ಹಳೇ ಜೈಲು ಆವರಣಕ್ಕೆ ಉಪಮೇಯರ್ ಸೂಚಿಸಿದ ಹೆಸರಿಡುವುದು ಬೇಡ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ ಲೈವ್.ಕಾಂ | SHIMOGA | 3 ಅಕ್ಟೋಬರ್ 2019

ನಗರದ ಹಳೇ ಕಾರಾಗೃಹ ಅವರಣದಲ್ಲಿ ಸ್ವಾತಂತ್ರ್ಯ ಉದ್ಯಾನವನ ನಿರ್ಮಿಸುತ್ತಿರುವುದು ಸ್ವಾಗತಾರ್ಹ. ಆದರೆ ಉದ್ಯಾನವನಕ್ಕೆ ಇಂತಹವರದ್ದೆ ಹೆಸರು ಇಡಬೇಕು ಎಂಬುದು ಸೂಕ್ತವಲ್ಲ ಎಂದು ಜಿಲ್ಲಾ ಕಾಂಗ್ರೆಸ್ ಸೇವಾದಳದ ಅಧ್ಯಕ್ಷ ವೈ.ಎಚ್.ನಾಗರಾಜ್ ಹೇಳಿದ್ದಾರೆ.

https://www.facebook.com/ckdcinternational/videos/2433592173582988/?t=1

ಮುಖ್ಯಮಂತ್ರಿ ಅವರು ಸಾರ್ವಜನಿಕ ಬಳಕೆಗೆ ಈ ಆವರಣ ನೀಡಲಾಗುವುದು ಎಂದು ಹೇಳಿರುವುದು ಸ್ವಾಗತಾರ್ಹವಾಗಿದೆ. ಆದರೆ ಉಪಮೇಯರ್ ಎಸ್.ಎನ್.ಚನ್ನಬಸಪ್ಪ ಅವರು  ಸ್ವಾತಂತ್ರ್ಯ ಹೋರಾಟಗಾರ ಚಂದ್ರಶೇಖರ್ ಅಜಾದ್ ಅವರ ಹೆಸರಿಡಬೇಕು ಎಂದು ಹೇಳಿದ್ದಾರೆ. ಅದಕ್ಕೆ ಮುಖ್ಯಮಂತ್ರಿ ಅವರು ಒಪ್ಪಿಗೆ ನೀಡಿದ್ದಾರೆ. ಇದು ವಿನಾಕಾರಣ ಗೊಂದಲಕ್ಕೆ ಕಾರಣವಾಗಬಹುದು ಎಂದು ಹೇಳಿದ್ದಾರೆ.

ನಾಳೆ ಮತ್ತೆ ಕೆಲವರು ಬಸವಣ್ಣನವರ ಹೆಸರು ಸೂಚಿಸಬಹುದು. ಅಂಬೇಡ್ಕರ್ ಹೆಸರು ಹೇಳಬಹುದು. ಎಲ್ಲರೂ ಗಣ್ಯರೇ. ಯಾರ ಹೆಸರಿಡಲು ಸಾಧ್ಯ. ಸಾಹಿತ್ಯ, ಸಂಗೀತ, ಹೋರಾಟ, ರೈತ ಚಳುವಳಿಗಳ ತವರಿದು. ಅವರವರು ಹೆಸರು ಸೂಚಿಸಲು ಹೊರಟರೆ ಸಾವಿರ ಹೆಸರು ಬರುತ್ತವೆ. ಹೀಗಾಗಿ ಎಲ್ಲರು ಒಪ್ಪುವ ಹಾಗೆ ಸ್ವಾತಂತ್ರ್ಯ ಉದ್ಯಾನವನ ಎಂದು ಕರೆದರೆ ಸಾಕು ಎಂದು ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಇರುವಂತೆ ಫ್ರೀಡಂ ಪಾರ್ಕ್ ಎಂದು ಇಟ್ಟರೆ ಯಾವ ಸರ್ಕಾರಗಳು ಬಂದರೂ ಒಪ್ಪಿತ. ಇಲ್ಲದೆ ಇದ್ದರೆ ಗೊಂದಲ ತಪ್ಪಲ್ಲ. ಆಜಾದ್ ಸೇರಿದಂತೆ ಸಾವಿರಾರು ಜನರ ಹೋರಾಟ ಬಲಿದಾನದಿಂದ ನಮಗೆ ಸ್ವಾತಂತ್ರ್ಯ ಸಿಕ್ಕಿದೆ. ಅವರ ಕೆಚ್ಚೆದೆಯ ಬಗ್ಗೆ ದೇಶ ಪ್ರೇಮದ ಬಗ್ಗೆ ಅಪಾರ ಗೌರವ ಇದೆ. ಅವರ ಹೆಸರನ್ನು ಇನ್ನೂ ಹೆಸರೆ ಇಟ್ಟಿರದ ರಸ್ತೆಗೆ ಇಡಬಹುದು. ಹಾಗಾಗಿ ಇದನ್ನು ಮರು ಪರಿಶೀಲನೆ ಮಾಡುವುದು ಒಳ್ಳೆಯದು ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

70578780 2398489037062520 5710410120999993344 n.jpg? nc cat=106& nc oc=AQlyR1VSuqCuO5zkT31TLCX6fr o4ruxA8GZXz CLAxEnUu13r31GPNm9DqhIr Pt97o2JIZnX94nDG vjCvNFF2& nc ht=scontent.fblr1 3

ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ – 7411700200

ಸುದ್ದಿಗಾಗಿ ಕರೆ ಮಾಡಿ – 9964634494

ಈ ಮೇಲ್ ಐಡಿ | shivamoggalive@gmail.com

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : October 3, 2019

Leave a Comment