ಶಿವಮೊಗ್ಗದಲ್ಲಿ 301 ಕಲಾವಿದರ ಜೊತೆಗೆ ವೀಣೆ ನುಡಿಸಿದ ಮೈಸೂರು ರಾಜವಂಶಸ್ಥ, ಹೇಗಿತ್ತು ಕಾರ್ಯಕ್ರಮ?

ಶಿವಮೊಗ್ಗ: ಸರಸ್ವತಿ ಸಂಗೀತ ವಿದ್ಯಾಲಯದ ರಜತ ಮಹೋತ್ಸವ ಸಂಭ್ರಮದ ಅಂಗವಾಗಿ, ಸುಶ್ರಾವ್ಯ ಸಂಗೀತ ವಿದ್ಯಾಲಯ, ಸಾಯಿಸೃತಿ ಸಂಗೀತ ವಿದ್ಯಾಲಯದ ಸಹಭಾಗಿತ್ವದಲ್ಲಿ ಫ್ರೀಡಂ ಪಾರ್ಕ್‌ನಲ್ಲಿ ಭಾನುವಾರ ವಿಶಿಷ್ಟ ಸಾಂಸ್ಕೃತಿಕ ಕಾರ್ಯಕ್ರಮ ವೀಣಾ ತ್ರಿಶತೋತ್ಸವ (Veena Trishatotsava) ನಡೆಯಿತು. ಸುದ್ದಿಯ ಮುಂದಿನ 3 ಪ್ಯಾರಾಗಳು ಕೆಳಗಿವೆ.

ಕಾರ್ಯಕ್ರಮದಲ್ಲಿ 301 ಕಲಾವಿದರು ಏಕಕಾಲದಲ್ಲಿ ವೀಣೆ ನುಡಿಸಿದರು. ವಿಘ್ನವಿನಾಶಕ ಗಣಪನ ಸ್ತುತಿಯೊಂದಿಗೆ ವೀಣಾ ತ್ರಿಶತೋತ್ಸವಕ್ಕೆ ಚಾಲನೆ ನೀಡಲಾಯಿತು. ನಂತರ ಕಾಯೋ ಶ್ರೀ ಗೌರಿಯನ್ನು ಮೈಸೂರಿನ ರಾಜವಂಶಸ್ಥ, ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ನುಡಿಸಿದರು.

Yaduveera-Wodeyar-at-Veena-festival-in-Shimoga

Total-Readers-of-Shivamogga-Live
” ಭಾರತೀಯರು ತಮ್ಮ ಧರ್ಮ, ನೆಲದ ಬಗ್ಗೆ ನಿಜವಾದ ಭಾವನೆಯನ್ನು ಅನುಭವಿಸಬೇಕಾದರೆ ಅದು ಇಲ್ಲಿನ ಪಾರಂಪರಿಕ ಕಲೆಯಿಂದ ಮಾತ್ರ ಸಾಧ್ಯ. ಪಾಶ್ಚಾತ್ಯ ದೇಶದಿಂದ ಬಂದ ಸಂಗೀತವನ್ನು ಸ್ವಾಗತಿಸೋಣ. ಅದರ ಮಧ್ಯೆ ಕರ್ನಾಟಕದ ಪರಂಪರೆಯ ಕಲೆ ಹಾಗೂ ಸಂಗೀತ ಉಳಿಸಿ ಬೆಳೆಸೋಣ. ಆಗ ಒಳ್ಳೆಯ ಸಮಾಜ ಕಟ್ಟಲು ಸಾಧ್ಯ ಈ ಪರಂಪರೆಯ ಅಗ್ರಪಂಕ್ತಿಯನ್ನು ಮೈಸೂರು ಸೇರಿದಂತೆ ಬೇರೆ ಬೇರೆ ರಾಜಮನೆತನಗಳು ಕಲಾ ಪೋಷಣೆ ಮೂಲಕ ಮಾಡಿ ತೋರಿಸಿವೆ. ”
ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಮೈಸೂರು – ಕೊಡಗು ಸಂಸದ
” ವೀಣೆ ಭಾರತದ ಸಾಂಸ್ಕೃತಿಕ ರಾಯಭಾರಿ. ಕಲೆಗೆ ಭಾಷೆ, ಧರ್ಮ ಇಲ್ಲ. ಈ ಡಿಜಿಟಲ್ ಯುಗದಲ್ಲಿ ಮಕ್ಕಳಿಗೆ ವೀಣಾ ಅಭ್ಯಾಸ ಮಾಡಿಸುವ ಮೂಲಕ ಈ ಕಲೆಯ ಸಂರಕ್ಷಣೆಯನ್ನು ನಮ್ಮ ಹೆಣ್ಣುಮಕ್ಕಳು ಮಾಡುತ್ತಿದ್ದಾರೆ. ಅವರ ಸಹಭಾಗಿತ್ವ ಇದ್ದಾಗ ಮಾತ್ರ ಸಂಸ್ಕೃತಿ ಉಳಿಸಿ, ಬೆಳೆಸಿಕೊಂಡು ಹೋಗಲು ಸಾಧ್ಯವಿದೆ.”
ಬಿ.ವೈ.ರಾಘವೇಂದ್ರ, ಶಿವಮೊಗ್ಗ ಸಂಸದ

ಇದನ್ನೂ ಓದಿ » ಶಿವಮೊಗ್ಗದಿಂದ ಮತ್ತಷ್ಟು ಊರುಗಳಿಗೆ ರೈಲು, ಸಂಸದ ರಾಘವೇಂದ್ರ ಹೇಳಿಕೆ, ಇಲ್ಲಿದೆ ಪಾಯಿಂಟ್ಸ್‌

ಶಿವಮೊಗ್ಗದಲ್ಲಿ ಉಚಿತ ಸಮಾಲೋಚನೆ, 40% ರಿಯಾಯಿತಿ Nanjappa Hospital Advertisement ಇಲ್ಲಿ ಕ್ಲಿಕ್‌ ಮಾಡಿ ಹೆಸರು ನೋಂದಾಯಿಸಿ

ರಜತಮಹೋತ್ಸವ ಆಚರಣಾ ಸಮಿತಿ ಗೌರವಾಧ್ಯಕ್ಷರೂ ಆದ ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್, ಶಾಸಕ ಎಸ್.ಎನ್.ಚನ್ನಬಸಪ್ಪ, ವಿಧಾನಪರಿಷತ್ ಸದಸ್ಯ ಡಾ.ಧನಂಜಯ ಸರ್ಜಿ, ಝರೋದಾ ಕಂಪನಿ ಮುಖ್ಯಸ್ಥೆ ರೇವತಿ ಕಾಮತ್, ಗೀತಾ ರಮಾನಂದ್, ಮಾಜಿ ಶಾಸಕರಾದ ಎಚ್.ಎಂ.ಚಂದ್ರಶೇಖರಪ್ಪ, ಕೆ.ಬಿ.ಪ್ರಸನ್ನಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಉಮೇಶ್ ಹಾಲಾಡಿ, ವಿದುಷಿ ಪದ್ಮನಿ ಸುಧೀರ್ ಇದ್ದರು. ಪ್ರಾಸ್ತಾವಿಕವಾಗಿ ವಿಜಯಲಕ್ಷ್ಮಿ ಮಾತನಾಡಿದರು.

Splendid Veena Trishatotsava in Shivamogga! 301 artists perform together at Freedom Park. MP Yaduveer Wadiyar joins the grand event
Splendid Veena Trishatotsava in Shivamogga! 301 artists perform together at Freedom Park. MP Yaduveer Wadiyar joins the grand event
Splendid Veena Trishatotsava in Shivamogga! 301 artists perform together at Freedom Park. MP Yaduveer Wadiyar joins the grand event
📍 ನಿಮ್ಮೂರ ಸುದ್ದಿ
ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ.

Shivamogga Live Promotion

Leave a Comment