ಶಿವಮೊಗ್ಗ: ಕರ್ನಾಟಕ ಸಂಘವು ಪ್ರತಿ ವರ್ಷದಂತೆ 2025ನೆಯ ಸಾಲಿನಲ್ಲಿ ಮೊದಲ ಮುದ್ರಣವಾಗಿ ಪ್ರಕಟವಾದ ಕನ್ನಡ ಪುಸ್ತಕಗಳಿಗೆ ಬಹುಮಾನ ನೀಡಲು ಲೇಖಕರು ಮತ್ತು ಪ್ರಕಾಶಕರಿಂದ ಕೃತಿಗಳನ್ನು ಆಹ್ವಾನಿಸಿದೆ. ಆಯ್ದ ಅತ್ಯುತ್ತಮ ಕೃತಿಗಳಿಗೆ ₹10,000 ನಗದು ಬಹುಮಾನ ಮತ್ತು ಫಲಕವನ್ನು (Awards) ನೀಡಿ ಗೌರವಿಸಲಾಗುವುದು.
ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:
ನಿಯಮಗಳು ಏನು?
2025ರಲ್ಲಿ ಮೊದಲ ಬಾರಿಗೆ ಮುದ್ರಣಗೊಂಡ ಕನ್ನಡ ಪುಸ್ತಕಗಳಿಗೆ ಮಾತ್ರ ಬಹುಮಾನ. ಮರುಮುದ್ರಣ, ಹಸ್ತಪ್ರತಿ, ಸಂಪಾದಿತ ಕೃತಿಗಳು ಅಥವಾ ಒಬ್ಬರಿಗಿಂತ ಹೆಚ್ಚು ಲೇಖಕರಿರುವ ಪುಸ್ತಕಗಳಿಗೆ ಅವಕಾಶವಿಲ್ಲ. ಒಂದು ಪ್ರಕಾರಕ್ಕೆ ಕನಿಷ್ಠ 5 ಕೃತಿಗಳು ಬರದಿದ್ದರೆ ಆ ವಿಭಾಗವನ್ನು ಬಹುಮಾನಕ್ಕೆ ಪರಿಗಣಿಸಲಾಗುವುದಿಲ್ಲ.
ಇದನ್ನೂ ಓದಿ – KFD ಸೋಂಕಿಗೆ ಮೊದಲ ಬಲಿ, ತೀರ್ಥಹಳ್ಳಿಯ ಯುವಕ ಮಣಿಪಾಲದಲ್ಲಿ ಸಾವು
ಕರ್ನಾಟಕ ಸಂಘದ ಸದಸ್ಯರು ಈ ಸ್ಪರ್ಧೆಯಲ್ಲಿ ಭಾಗವಹಿಸುವಂತಿಲ್ಲ. ಈ ಹಿಂದೆ ಸಂಘದ ಬಹುಮಾನ ಪಡೆದವರು ಅದೇ ವಿಭಾಗದಲ್ಲಿ ಮತ್ತೊಮ್ಮೆ ಸ್ಪರ್ಧಿಸುವಂತಿಲ್ಲ.

ಏನೆಲ್ಲ ವಿವರ ಸಲ್ಲಿಸಬೇಕು?
ಪ್ರತಿ ಪ್ರಕಾರದ ಪುಸ್ತಕದ 4 ಪ್ರತಿಗಳನ್ನು ಸಲ್ಲಿಸಬೇಕು. ಲೇಖಕರು ಅಥವಾ ಪ್ರಕಾಶಕರು ತಮ್ಮ ಸ್ವವಿವರ, ವಿಳಾಸ, ಮೊಬೈಲ್ ಸಂಖ್ಯೆ ಮತ್ತು ಕೃತಿಯ ಪ್ರಕಾರದ ಬಗ್ಗೆ ಲಿಖಿತ ಮಾಹಿತಿಯನ್ನು ಲಗತ್ತಿಸಬೇಕು. ಅಂಕಣ ಬರಹಗಳಾಗಿದ್ದಲ್ಲಿ, ಅವು ಪತ್ರಿಕೆಯಲ್ಲಿ ಪ್ರಕಟವಾಗಿರುವ ಬಗ್ಗೆ ದಾಖಲೆ ನೀಡುವುದು ಕಡ್ಡಾಯ.
ಪ್ರಮುಖ ದಿನಾಂಕ ಮತ್ತು ವಿಳಾಸ
ಪುಸ್ತಕಗಳನ್ನು ಕಳುಹಿಸಲು ಮಾರ್ಚ್ 31ರಂದು ಕೊನೆಯ ದಿನಾಂಕ. ಕಾರ್ಯದರ್ಶಿಗಳು, ಕರ್ನಾಟಕ ಸಂಘ, ಬಿ.ಹೆಚ್. ರಸ್ತೆ, ಶಿವಮೊಗ್ಗ-577201 ಇಲ್ಲಿ ಪುಸ್ತಕಗಳನ್ನು ಕಳುಹಿಸಬೇಕು. ಹೆಚ್ಚಿನ ವಿವರಗಳಿಗಾಗಿ ಸಂಘದ ಕಚೇರಿ ಅಥವಾ ಮೊಬೈಲ್ ಸಂಖ್ಯೆ 9980159696 / 8310876277 ಅನ್ನು ಸಂಪರ್ಕಿಸಬಹುದು ಎಂದು ಕರ್ನಾಟಕ ಸಂಘದ ಕಾರ್ಯದರ್ಶಿ ವಿನಯ್ ಶಿವಮೊಗ್ಗ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LATEST NEWS
- ಹಸಿದ ಚಿರತೆ ಮರಿ ರಕ್ಷಣೆ, ತಾಯಿ ಚಿರತೆಯ ಭೀತಿಯಲ್ಲಿ ಜನ, ಎಲ್ಲಿ? ಏನಿದು ಪ್ರಕರಣ?

- ನಗದು ತುಂಬಿದ್ದ ಪರ್ಸ್ ವಾರಸುದಾರರಿಗೆ ವಾಪಸ್, ಆಯನೂರು ನಿವಾಸಿಗಳ ಕಾರ್ಯಕ್ಕೆ ಮೆಚ್ಚುಗೆ

- ಬಿಆರ್ಪಿ ಲೆಜೆಂಡ್ಸ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಸ್ನೇಹ ಸಮ್ಮಿಲನ

- ನೆಹರು ರಸ್ತೆಯ ಸಭಾಂಗಣದಲ್ಲಿ ಒಂದು ದಿನದ ಕಾರ್ಯಾಗಾರ, ಯಾರೆಲ್ಲ ಬರ್ತಾರೆ? ಏನೆಲ್ಲ ಚರ್ಚೆಯಾಗಲಿದೆ?

- ಶಿವಮೊಗ್ಗ ಸಿಟಿಯ ಹಲವೆಡೆ ಜನವರಿ 29, 30ರಂದ ಅರ್ಧ ದಿನ ಕರೆಂಟ್ ಇರಲ್ಲ, ಎಲ್ಲೆಲ್ಲಿ? ಕಾರಣವೇನು?

About The Editor
ನಿತಿನ್ ಆರ್.ಕೈದೊಟ್ಲು





