ಮಹಿಳೆಯರಿಗೆ ಗುಡ್‌ ನ್ಯೂಸ್‌, ಶಿವಮೊಗ್ಗದಲ್ಲಿ ಜನವರಿ 17ರಿಂದ ಮೇಳ, ಏನೇನೆಲ್ಲ ಇರಲಿದೆ?

 ಶಿವಮೊಗ್ಗ  LIVE 

ಶಿವಮೊಗ್ಗ: ಹೆಗ್ಗೋಡು – ಭೀಮನಕೋಣೆಯ ಚರಕ ಮಹಿಳಾ ವಿವಿಧೋದ್ದೇಶ ಕೈಗಾರಿಕಾ ಸಹಕಾರ ಸಂಘವು ಜನವರಿ 17ರಿಂದ 19ರವರೆಗೆ ಬೆಳಿಗ್ಗೆ 10ರಿಂದ ರಾತ್ರಿ 7.30ರವರೆಗೆ ನಗರದ ಬಿ.ಎಚ್.ರಸ್ತೆಯ ಕರ್ನಾಟಕ ಸಂಘದಲ್ಲಿ ನೈಸರ್ಗಿಕ ಬಣ್ಣದ ಅಪ್ಪಟ ಹತ್ತಿ ಕೈಮಗ್ಗದ ಹಾಗೂ ಕೈ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮೇಳ (Exhibition) ಹಮ್ಮಿಕೊಂಡಿದೆ.

17ರಂದು ಬೆಳಿಗ್ಗೆ 11.30ಕ್ಕೆ ಜನಶಿಕ್ಷಣ ಸಂಸ್ಥೆಯ ನಿರ್ದೇಶಕಿ ಎಸ್.ವೈ.ಅರುಣಾದೇವಿ ಮೇಳಕ್ಕೆ ಚಾಲನೆ ನೀಡುವರು. ಅತಿಥಿಗಳಾಗಿ ಸಂಸ್ಕೃತಿ ಚಿಂತಕ ಪ್ರೊ.ರಾಜೇಂದ್ರ ಚೆನ್ನಿ, ಕೈಮಗ್ಗ ಮತ್ತು ಜವಳಿ ಇಲಾಖೆಯ ಉಪನಿರ್ದೇಶಕ ಶಿವಲಿಂಗಪ್ಪ ಎನ್. ಕುಂಬಾರ, ಸಂಘಟಕಿ ಟಿ.ಗಾಯತ್ರಿ ಭಾಗವಹಿಸುವರು. ಚರಕ ಸಂಘದ ಅಧ್ಯಕ್ಷೆ ಮಹಾಲಕ್ಷ್ಮಿ ಅಧ್ಯಕ್ಷತೆ ವಹಿಸುವರು.

ಮೇಳದಲ್ಲಿ ಏನೇನೆಲ್ಲ ಇರಲಿದೆ?

» ಮೇಳದಲ್ಲಿ ಒಟ್ಟು 8 ಮಳಿಗೆಗಳು ಇರಲಿವೆ. ಚರಕದ ನೈಸರ್ಗಿಕ ಬಣ್ಣದ ಕೈಮಗ್ಗದ ಬಟ್ಟೆಗಳು, ಸಿದ್ಧ ಉಡುಪು ಇರಲಿವೆ.

» ಗಜೇಂದ್ರಗಡದ ನೇಕಾರರ ಅಪರೂಪದ ಸೀರೆ, ಇತರೆ ಬಟ್ಟೆಗಳು ಇರಲಿವೆ.

» ಶಿರಸಿಯ ತೇಜಸ್ವಿನಿ ಅವರು ಸಿರಿಧಾನ್ಯದಿಂದ ತಯಾರಿಸಿದ ವೈವಿಧ್ಯಮಯ ಆಹಾರ ಉತ್ಪನ್ನ ಧಾಮಿನಿ ನ್ಯಾಚುರಲ್ಸ್ ಅವರ ಮಲೆನಾಡಿನ ವೈವಿಧ್ಯಮಯ ಉಪ್ಪಿನಕಾಯಿ.

» ಶಿರಸಿಯ ಚೇತನಾ ಸಂಸ್ಥೆಯ ಬಾಳೆನಾರಿನ ಉತ್ಪನ್ನ ಚಿತ್ರಾ ಗಿರೀಶ್ ಅವರ ಟೆರಾಕೋಟಾ (ಮಣ್ಣಿನ) ಉತ್ಪನ್ನ ಮಣ್ಣಿನ ಆಭರಣ, ಗೀತಾಂಜಲಿ ಬುಕ್‌ಸೆಂಟರ್‌ನ ಪುಸ್ತಕಗಳು ಲಭ್ಯ ಇವೆ.

ಈ ಮೇಳವನ್ನು ರಾಜ್ಯ ಕೈಮಗ್ಗ ಮತ್ತು ಜವಳಿ ಇಲಾಖೆಯ ಪವಿತ್ರ ವಸ್ತ್ರ ಯೋಜನೆಯಡಿ ಆಯೋಜಿಸಲಾಗಿದೆ. ಮಾಹಿತಿಗೆ ಮೊ: 63638 85215 ಸಂಪರ್ಕಿಸಬಹುದು.

ಇದನ್ನೂ ಓದಿ » ಶಿವಮೊಗ್ಗದಲ್ಲಿ ಡಾಗ್‌ ಶೋ, ರಿಜಿಸ್ಟರ್‌ ಮಾಡಿಕೊಳ್ಳಲು ಸೂಚನೆ, ಯಾವಾಗ? ಎಲ್ಲಿ ನಡೆಯುತ್ತೆ?

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment