ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
ಶಿವಮೊಗ್ಗ: ನಗರದಲ್ಲಿ ಮತ್ತೊಂದು ಪ್ರೀ ಪೇಯ್ಡ್ ಆಟೋ ಕೌಂಟರ್‌ಗೆ ಇವತ್ತು ಚಾಲನೆ ಸಿಕ್ಕಿದೆ. ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಮುಂಭಾಗ ಕೌಂಟರ್ ಉದ್ಘಾಟಿಸಲಾಯಿತು. ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ನೂತನ ಪ್ರೀ ಪೇಯ್ಡ್ (pre paid auto) ಕೌಂಟರ್‌ಗೆ ಚಾಲನೆ ನೀಡಿದರು.
ಇದನ್ನೂ ಓದಿ – ಶಿವಮೊಗ್ಗದಲ್ಲಿ ವೆರೈಟಿ ರೇಷ್ಮೆ ಸೀರೆಗಳು, ಒಂದೂವರೆ ಲಕ್ಷದ ಮೈಸೂರು ಸಿಲ್ಕ್ ಸೀರೆ ಖರೀದಿಸಿದ ದಂಪತಿ
ಶಿವಮೊಗ್ಗ ಜಿಲ್ಲಾ ಪೊಲೀಸ್, ಜಿಲ್ಲಾಡಳಿತ, ಸಾರಿಗೆ ಇಲಾಖೆ ಹಾಗೂ ಚೈತನ್ಯ ರೂರಲ್ ಡೆವೆಲಪ್‌ಮೆಂಟ್ ಸೊಸೈಟಿ ಸಹಯೋಗದೊಂದಿಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಸಹಕಾರದಲ್ಲಿ ಶಿವಮೊಗ್ಗದ ಬಸ್ ನಿಲ್ದಾಣಗಳಲ್ಲಿ ಪ್ರೀ ಪೇಯ್ಡ್ ಆಟೋ ಕೌಂಟರ್ ಸ್ಥಾಪಿಸಲಾಗಿದೆ. ಇನ್ಮುಂದೆ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಿಂದ ಶಿವಮೊಗ್ಗ ನಗರದ ವಿವಿಧೆಡೆ ಪ್ರೀ ಪೇಯ್ಡ್ ಆಟೋ ಸೇವೆ ಉಪಯೋಗಿಸಿಕೊಳ್ಳಬಹುದಾಗಿದೆ.

ಆಟೋ ಏರಿದ ಐಎಎಸ್, ಐಪಿಎಸ್ ಅಧಿಕಾರಿಗಳು
ಪ್ರೀ ಪೇಯ್ಡ್ ಆಟೋ ಕೌಂಟರ್ ಉದ್ಘಾಟಿಸಿದ ಬಳಿಕ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ, ಜಿಲ್ಲಾ ಪಂಚಾಯಿತಿ ಸಿಇಒ ಹೇಮಂತ್, ಜಿಲ್ಲಾ ರಕ್ಷಣಾಧಿಕಾರಿ ಬಿ.ನಿಖಿಲ್ ಅವರು ಆಟೋ ಸಂಚಾರ ಮಾಡಿದರು. ಕೆಎಸ್‌ಆರ್‌ಟಿಸಿ ನಿಲ್ದಾಣದ ಪ್ರೀ ಪೇಯ್ಡ್ ಕೌಂಟರ್‌ನಲ್ಲಿ ರಶೀದಿ ಪಡೆದು ಮೂವರು ಅಧಿಕಾರಿಗಳು ಖಾಸಗಿ ಬಸ್ ನಿಲ್ದಾಣದವರೆಗೆ ಆಟೋ ಸಂಚಾರ ಮಾಡಿದರು.


LATEST NEWS
- ಶಿವಮೊಗ್ಗ ಜಿಲ್ಲೆಯಲ್ಲಿ ಜಾಸ್ತಿಯಾಗಲಿದೆ ಬಿಸಿಲು, ರಾತ್ರಿ ವೇಳೆ ಮುಂದುವರೆಯುತ್ತಾ ತಂಪು?

- ಇಂದಿನ ಪಂಚಾಂಗ, ಇವತ್ತು ಶುಭ ಸಮಯ ಎಷ್ಟೊತ್ತಿಗಿದೆ? ದಿನ ನಕ್ಷತ್ರ ಯಾವುದು?

- ಉಷಾ ನರ್ಸಿಂಗ್ ಹೋಂ ಬಳಿ ಅಂಬ್ಯುಲೆನ್ಸ್ ಡಿಕ್ಕಿ, ಕಾರು ಪಲ್ಟಿ, ಹೇಗಾಯ್ತು ಘಟನೆ?

- ಗಾಜನೂರಿನಲ್ಲಿ ಭೀಕರ ಅಪಘಾತ, ಆಟೋ ನಜ್ಜುಗುಜ್ಜು, ಶಿವಮೊಗ್ಗದ ಯುವಕ ಸಾವು, ಆಗಿದ್ದೇನು?

- ಶಿವಮೊಗ್ಗದಲ್ಲಿ ಅತಿ ಕೆಳಗೆ ಹಾರಿದ ವಿಮಾನ, ಎರಡು ಟ್ರಿಪ್ ಹಾರಾಟ, ಕಾರಣವೇನು?

About The Editor
ನಿತಿನ್ ಆರ್.ಕೈದೊಟ್ಲು














