ಗಾ ಹೋಮ, ಸುಹಾಸಿನಿ ಪೂಜೆ, ಮಹಾ ಮಂಗಳಾರತಿ ನಡೆಯಿತು. ರಥೋತ್ಸವ ಸಮಯದಲ್ಲಿ ದೊಡ್ಡ ಸಂಖ್ಯೆಯ ಭಕ್ತರು ಭಾಗವಹಿಸಿದ್ದರು. ಮಂಗಳವಾದ್ಯಗಳೊಂದಿಗೆ ರಥವನ್ನು ಎಳೆದು ಭಕ್ತರು ಪನೀತರಾದರು.

ಇದನ್ನೂ ಓದಿ » ಸಿಗಂದೂರು ಜಾತ್ರೆ, ಸೇತುವೆ ಉದ್ಘಾಟನೆ ನಂತರ ಮೊದಲ ಜಾತ್ರೆ, ಏನೇನು ಕಾರ್ಯಕ್ರಮ ಇರಲಿದೆ?

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment