ಸೊರಬ: ಜಿರಲೆಕೊಪ್ಪ ಗ್ರಾಮದಲ್ಲಿ ಕೊಟ್ಟಿಗೆಗೆ ನುಗ್ಗಿದ ಕಳ್ಳರು ಸುಮಾರು ₹80,000 ಮೌಲ್ಯದ ಎರಡು ಜರ್ಸಿ ಹಸುಗಳನ್ನು (Jersey cows) ಅಪಹರಿಸಿದ್ದಾರೆ.
ಜಿರಲೆಕೊಪ್ಪ ಲೋಕೇಶ್ ಕುಮಾರ್ ಎಂಬುವವರು ರಾತ್ರಿ ತಮ್ಮ ಹಸುಗಳನ್ನು ಕೊಟ್ಟಿಗೆಯಲ್ಲಿ ಕಟ್ಟಿ ಮನೆಗೆ ತೆರಳಿದ್ದರು. ಗದ್ದೆ ಕಾಯುತ್ತಿದ್ದ ವ್ಯಕ್ತಿಯೊಬ್ಬರು ಲೋಕೇಶ್ ಅವರ ತಂದೆ ಕೃಷ್ಣಮೂರ್ತಿಯವರಿಗೆ ಫೋನ್ ಮಾಡಿ, ನಿಮ್ಮ ಗದ್ದೆಯ ಕಡೆಯಿಂದ ಅಶೋಕ್ ಲೈಲ್ಯಾಂಡ್ ವಾಹನವೊಂದು ಅತಿ ವೇಗವಾಗಿ ಹೋಗುತ್ತಿದೆ, ಯಾಕೋ ಅನುಮಾನ ಬರುತ್ತಿದೆ ಎಂದು ತಿಳಿಸಿದ್ದಾರೆ.

ತಕ್ಷಣ ಲೋಕೇಶ್ ಮತ್ತು ಅವರ ತಂದೆ ಕೊಟ್ಟಿಗೆಗೆ ತೆರಳಿ ನೋಡಿದಾಗ ಎರಡು ಜರ್ಸಿ ಹಸುಗಳು ನಾಪತ್ತೆಯಾಗಿದ್ದವು. ಕೊಟ್ಟಿಗೆಯಲ್ಲಿ ಕರು ಮಾತ್ರ ಉಳಿದಿತ್ತು. ಘಟನೆ ಸಂಬಂಧ ಸೊರಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ – ಬಿಜೆಪಿ ನಾಯಕನಿಗೆ ಸಚಿವ ದರ್ಜೆ ಸ್ಥಾನಮಾನ ನೀಡಿದ ಕಾಂಗ್ರೆಸ್ ಸರ್ಕಾರ, ಕೆಂಡವಾದ ಕೈ ಕಾರ್ಯಕರ್ತರು, ಏನಿದು?







