ಫೋನ್‌‌ ಕರೆ, ಶಿವಮೊಗ್ಗದಿಂದ ವ್ಯಕ್ತಿ ದೌಡು, ಆನವಟ್ಟಿ ಮನೆ ಬಳಿ ಕಾದಿತ್ತು ಶಾಕ್

 ಶಿವಮೊಗ್ಗ  LIVE 

ಸೊರಬ: ಆನವಟ್ಟಿಯ ದಾನಮ್ಮ ಬಡಾವಣೆಯಲ್ಲಿ ಮನೆಯೊಂದರ ಬಾಗಿಲಿನ ಬೀಗ ಮುರಿದು ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನ ಮತ್ತು ಬೆಳ್ಳಿ ಆಭರಣ ಕಳ್ಳತನ (House burglary) ಮಾಡಲಾಗಿದೆ. ಹೆಚ್.ಜಿ. ಮಂಜುನಾಥ್ ಎಂಬುವವರ ಮನೆಯಲ್ಲಿ ಘಟನೆ ಸಂಭವಿಸಿದೆ.

ಮಂಜುನಾಥ್ ಅವರು ತಮ್ಮ ಪತ್ನಿಯ ಚಿಕಿತ್ಸೆಗಾಗಿ ಶಿವಮೊಗ್ಗದ ಆಸ್ಪತ್ರೆಗೆ ಹೋಗಿದ್ದ ಸಮಯ ಕೃತ್ಯ ನಡೆದಿದೆ. ನೆರೆಹೊರೆಯವರು ಕರೆ ಮಾಡಿ ಮನೆಯ ಮುಂಭಾಗದ ಬಾಗಿಲು ತೆರೆದಿರುವ ಬಗ್ಗೆ ತಿಳಿಸಿದ್ದರು. ತಕ್ಷಣ ಮಂಜುನಾಥ್ ಅವರು ಶಿವಮೊಗ್ಗದಿಂದ ವಾಪಸ್ ಬಂದು ನೋಡಿದಾಗ, ಕಳ್ಳರು ಮನೆಯ ಬಾಗಿಲು ಮತ್ತು ಒಳಗಿನ ಎರಡು ಬೀರುಗಳ ಬೀಗ ಮುರಿದಿದ್ದರು.

ಬೀರುವಿನಲ್ಲಿದ್ದ  ಒಟ್ಟು 72 ಗ್ರಾಂ ಚಿನ್ನದ ಆಭರಣ, 250 ಗ್ರಾಂ ಬೆಳ್ಳಿ ವಸ್ತು ಹಾಗೂ ₹5,000 ನಗದು ದೋಚಿರುವುದು ಗೊತ್ತಾಗಿದೆ. ₹4,00,000 ಮೌಲ್ಯದ ವಸ್ತುಗಳು ಕಳುವಾಗಿವೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಆನವಟ್ಟಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ » ಗಾಜನೂರಿನ ಮದ್ಯದಂಗಡಿ ಮೇಲೆ ಮಹಿಳೆಯರ ದಾಳಿ, ದೂರು, ಪ್ರತಿದೂರು, ದಾಖಲಾಯ್ತು ಮೂರು ಕೇಸ್‌

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment