ಸಾಗರ: ಶ್ರೀ ಮಾರಿಕಾಂಬ ಜಾತ್ರೆಯು (Marikamba Jatre) ಬುಧವಾರ ಅಮ್ಮನವರನ್ನು ವನಕ್ಕೆ ಬಿಡುವ ಶಾಸ್ತ್ರದ ಮೂಲಕ ಸಂಪನ್ನಗೊಳ್ಳಲಿದೆ. ಇದಕ್ಕಾಗಿ ನ್ಯಾಸ ಪ್ರತಿಷ್ಠಾನ ಪೂರ್ವ ಸಿದ್ಧತೆ ಮಾಡಿಕೊಂಡಿದೆ. ಅಮ್ಮನವರನ್ನು ವನಕ್ಕೆ ಬಿಡುವ ಶಾಸ್ತ್ರದ ಹಿನ್ನೆಲೆ ಒಂದಷ್ಟು ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಕೆಲವು ಸೂಚನೆಗಳನ್ನು ನೀಡಿದೆ.
ಎಲ್ಲ ರೀತಿಯ ಪಾಸ್ಗಳು ಬುಧವಾರ ಮಧ್ಯಾಹ್ನ 2ರೊಳಗೆ ಮುಕ್ತಾಯಗೊಳ್ಳುತ್ತವೆ. ರಥ ನಿಲ್ಲಿಸುವುದರಿಂದ ಸುತ್ತಮುತ್ತಲಿನ ಬ್ಯಾರಿಕೇಡ್ ತೆರವು ಮಾಡಲಾಗುತ್ತದೆ. ಪೂಜಾ ಸಮಿತಿ, ರಥೋತ್ಸವ ಸಮಿತಿಯವರು ಬಿಟ್ಟರೆ ಯಾರಿಗೂ ಅವಕಾಶ ಇಲ್ಲ ಎಂದು ಡಿವೈಎಸ್ಪಿ ಡಾ. ಬೆನಕ ಪ್ರಸಾದ್ ತಿಳಿಸಿದರು.

ಪ್ರತಿಷ್ಠಾನದ ಅಧ್ಯಕ್ಷ ಕೆ.ಎನ್.ನಾಗೇಂದ್ರ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಬಿ.ಗಿರಿಧರ ರಾವ್, ರಥೋತ್ಸವ ಸಮಿತಿಯ ಕೆ.ಸಿ.ನವೀನ್, ವಿವಿಧ ಸಮಿತಿ ಸಂಚಾಲಕರು ಉಪಸಿತರಿದ್ದರು.
ಇದನ್ನೂ ಓದಿ – ಆಗುಂಬೆ ಘಾಟಿ ಸುರಂಗ ಮಾರ್ಗ, ಮಹತ್ವದ ನಿರ್ಧಾರ ಪ್ರಕಟ, ಏನಂದ್ರು ಸಂಸದ ರಾಘವೇಂದ್ರ?







