ಇನ್ಮುಂದೆ ವಾಟ್ಸಪ್‌ ಬಳಕೆ ಮಾಡಲು ಹಣ ಪಾವತಿಸಬೇಕು, ಏನಿದು? ಕಾರಣವೇನು?

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

ಟೆಕ್‌ ನ್ಯೂಸ್‌: ಜನಪ್ರಿಯ ಮೆಸೇಜಿಂಗ್ ಆ್ಯಪ್ ವಾಟ್ಸಾಪ್ (WhatsApp) ಶೀಘ್ರದಲ್ಲೇ ಹಣ ಪಾವತಿಸಿ ಬಳಸುವ ಸಬ್‌ಸ್ಕ್ರಿಪ್ಷನ್ ಮಾಡೆಲ್  ಪರಿಚಯಿಸಲು ಸಿದ್ಧತೆ ನಡೆಸುತ್ತಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.

ಇತ್ತೀಚಿನ ಕೆಲವು ವರದಿಗಳ ಪ್ರಕಾರ, ವಾಟ್ಸಾಪ್‌ನ ಹೊಸ ವರ್ಷನ್‌ನ ಕೋಡ್‌ಗಳಲ್ಲಿ ಸಬ್‌ಸ್ಕ್ರಿಪ್ಷನ್ ಮಾದರಿಯ ಸೂಚನೆಗಳು ಕಂಡುಬಂದಿವೆ. ಅದರಂತೆ ಬಳಕೆದಾರರು ಸಬ್‌ಸ್ಕ್ರಿಪ್ಷನ್ ತೆಗೆದುಕೊಳ್ಳದಿದ್ದರೆ, ವಾಟ್ಸಾಪ್ ಸ್ಟೇಟಸ್ ಮತ್ತು ಚಾನೆಲ್ ವಿಭಾಗಗಳಲ್ಲಿ ಪದೇ ಪದೇ ಜಾಹೀರಾತುಗಳು ಕಾಣಿಸಿಕೊಳ್ಳಲಿವೆ. ಮೆಟಾ ಕಂಪನಿಯು ಈಗಾಗಲೇ ಈ ಜಾಹೀರಾತುಗಳ ಪರೀಕ್ಷೆ ನಡೆಸಿದೆ ಎಂದು ವರದಿಗಳಲ್ಲಿ ತಿಳಿಸಲಾಗಿದೆ. ಸುದ್ದಿಯ ಮುಂದಿನ 2 ಪ್ಯಾರಾಗಳು ಕೆಳಗಿವೆ.

JNNCE-COLLEGE-ADVT.

ಇದನ್ನೂ ಓದಿ – ಹೊಂಬುಜದಲ್ಲಿ ವಿಶೇಷ ಪೂಜೆ, ದಾಖಲೆ ಸೇರಿತು ಜಿನ ನಾಮಸ್ಮರಣೆ, ಏನಿದು?

whatsapp-general-image

ಜಾಹೀರಾತುಗಳ ಕಿರಿಕಿರಿ ಇಲ್ಲದೆ ವಾಟ್ಸಾಪ್ ಬಳಸಲು ಬಯಸುವವರು ಹಣ ನೀಡಿ ಸಬ್‌ಸ್ಕ್ರಿಪ್ಷನ್ ಪಡೆಯಬೇಕಾಗುತ್ತದೆ. ಸದ್ಯಕ್ಕೆ ಈ ಚಂದಾದಾರಾಗಲು ಬೆಲೆ ಎಷ್ಟು ಅಥವಾ ಈ ಫೀಚರ್‌ ಯಾವಾಗ ಜಾರಿಗೆ ಬರಲಿದೆ ಎಂಬ ಬಗ್ಗೆ ಮೆಟಾ ಕಂಪನಿಯಿಂದ ಸ್ಪಷ್ಟತೆ ಲಭ್ಯವಾಗಿಲ್ಲ. ಮುಂಬರುವ ದಿನಗಳಲ್ಲಿ ಜಾಹೀರಾತು ಸಹಿತ ಉಚಿತ ಆವೃತ್ತಿ ಮತ್ತು ಜಾಹೀರಾತು ರಹಿತ ಪಾವತಿ ಆವೃತ್ತಿ ಎಂಬ ಎರಡು ಆಯ್ಕೆಗಳು ಬಳಕೆದಾರರಿಗೆ ಲಭ್ಯವಾಗಲಿವೆ.

Shivamogga Live reached 2.8 million views in January-2026 - Editor : Nitin Kaidotlu

Leave a Comment