ದುರ್ಗಿಗುಡಿಯಲ್ಲಿ ವೈಭವದ ರಥೋತ್ಸವ, ಈ ಬಾರಿ ಉತ್ಸವ ಬೆಳಗ್ಗೆ ನಡೆದಿದ್ದೇಕೆ?

SHIMOGA : ದುರ್ಗಿಗುಡಿಯ ಶ್ರೀ ದುರ್ಗಮ್ಮ, ಶ್ರೀ ಮರಿಯಮ್ಮ ದೇವರ ಜಾತ್ರೆ ವಿಜೃಂಭಣೆಯಿಂದ ನೆರವೇರಿತು. ಚಂದ್ರಗ್ರಹಣ ಹಿನ್ನಲೆ ಈ ಬಾರಿ ಬೆಳಗ್ಗೆ ರಥೋತ್ಸವ (Rathotsava) ನೆರವೇರಿಸಲಾಯಿತು. ಮಧ್ಯಾಹ್ನದವರೆಗೆ ದುರ್ಗಿಗುಡಿ ಮುಖ್ಯ ರಸ್ತೆಯಲ್ಲಿ ರಥವನ್ನು ನಿಲ್ಲಿಸಲಾಗುತ್ತದೆ. (ಈ ಸುದ್ದಿಯನ್ನು ಇನ್ನು 48 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)

ವೈಭವದ ರಥೋತ್ಸವ

Durgigudi-Ratotsava-in-Shimoga

ಜಾತ್ರೆ ಅಂಗವಾಗಿ ದೇವಸ್ಥಾನದಲ್ಲಿ ವಿಶೇಷ ಪೂಜೆ ನಡೆಯಿತು. ಬಳಿಕ ಪಲ್ಲಕ್ಕಿಯಲ್ಲಿ ದೇವರನ್ನು ತಂದು ರಥದಲ್ಲಿ ಇರಿಸಿ ಪೂಜೆ ಸಲ್ಲಿಸಲಾಯಿತು. ಬಳಿಕ ದೇಗುಲದ ಮುಂಭಾಗದಿಂದ ದುರ್ಗಿಗುಡಿ ಮುಖ್ಯರಸ್ತೆವರೆಗೆ ಭಕ್ತರು ರಥವನ್ನು ಎಳೆದು ದೇವರ ಆಶೀರ್ವಾದ ಬೇಡಿದರು.

Durgigudi-Ratotsava-in-Shimoga

ಚಂದ್ರಗ್ರಹಣ ಹಿನ್ನೆಲೆ ಬೇಗ ರಥೋತ್ಸವ

ಶ್ರೀ ದುರ್ಗಮ್ಮ, ಶ್ರೀ ಮರಿಯಮ್ಮ ದೇವಿ ರಥೋತ್ಸವವು ಸಾಮಾನ್ಯವಾಗಿ ಮಧ್ಯಾಹ್ನ ಹೊತ್ತಿಗೆ ನಡೆಯುತ್ತದೆ. ಆದರೆ ಇವತ್ತು ಚಂದ್ರಗ್ರಹಣ ಹಿನ್ನೆಲೆ ಈ ಬಾರಿ ಬೆಳಗ್ಗೆ ರಥೋತ್ಸವ ನಡೆಯಿತು. ಮಧ್ಯಾಹ್ನ 1.30ರವರೆಗೆ ರಥವು ದುರ್ಗಿಗುಡಿ ಮುಖ್ಯರಸ್ತೆಯಲ್ಲಿ ನಿಲ್ಲಲಿದೆ. ಭಕ್ತರು ಇಲ್ಲಿಯೇ ಬಂದು ದೇವರಿಗೆ ಪೂಜೆ ಸಲ್ಲಿಸಿ, ಹಣ್ಣು ಕಾಯಿ ಮಾಡಿಸಿಬಹುದಾಗಿದೆ. ರಥೋತ್ಸವದ ಸಂದರ್ಭ ಅನ್ನಸಂತರ್ಪಣೆ, ನೀರು, ಪಾನಕ ವಿತರಣೆ ಮಾಡಲಾಯಿತು.

ನೀವು ಲೇಖನದ ಮಧ್ಯಭಾಗದಲ್ಲಿದ್ದೀರಿ. ಈ ಸುದ್ದಿಯ ಮುಂದಿನ 2 ಪ್ಯಾರಾಗಳು ಕೆಳಗಿವೆ

ಇನ್ನು, ಶ್ರೀ ದುರ್ಗಮ್ಮ, ಶ್ರೀ ಮರಿಯಮ್ಮ ದೇವರ ರಥೋತ್ಸವದ ಬಳಿಕವೇ ಶಿವಮೊಗ್ಗ ನಗರದಲ್ಲಿ ಹೋಳಿ ಹಬ್ಬ ಆಚರಿಸುವುದು ವಾಡಿಕೆ.

ಇದನ್ನೂ ಓದಿ – ₹1,00,000 ಲಂಚದ ಹಣದೊಂದಿಗೆ ಲೋಕಾಯುಕ್ತರಿಗೆ ಸಿಕ್ಕಿಬಿದ್ದ ಅಧಿಕಾರಿ, ಮಧ್ಯವರ್ತಿ

ಗೂಗಲ್‌ನಲ್ಲಿ ಶಿವಮೊಗ್ಗ ಲೈವ್ ಸುದ್ದಿಗಳು ನಿಮಗೆ ಮೊದಲು ಸಿಗಬೇಕೆ? ಕೆಳಗಿನ ಬಟನ್ ಒತ್ತಿ:

Sunrise Facility Services, Sri sai Trust Shimoga

Leave a Comment