ಇನ್ಮುಂದೆ ಹೊಸ ಲುಕ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಶಿವಮೊಗ್ಗ ಪೊಲೀಸ್‌, ಏನಿದು?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ: ಜಿಲ್ಲೆಯ ಹೆಡ್‌ ಕಾನ್‌ಸ್ಟೇಬಲ್‌ ಮತ್ತು ಕಾನ್‌ಸ್ಟೇಬಲ್‌ಗಳು ಇನ್ಮುಂದೆ ಸ್ಲೋಚ್ ಹ್ಯಾಟ್ ಬದಲು ನೇವಿ ಬ್ಲೂ ಬಣ್ಣದ ಪಿ-ಕ್ಯಾಪ್‌ (P-caps) ಧರಿಸಿ ಕೆಲಸ ನಿರ್ವಹಿಸಲಿದ್ದಾರೆ. ಇವತ್ತು ಡಿ.ಎ.ಆರ್ ಪೊಲೀಸ್ ಕವಾಯತು ಮೈದಾನದಲ್ಲಿ ಸಾಂಕೇತಿಕವಾಗಿ ಪಿ-ಕ್ಯಾಪ್‌ಗಳ ವಿತರಣೆ ಮಾಡಲಾಯಿತು.

ಜಿಲ್ಲಾ ರಕ್ಷಣಾಧಿಕಾರಿ ನಿಖಿಲ್.ಬಿ ಅವರು ಪೊಲೀಸ್ ಸಿಬ್ಬಂದಿಗೆ ಪಿ-ಕ್ಯಾಪ್‌ಗಳನ್ನು ವಿತರಿಸಿದರು.

250 ಪೊಲೀಸರಿಗೆ ಪಿ-ಕ್ಯಾಪ್‌

ಜಿಲ್ಲೆಯಲ್ಲಿ ಒಟ್ಟು 2,100 ಪೊಲೀಸ್ ಸಿಬ್ಬಂದಿಯಿದ್ದು, ಮೊದಲ ಹಂತದಲ್ಲಿ ಇಂದು 250 ಸಿಬ್ಬಂದಿಗೆ ಸಾಂಕೇತಿಕವಾಗಿ ಕ್ಯಾಪ್‌ಗಳನ್ನು ವಿತರಿಸಲಾಯಿತು. ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳು, ಜಿಲ್ಲಾ ಸಶಸ್ತ್ರ ಮೀಸಲು ಪಡೆ, ನಿಸ್ತಂತು ಘಟಕ ಹಾಗೂ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಹೆಡ್‌ ಕಾನ್‌ಸ್ಟೇಬಲ್‌ ಹಾಗೂ ಕಾನ್‌ಸ್ಟೇಬಲ್‌ಗಳಿಗೆ ಕ್ಯಾಪ್‌ಗಳನ್ನು ನೀಡಲಾಯಿತು.

p-cap-for-Shimoga-police.

ಈ ಸಂದರ್ಭ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಕಾರಿಯಪ್ಪ ಎ.ಜಿ, ರಮೇಶ್ ಕುಮಾರ್.ಎಸ್ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

ಏಳು ದಶಕದ ಬಳಿಕ ಬದಲಾವಣೆ

ರಾಜ್ಯ ಪೊಲೀಸ್ ಇಲಾಖೆ ರಚನೆಯಾದಾಗಿನಿಂದ ಕಾನ್ಸ್‌ಟೇಬಲ್ ಮತ್ತು ಹೆಡ್ ಕಾನ್ಸ್‌ಟೇಬಲ್‌ಗಳು ಸ್ಲೋಚ್ ಹ್ಯಾಟ್ ಧರಿಸುತ್ತಿದ್ದರು. ಇದು ಬ್ರಿಟಿಷ್ ಕಾಲದ ವಿನ್ಯಾಸವಾಗಿತ್ತು. 70 ವರ್ಷದ ಬಳಿಕ ಹಳೆಯ ಕ್ಯಾಪ್‌ ಬದಲಿಸಿ, ಆಧುನಿಕ ಸ್ಪರ್ಶ ನೀಡಲು ಸರ್ಕಾರ ನಿರ್ಧರಿಸಿತು.

ಪೊಲೀಸ್ ಸಮವಸ್ತ್ರದಲ್ಲಿ ಸುಧಾರಣೆ ತರಲು ಹಿರಿಯ ಅಧಿಕಾರಿಗಳನ್ನು ಒಳಗೊಂಡ ಸಮಿತಿ ರಚಿಸಲಾಗಿತ್ತು. ಈ ಸಮಿತಿಯು ವಿವಿಧ ರಾಜ್ಯಗಳ ಪೊಲೀಸ್ ಸಮವಸ್ತ್ರ ಪರಿಶೀಲಿಸಿತು. ಕೊನೆಗೆ ತೆಲಂಗಾಣ ಮಾದರಿಯ ಪಿ-ಕ್ಯಾಪ್ ಹೆಚ್ಚು ಸೂಕ್ತ ಎಂದು ನಿರ್ಧರಿಸಲಾಯಿತು.

ಸಿಎಂ ಸಿದ್ದರಾಮಯ್ಯ ಆಸಕ್ತಿ

ಈ ಬದಲಾವಣೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೆಚ್ಚು ಆಸಕ್ತಿ ವಹಿಸಿದ್ದರು. ಗೃಹ ಇಲಾಖೆಯ ಸಭೆಗಳಲ್ಲಿ ಸಿಬ್ಬಂದಿಯ ಹಿತದೃಷ್ಟಿಯಿಂದ ಹಗುರವಾದ ಮತ್ತು ಸ್ಮಾರ್ಟ್ ಆಗಿರುವ ಟೋಪಿಗಳನ್ನು ನೀಡುವಂತೆ ಸೂಚಿಸಿದ್ದರು. ಹಲವು ಮಾದರಿಗಳನ್ನು ಪರಿಶೀಲಿಸಿದ ನಂತರ, ಗಾಢ ನೀಲಿ ಬಣ್ಣದ ಪಿ-ಕ್ಯಾಪ್‌ಗೆ ಅವರು ಅಂತಿಮವಾಗಿ ಅಂಕಿತ ಹಾಕಿದರು.

pcap3

ಸಂಪೂರ್ಣ ರಾಜ್ಯಕ್ಕೆ ಅನ್ವಯಿಸುವ ಮೊದಲು, ಕೆಲವು ನಿರ್ದಿಷ್ಟ ತುಕಡಿಗಳಿಗೆ ಇದನ್ನು ಪ್ರಾಯೋಗಿಕವಾಗಿ ನೀಡಲಾಯಿತು. 2025ರ ಅಕ್ಟೋಬರ್‌ನಲ್ಲಿ ಕಾನ್‌ಸ್ಟೇಬಲ್‌ಗಳು ಮತ್ತು ಹೆಡ್‌ ಕಾನ್‌ಸ್ಟೇಬಲ್‌ಗಳಿಗೆ ಪಿ-ಕ್ಯಾಪ್‌ ವಿತರಣೆ ಮಾಡಲಾಯಿತು. ಸಿಬ್ಬಂದಿಯಿಂದ ಸಕಾರಾತ್ಮಕ ಪ್ರತಿಕ್ರಿಯೆ ಬಂದ ನಂತರ, ರಾಜ್ಯದ ಸುಮಾರು 80,000ಕ್ಕೂ ಹೆಚ್ಚು ಕಾನ್ಸ್‌ಟೇಬಲ್ ಮತ್ತು ಹೆಡ್ ಕಾನ್ಸ್‌ಟೇಬಲ್‌ಗಳಿಗೆ ಇದನ್ನು ಹಂತ ಹಂತವಾಗಿ ವಿತರಿಸಲು ಆದೇಶ ಹೊರಡಿಸಲಾಯಿತು.

pcap2

ಶಿವಮೊಗ್ಗಕ್ಕೆ ಇದೇ ಮೊದಲಲ್ಲ ಶಿವಮೊಗ್ಗದ ಮಾಚೇನಹಳ್ಳಿಯಲ್ಲಿರುವ ಕೆಎಸ್‌ಆರ್‌ಪಿ 8ನೇ ಪಡೆಯ ಹೆಡ್‌ ಕಾನ್‌ಸ್ಟೇಬಲ್‌ ಮತ್ತು ಕಾನ್‌ಸ್ಟೇಬಲ್‌ಗಳಿಗೆ 2025ರ ನವೆಂಬರ್‌ ತಿಂಗಳಿನಲ್ಲಿ ನೇವಿ ಬ್ಲೂ ಪಿ-ಕ್ಯಾಪ್‌ಗಳನ್ನು ವಿತರಿಸಲಾಗಿತ್ತು. ಪಿ-ಕ್ಯಾಪ್‌ಗಳನ್ನು ಧರಿಸಿಯೇ ಅವರು ಶಿವಮೊಗ್ಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಈಗ ಸಿವಿಲ್‌ ಮತ್ತು ಡಿಎಆರ್‌ ಸಿಬ್ಬಂದಿಗು ಪಿ-ಕ್ಯಾಪ್‌ ವಿತರಿಸಲಾಗಿದೆ.

pcap1

ಇದನ್ನೂ ಓದಿ – ಬಿಜೆಪಿ ನಾಯಕನಿಗೆ ಸಚಿವ ದರ್ಜೆ ಸ್ಥಾನಮಾನ ನೀಡಿದ ಕಾಂಗ್ರೆಸ್‌ ಸರ್ಕಾರ, ಕೆಂಡವಾದ ಕೈ ಕಾರ್ಯಕರ್ತರು, ಏನಿದು?

ಕಡಿಮೆ ಬಡ್ಡಿಯಲ್ಲಿ ಗೃಹ ಸಾಲ

HOME LOAN SERVICES
ನಿಮ್ಮ ಸ್ವಂತ ಮನೆಯ ಕನಸು ಈಗ ನನಸು!

🏠 ಮನೆ ಕಟ್ಟಲು ಅಥವಾ ಸೈಟ್ ಖರೀದಿಸಲು ಸಾಲ

✅ ಅತೀ ಕಡಿಮೆ ಬಡ್ಡಿ ದರ
✅ ತ್ವರಿತ ಸಾಲ ಮಂಜೂರಾತಿ
✅ ಸುಲಭ ಮರುಪಾವತಿ ಕಂತುಗಳು

ಇಂದೇ ಸಂಪರ್ಕಿಸಿ:


📞 99721 94422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment