ತಾಳಗುಪ್ಪದವರೆಗೆ ರೈಲು ವಿಸ್ತರಣೆ, ಸಂಸದರ ಮನವಿಗೆ ಮಿನಿಸ್ಟರ್‌ ಒಪ್ಪಿಗೆ, ಯಾವ ರೈಲು? ಯಾಕೆ?

ಶಿವಮೊಗ್ಗ: ಸಾಗರದಲ್ಲಿ ಮಾರಿಕಾಂಬ ದೇವಿ ಜಾತ್ರೆ ಹಿನ್ನೆಲೆ ಭಕ್ತರ ಅನುಕೂಲಕ್ಕಾಗಿ ಯಶವಂತಪುರ – ಶಿವಮೊಗ್ಗ ನಡುವೆ ಸಂಚರಿಸುವ ರಾತ್ರಿ ರೈಲನ್ನು (ರೈಲು ಸಂಖ್ಯೆ 16581/16582) ತಾಳಗುಪ್ಪದವರೆಗೆ ವಿಸ್ತರಿಸಲು ರೈಲ್ವೆ (Night Train) ಇಲಾಖೆ ಒಪ್ಪಿಗೆ ಸೂಚಿಸಿದೆ.

ಇದನ್ನೂ ಓದಿ – ಮಹಿಳೆಯರೆ ಎಚ್ಚರ, ಶಿವಮೊಗ್ಗ KSRTC ನಿಲ್ದಾಣದಲ್ಲಿ ಬಸ್‌ ಹತ್ತುವಾಗ ಹುಷಾರ್‌, ಆಗಿದ್ದೇನು?

Night-Train-from-Shivamogga

ಮಾರಿಕಾಂಬ ಜಾತ್ರೆಯು ಫೆಬ್ರವರಿ 3ರಿಂದ 11ರ ವರೆಗೆ ನಡೆಯಲಿದೆ. ಬೆಂಗಳೂರು ಸೇರಿದಂತೆ ವಿವಿಧೆಡೆ ನೆಲೆಸಿರುವ ಭಕ್ತರಿಗಾಗಿ ತಾಳಗುಪ್ಪದವರೆಗೆ ವಿಶೇಷ ರೈಲನ್ನು ಬಿಡುವಂತೆ ಸಂಸದ ಬಿ.ವೈ.ರಾಘವೇಂದ್ರ ಅವರು ರೈಲ್ವೆ ಸಚಿವ ವಿ.ಸೋಮಣ್ಣ ಅವರಿಗೆ ಮನವಿ ಸಲ್ಲಿಸಿದ್ದರು. ಮನವಿಗೆ ಸ್ಪಂದಿಸಿದ ಸಚಿವರು ವಿಶೇಷ ರೈಲು ವ್ಯವಸ್ಥೆಗೆ ಒಪ್ಪಿಗೆ ಸೂಚಿಸಿದ್ದಾರೆ.

Night-Train-at-Shimoga-railway-station.

ಯಶವಂತಪುರ ಮತ್ತು ಶಿವಮೊಗ್ಗ ನಡುವೆ ವಾರದಲ್ಲಿ ಮೂರು ದಿನ (ದಿನ ಬಿಟ್ಟು ದಿನ) ಸಂಚರಿಸುವ ಈ ರೈಲು, ಜಾತ್ರೆ ಅವಧಿಯಲ್ಲಿ ಫೆಬ್ರವರಿ 3 ರಿಂದ 11ರವರೆಗೆ ಪ್ರತಿದಿನ ತಾಳಗುಪ್ಪದವರೆಗೆ ಸಂಚರಿಸುವಂತೆ ವ್ಯವಸ್ಥೆ ಮಾಡಲು ಮನವಿ ಮಾಡಲಾಗಿದೆ. ಇದಕ್ಕೆ ಸಚಿವರು ಒಪ್ಪಿಕೊಂಡಿದ್ದಾರೆ. ಶೀಘ್ರವೆ ರೈಲ್ವೆ ಇಲಾಖೆ ಆದೇಶ ಹೊರಡಿಸಲಿದೆ. ಮಲೆನಾಡಿಗರು ಈ ಅವಕಾಶ ಬಳಸಿಕೊಳ್ಳುವಂತೆ ಸಂಸದ ಬಿ.ವೈ.ರಾಘವೇಂದ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Kalleshwara-Enterprises.webp
Total-Readers-of-Shivamogga-Live
ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ. ವಾಟ್ಸಪ್‌ ನಂಬರ್: 7411700200
Kalleshwara-Enterprises.webp

Leave a Comment