ಕಾಡಾನ ದಾಳಿಗೆ ಬೆಳೆ ಹಾನಿ, ರೈತರಿಗೆ ಆತಂಕ

 ಶಿವಮೊಗ್ಗ  LIVE 

ರಿಪ್ಪನ್‌ಪೇಟೆ: ಮೂಗುಡ್ತಿ ವನ್ಯಜೀವಿ ವಲಯದ ಹೆದ್ದಾರಿಪುರ ಗ್ರಾಪಂ ವ್ಯಾಪ್ತಿಯ ಕಗಚಿ ಗ್ರಾಮದಲ್ಲಿ ಕಾಡಾನೆಗಳು (Wild elephant) ಬೆಳೆಹಾನಿ ಮಾಡಿವೆ. ಸಿದ್ದಪ್ಪ ಅವರ ತೋಟದಲ್ಲಿ ತೆಂಗು ಮತ್ತು ಬಾಳೆ ಗಿಡಗಳನ್ನು ಹಾನಿಮಾಡಿವೆ.

ಅರಣ್ಯ ವ್ಯಾಪ್ತಿಯಲ್ಲಿ ಕಂದಕ ನಿರ್ಮಾಣ ಮಾಡಿದ್ದರೂ ಒಂದೆರಡು ಕಡೆಗಳಲ್ಲಿ ಜನ, ಜಾನುವಾರುಗಳ ಓಡಾಟಕ್ಕಾಗಿ ಬಿಡಲಾಗಿದೆ. ಆ ಸ್ಥಳಗಳ ಮೂಲಕವೇ ಆನೆಗಳು ಬಂದು ಹೊಲ, ಗದ್ದೆಗಳನ್ನು ಹಾನಿಮಾಡುತ್ತಿವೆ. ಹಾಗಾಗಿ ಕಂದಕ ನಿರ್ಮಾಣ ಪೂರ್ಣಗೊಳಿಸಿ ಎಂದು ಅರಣ್ಯಾಧಿಕಾರಿಗಳನ್ನು ರೈತರು ಒತ್ತಾಯಿಸಿದರು.

ಇದನ್ನೂ ಓದಿ » ಶಂಕರಘಟದಲ್ಲಿ ಬಸ್ಸಿನ ಟೈರ್‌ ಸ್ಫೋಟ, ಬೈಕ್‌ ಸವಾರ ಸಾವು, ಹೇಗಾಯ್ತು ಘಟನೆ?

ಈ ಭಾಗದಲ್ಲಿ ಕಳೆದ ನಾಲ್ಕು ವರ್ಷಗಳಿಂದ ಕಾಡಾನೆಗಳ ಹಾವಳಿ ಮಿತಿಮೀರಿದೆ. ಆರ್‌ಎಫ್‌ಒ ಪವನ್‌ಕುಮಾರ್ ಸೇರಿದಂತೆ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment