ಶಿವಮೊಗ್ಗದಲ್ಲಿ ಮನೆಯೊಳಗೆ ನುಗ್ಗಿ ವೃದ್ಧೆಯ ಕೈಲಿದ್ದ ರೋಲ್ಡ್‌ ಗೋಲ್ಡ್‌ ಬಳೆ ಕದ್ದೊಯ್ದ ಕಳ್ಳರು..!

 ಶಿವಮೊಗ್ಗ  LIVE 

ಶಿವಮೊಗ್ಗ: ನಗರದ ಗೋಪಾಲ ಬಡಾವಣೆಯ ಕೆಹೆಚ್‌ಬಿ ಕಾಲೋನಿಯಲ್ಲಿ ಒಂಟಿ ವೃದ್ಧೆಯನ್ನು ಕಟ್ಟಿ ಹಾಕಿ ಅವರ ಕೈಯಲ್ಲಿದ್ದ ಬಳೆಗಳನ್ನು ದೋಚಿರುವ (Shocking robbery) ಘಟನೆ ನಡೆದಿದೆ. ಗೋಪಾಲ ಬಡಾವಣೆಯ ನಿವಾಸಿ ಶಿವಲಿಂಗಮ್ಮ (73) ಎಂಬುವವರ ಕೈಯಲ್ಲಿದ್ದ ಬೆಳೆಗಳನ್ನು ದರೋಡೆ ಮಾಡಲಾಗಿದೆ.

ಮನೆಯಲ್ಲಿ ಯಾರೂ ಇಲ್ಲದ ಸಮಯ ನೋಡಿ ಒಳನುಗ್ಗಿದ ಇಬ್ಬರು ಅಪರಿಚಿತ ಯುವಕರು ಈ ದರೋಡೆ ಎಸಗಿದ್ದಾರೆ. ಶಿವಲಿಂಗಮ್ಮ ಅವರ ಮಗ, ಸೊಸೆ ಮತ್ತು ಮೊಮ್ಮಗ ಕೆಲಸಕ್ಕೆಂದು ಹೋಗಿದ್ದರು. ಬೆಳಿಗ್ಗೆ 11.30ರ ಹೊತ್ತಿಗೆ ಶಿವಲಿಂಗಮ್ಮ ಅವರು ಮಹಡಿಯ ಮೇಲೆ ಬಟ್ಟೆ ಒಣಹಾಕಿ ವಾಪಸ್ ಮನೆಗೆ ವಾಪಾಸಾಗಿದ್ದರು.

ಇದನ್ನೂ ಓದಿ » ಅಡಿಕೆ ಸುಲಿಯಲು ಬಂದಿದ್ದ ಕಾರ್ಮಿಕನಿಂದ ಮಾಲೀಕರ ಬೊಲೆರೋ ವಾಹನ ಕಳ್ಳತನ

ಅಷ್ಟರಲ್ಲಿ ಮನೆಯೊಳಗೆ ಹೊಕ್ಕಿದ್ದ ಇಬ್ಬರು ಯುವಕರು ಏಕಾಏಕಿ ಅವರ ಮೇಲೆ ದಾಳಿ ಮಾಡಿದ್ದಾರೆ. ಒಬ್ಬ ಯುವಕ ಟೀ ಶರ್ಟ್‌ನಿಂದ ವೃದ್ಧೆಯ ಬಾಯಿ ಕಟ್ಟಿದರೆ, ಮತ್ತೊಬ್ಬ ಟವಲ್‌ನಿಂದ ಅವರ ಕೈಗಳನ್ನು ಕಟ್ಟಿ ಹಾಕಿ ಕೆಳಗೆ ಕೆಡವಿದ್ದಾನೆ. ಕೊನೆಗೆ ವೃದ್ಧೆಯ ಕೈಗೆ ಕಟ್ಟಿದ್ದ ಟವಲ್ ಬಿಚ್ಚಿ ಎರಡು ಕೈಗಳಲ್ಲಿದ್ದ ನಾಲ್ಕು ಬಳೆಗಳನ್ನು ಬಲವಂತವಾಗಿ ಕಿತ್ತುಕೊಂಡು ಪರಾರಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ.

Crime-News-General-Image

ವೃದ್ಧೆ ಕೈಲಿದ್ದಿದ್ದು ಒರಿಜಿನಲ್‌ ಚಿನ್ನವಲ್ಲ

ದರೋಡೆಕೋರರು ಶಿವಲಿಂಗಮ್ಮ ಅವರು ಧರಿಸಿದ್ದು ಒರಿಜಿನಲ್‌ ಚಿನ್ನದ ಬಳೆ ಎಂದು ಭಾವಿಸಿದ್ದರು. ಆದರೆ ಅದು ರೋಲ್ಡ್‌ ಗೋಲ್ಡ್‌ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಘಟನೆ ಸಂಬಂಧ ತುಂಗಾ ನಗರದ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment