ಶಿವಮೊಗ್ಗ: ಬೆಂಗಳೂರಿಗೆ ಹೊರಡಬೇಕಿದ್ದ ಜನಶತಾಬ್ದಿ ಎಕ್ಸ್‌ಪ್ರೆಸ್ ರೈಲಿನ ಎಲೆಕ್ಟ್ರಿಕ್ ಇಂಜಿನ್‌ನಲ್ಲಿ ಗುರುವಾರ ಬೆಳಿಗ್ಗೆ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದರಿಂದ ರೈಲು ಸಂಚಾರ ಅರ್ಧ ಗಂಟೆ ತಡವಾಯಿತು.
ಬೆಳಿಗ್ಗೆ 5:15ಕ್ಕೆ ಹೊರಡಬೇಕಿದ್ದ ರೈಲಿನ ಇಂಜಿನ್‌ನಲ್ಲಿ ದೋಷ ಕಾಣಿಸಿಕೊಂಡಿದ. ರೈಲ್ವೆ ಇಲಾಖೆ ಸಿಬ್ಬಂದಿ ಪರಿಶೀಲನೆ ನಡೆಸಿದರು. ತಾಂತ್ರಿಕ ದೋಷ ಸರಿಪಡಿಸಲು ಸಾಧ್ಯವಾಗದ ಹಿನ್ನೆಲೆ, ಎಲೆಕ್ಟ್ರಿಕ್ ಇಂಜಿನ್ ಮುಂಭಾಗ ಡೀಸೆಲ್ ಇಂಜಿನ್ ಒಂದನ್ನು ಜೋಡಿಸಿ ರೈಲನ್ನು ಚಾಲನೆಗೊಳಿಸಲಾಯಿತು. ಸುದ್ದಿಯ ಮುಂದಿನ 1 ಪ್ಯಾರಾಗಳು ಕೆಳಗಿವೆ.
ಈ ತಾಂತ್ರಿಕ ಸಮಸ್ಯೆಯಿಂದಾಗಿ ನಿಗದಿತ ಸಮಯಕ್ಕಿಂತ ಅರ್ಧ ಗಂಟೆ ತಡವಾಗಿ ಜನಶತಾಬ್ದಿ ರೈಲು ಬೆಂಗಳೂರಿನತ್ತ ಪ್ರಯಾಣ ಬೆಳೆಸಿತು.
