BREAKING NEWS – ಶಿವಮೊಗ್ಗದ ಠಾಣೆಯಲ್ಲೇ ನೇಣು ಬಿಗಿದುಕೊಂಡ ಪೊಲೀಸ್‌ ಸಿಬ್ಬಂದಿ

 ಶಿವಮೊಗ್ಗ  LIVE 

ಶಿವಮೊಗ್ಗ: ದೊಡ್ಡಪೇಟೆ ಠಾಣೆ ಪಕ್ಕದಲ್ಲಿರುವ ಪಶ್ಚಿಮ ಸಂಚಾರ ಠಾಣೆಯಲ್ಲಿ ಪೊಲೀಸ್‌ (Police) ಹೆಡ್‌ ಕನ್‌ಸ್ಟೇಬಲ್‌ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಳೆದ ರಾತ್ರಿ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ.

Traffic Police

ಇದನ್ನೂ ಓದಿ » ಕೈದಿ ಭೇಟಿಗೆ ಬಂದವರೆ ಅರೆಸ್ಟ್‌, ಒಂದು ತಿಂಗಳ ಅಂತರದಲ್ಲಿ ಇದು ಮೂರನೇ ಕೇಸ್‌, ಆಗಿದ್ದೇನು?

ಹೆಡ್‌ ಕಾನ್‌ಸ್ಟೇಬಲ್‌ ಮೊಹಮದ್‌ ಝಕ್ರಿಯ (55) ಅವರು ನೇಣು ಬಿಗಿದುಕೊಂಡಿದ್ದಾರೆ. ಕಳೆದ ಕೆಲವು ದಿನದಿಂದ ಮೊಹಮದ್‌ ಝಕ್ರಿಯ ಅವರು ರಜೆ ತೆಗೆದುಕೊಂಡಿದ್ದರು. ಈಗ ಮೂರು ದಿನದ ಹಿಂದಷ್ಟೆ ಡ್ಯೂಟಿಗೆ ಬಂದಿದ್ದರು. ನಿನ್ನೆ ರಾತ್ರಿ ಶಿವಮೊಗ್ಗ ಬಸ್‌ ನಿಲ್ದಾಣದ ಬಳಿ ಡ್ಯೂಟಿ ನಿರ್ವಹಿಸಿ ಠಾಣೆಗೆ ವಾಪಸಾಗಿದ್ದರು ಎಂದು ಮೂಲಗಳು ತಿಳಿಸಿವೆ.

ರಾತ್ರಿ ಠಾಣೆಯಲ್ಲೆ ಮೊಹಮದ್‌ ಝಕ್ರಿಯ ಅವರು ನೇಣಿಗೆ ಕೊರಳೊಡ್ಡಿದ್ದಾರೆ. ಠಾಣೆಯ ಹಿಂಬದಿಯ ಸೆಲ್‌ಗಳಿರುವ ಜಾಗದಲ್ಲಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಜಿಲ್ಲಾ ರಕ್ಷಣಾಧಿಕಾರಿ ನಿಖಿಲ್‌ ಸೇರಿದಂತೆ ಹಿರಿಯ ಪೊಲೀಸ್‌ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಮೊಹಮದ್‌ ಝಕ್ರಿಯ ಅವರ ಕುಟುಂಬದವರು ಕೂಡ ಠಾಣೆ ಬಂದಿದ್ದಾರೆ. ಹೆಚ್ಚಿನ ಮಾಹಿತಿ ಇನ್ನಷ್ಟೆ ತಿಳಿದು ಬರಬೇಕಿದೆ.

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment