ಬೇಳೂರು ಗೋಪಾಲಕೃಷ್ಣಗೆ ಸರ್ಕಾರದಲ್ಲಿ ಪ್ರಮುಖ ಜವಾಬ್ದಾರಿ, ಸಿಎಂಗೆ ಹೈಕಮಾಂಡ್‌ನಿಂದ ಲಿಸ್ಟ್‌ ರವಾನೆ

ಬೆಂಗಳೂರು: ಸಚಿವ ಸ್ಥಾನ ಕೈತಪ್ಪಿದ್ದರಿಂದ ಅಸಮಾಧನಗೊಂಡಿದ್ದ ಶಾಸಕ ಬೇಳೂರು ಗೋಪಾಲಕೃಷ್ಣ ಅವರಿಗೆ ಸರ್ಕಾರದಲ್ಲಿ ಪ್ರಮುಖ ಜವಾಬ್ದಾರಿ ನೀಡಲಾಗುತ್ತಿದೆ. ಈ ಸಂಬಂಧ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್‌ ಅವರು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರಿಗೆ ಬರೆದಿರುವ ಪತ್ರದಲ್ಲಿ ಸೂಚಿಸಿದ್ದಾರೆ. (ಈ ಸುದ್ದಿಯನ್ನು ಇನ್ನು 40 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)

ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ ಅವರನ್ನು ವಿಧಾನಸಭೆಯ ಮುಖ್ಯ ಸಚೇತಕರಾಗಿ ನೇಮಿಸುವಂತೆ ಸೂಚನೆ ನೀಡಲಾಗಿದೆ. ಸಂಸತ್ತು ಅಥವಾ ವಿಧಾನಮಂಡಲದಲ್ಲಿ ರಾಜಕೀಯ ಪಕ್ಷದ ಸದಸ್ಯರ ಶಿಸ್ತು, ಹಾಜರಾತಿ ಮತ್ತು ಮತದಾನವನ್ನು ನಿರ್ವಹಿಸುವುದು ಸಚೇತಕರ ಜವಾಬ್ದಾರಿ. ಪಕ್ಷದ ಸೂಚನೆಯಂತೆ ಸದಸ್ಯರು ಮತ ಚಲಾಯಿಸುವಂತೆ ನೋಡಿಕೊಳ್ಳುವುದು ಇವರ ಪ್ರಮುಖ ಜವಾಬ್ದಾರಿಯಾಗಿರುತ್ತದೆ.

Beluru-Gopalakrishna-in-a-press-meet

ಬೇಳೂರು ಗೋಪಾಲಕೃಷ್ಣ ಅವರು ಈತನಕ ರಾಜ್ಯ ಅರಣ್ಯ ಕೈಗಾರಿಕೆ ನಿಗಮದ ಅಧ್ಯಕ್ಷರಾಗಿದ್ದರು. ಎರಡು ವರ್ಷ ಅವಧಿ ಪೂರ್ಣಗೊಂಡ ಹಿನ್ನೆಲೆ ಈಚೆಗೆ ಜವಾಬ್ದಾರಿಯಿಂದ ಕೈಬಿಡಲಾಗಿತ್ತು. ಈಗ ವಿಧಾನಸಭೆಯ ಮುಖ್ಯ ಸಚೇತಕರಾಗಿ ನೇಮಿಸಲು ಪಕ್ಷ ಆದೇಶಿಸಿದೆ. ಇದೇ ವೇಳೆ ವಿವಿಧ ನಿಗಮ ಮಂಡಗಳಿಗೆ ಅಧ್ಯಕ್ಷರುಗಳನ್ನು ನೇಮಕ ಮಾಡುವಂತೆಯು ಪತ್ರದಲ್ಲಿ ಸೂಚಿಸಲಾಗಿದೆ. ಸರ್ಕಾರದ ಅಧಿಕೃತ ಆದೇಶ ಇನ್ನಷ್ಟೆ ಬರಬೇಕಿದೆ.

ಗೂಗಲ್‌ನಲ್ಲಿ ಶಿವಮೊಗ್ಗ ಲೈವ್ ಸುದ್ದಿಗಳು ನಿಮಗೆ ಮೊದಲು ಸಿಗಬೇಕೆ? ಕೆಳಗಿನ ಬಟನ್ ಒತ್ತಿ: